ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ, ಅವರನ್ನು ಈ ಬಾರಿ ಗೆಲ್ಲಿಸುವುದು ಅಗತ್ಯವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದ ಅವರು, ದೇವೇಗೌಡರ ಭಾಷಣಕ್ಕಾಗಿ ಕುಣಿದು ಕುಪ್ಪಳಿಸುತ್ತಿದ್ದೀರಿ. ನಿಮ್ಮನ್ನ ನೋಡಿದಾಗ ನನ್ನ ಕಣ್ಣಲ್ಲಿ ಆನಂದ ಭಾಷ್ಪ ಬರುತ್ತಿದೆ. ಪುಟ್ಟರಾಜು ಅವರನ್ನ ಸೋಲಿಸಲು ಯಾರು ಏನ್ಮಾಡಿದ್ರು, ಮುಂದೆ ಏನ್ಮಾಡ್ತಿದ್ದಾರೆ ಎಲ್ಲವೂ ಗೊತ್ತಿದೆ ನನಗೆ. ನಾನು ಯಾರ ಹೆಸರನ್ನ ಹೇಳಲ್ಲ. ಪುಟ್ಟರಾಜು ಸೋಲಿಸಲು ಅನೇಕರು ಶ್ರಮಿಸ್ತಿದ್ದಾರೆ. ಇದನ್ನ ನೀವೆಲ್ಲ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಈ 90ನೇ ವಯಸ್ಸಿನಲ್ಲಿ ಯಾರಿಗೋಷ್ಕರ ಹೋರಾಟ. ಈ ಬಗ್ಗೆ ದೆಹಲಿಯಲ್ಲಿ ಮಾತಾಡಿದ್ದೇನೆ.
ಇಂದಿರಾಗಾಂಧಿ ಕೂಡ ಕೊಡಲಿಲ್ಲ. ಎಲ್ಲಾ ಪಂಚಾಯಿತಿಯಲ್ಲೂ ಮಹಿಳೆಯರು, ಎಲ್ಲಾ ವರ್ಗದವರಿಗೆ ಮೀಸಲಾತಿ ಕೊಟ್ಟಿದ್ದು ಈ ದೇವೇಗೌಡ. ಈದ್ಗಾ ಮೈದಾನ ಸಮಸ್ಯೆ ಸರಿಪಡಿಸಿದ್ದು ಯಾರು ಹೇಳಿ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸ್ತಿದ್ದಾರೆ. 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ರೈತನ ಮಗ ಹಿಂದೂಸ್ತಾನದಲ್ಲಿ ಯಾರಾದ್ರು ಇದ್ದರೇ ಹೇಳಿ. ನುಡಿದಂತೆ ನಡೆದ ಮುಖ್ಯಮಂತ್ರಿ ಯಾರಾದ್ರೂ ಇದ್ರೆ ನಿಮ್ಮ ಕುಮಾರಣ್ಣ. ರೈತರ ಹೆಸರಲ್ಲಿ ಪಂಜಾಬಲ್ಲಿ ವಿಶೇಷ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳ್ಳಿ. ನಾವೆಲ್ಲಾ ರೈತರ ಮಕ್ಕಳು. ಪುಟ್ಟರಾಜು ಸೋಲಿಸಲಿಕ್ಕೆ ಹೊಸ ರಾಜಕೀಯ. ಮತ್ತೊಂದು ಹೈಡ್ರಾಮ. ಈ ನಾಟಕಗಳಿಗೆ ಮಾರು ಹೋಗಬಾರದು. ಸಮಸ್ತ ಜನರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ.
ಕೆ.ಆರ್.ನಗರ ಸೇರಿ ಎಂಟಕ್ಕೆ ಎಂಟು ಸ್ಥಾನ ಗೆಲ್ಲಲೇಬೇಕು ಎಂದರು.
ನನ್ನನ್ನ ಮುಖ್ಯಮಂತ್ರಿ ಮಾಡಿದ ಜಿಲ್ಲೆ ಇದು. ನಾನು ಮಂಡ್ಯವನ್ನ ಎಂದೂ ಮರೆಯೋದಿಲ್ಲ.
ಪುಟ್ಟರಾಜು ಸೋಲಿಸಲು ಕುತಂತ್ರ ನಡೀತ್ತಿದೆ. 13ನೇ ತಾರೀಖು ಪುಟ್ಟರಾಜು ಗೆಲ್ಲಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಆಶೀರ್ವಾದ ಮಾಡಿ. ಕುಮಾರಸ್ವಾಮಿ ಘೋಷಿಸಿರುವ ಎಲ್ಲಾ ಯೋಜನೆಗಳು ಕಾರ್ಯಗತ ಆಗಬೇಕು. 13ನೇ ತಾರೀಖು ಕುಮಾರಣ್ಣ ಮುಖ್ಯಮಂತ್ರಿಯಾಗೋದನ್ನ ತಡೆಯಲು ಯಾರಿಂದಲೂ ಆಗಲ್ಲ, ಸಾಧ್ಯವೂ ಇಲ್ಲ ಎಂದು ಹೇಳಿದರು.




