Sunday, March 3, 2024

ಪ್ರಾಯೋಗಿಕ ಆವೃತ್ತಿ

ಜಾತಿಗಣತಿಯ ಮೂಲಪ್ರತಿ ಕಾಣಿಯಾಗಿದೆ, ಹೀಗಿರುವಾಗ ಹೇಗೆ ವರದಿ ಜಾರಿ ಮಾಡ್ತಾರೆ: ಹೆಚ್.ಡಿ.ಕುಮಾರಸ್ವಾಮಿ

ಜಾತಿಗಣತಿಯ ಮೂಲ ಪ್ರತಿ ಕಳುವಾಗಿದೆ ಎಂಬ ಮಾಹಿತಿ ಇದೆ, ಹೀಗಿರುವಾಗ ಹೇಗೆ ವರದಿ ಜಾರಿ ಮಾಡ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಡ್ಯನಗರದ ಅಮರಾವತಿ ಹೋಟೇಲ್ ಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅವ್ರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ಪಡೆಯೋದಾಗಿ ಹೇಳಿದ್ದಾರೆ. ಈಗಾಗಲೇ ಮಾಧ್ಯಮದಲ್ಲಿ ಕಾಂತರಾಜು ಅವ್ರ ಮೂಲ ಪ್ರತಿ ಕಾಣೆಯಾಗಿದೆ ಅಂತ ಬಂದಿದೆ, ಹೀಗಿರುವಾಗ ಹೇಗೆ ಜಾರಿ ಮಾಡ್ತಾರೆ ಎಂದರು.

ಪದೇ ಪದೇ ಕಾಂತರಾಜು ವರದಿಯನ್ನ ಕುಮಾರಸ್ವಾಮಿ ತಿರಸ್ಕರಿಸಿದರು ಅಂತ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನ್ನ ಕಾಲದಲ್ಲಿ ಕಾಂತರಾಜು ವರದಿ ಪಡಿಲಿಲ್ಲ, ಸರಿ ಈ 6 ತಿಂಗಳ ಅವಧಿಯಲ್ಲಿ ಇವ್ರು ಒಪ್ಪಿಗೆ ಕೊಡಲು ಏನಾಗಿತ್ತು.? ಕಾಂತರಾಜು ವರದಿಗೆ ಅಂದಿನ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲಾ‌ ಮಕ್ಕಳಿಂದ ಸಹಿ ಹಾಕಿಸಿಕೊಂಡು ಅವ್ರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ವರದಿ ಅನ್ನೋದು ಜಗಜಾಹೀರಾಗಿದೆ ಎಂದು ದೂರಿದರು.

ಹರಿಬಿರಿಯಲ್ಲಿ ಅವ್ರ ರಾಷ್ಟ್ರೀಯ ನಾಯಕರ ಆಸೆ ಈಡೇರಿಸಲು, ವರದಿ ತೆಗೆದುಕೊಳ್ಳಲು ರೆಡಿ ಅಂತ ಸಿಎಂ ಹೇಳಿದ್ದಾರೆ. ಮೂಲ ಪ್ರತಿ ಕಳ್ಳತನ ಆದ್ಮೇಲೆ ಹೇಗೆ ಜಾರಿ ಮಾಡ್ತಾರೆ. ಕಾಂತರಾಜು ವರದಿ ಸಿದ್ದವಾಗಿ 1೦ ವರ್ಷವಾಗಿದೆ.ಈ 10 ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಕಾಂತರಾಜು ವರದಿಯನ್ನ ಮನೆಯಲ್ಲಿ ಕೂತು ವರದಿ ಮಾಡಿದ್ರೋ ಅಥವಾ ಸಿಎಂ ಅವ್ರೆ ಕುಳಿತು ವರದಿ ಮಾಡಿಸಿದ್ರೋ ಗೊತ್ತಿಲ್ಲ. ಇವತ್ತು ಈ ವರದಿ ಬಗ್ಗೆ ಹಲವಾರು ಸಮಾಜದಲ್ಲಿ ಅನುಮಾನ ಇದೆ. ಅವತ್ತು ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ ಇದನ್ನ ಹೇಗೆ ಎಕ್ಸೆಪ್ಟ್ ಮಾಡೋದು.? ಸಹಿ ಹಾಕದೆ ಇರಲ್ಲು ಕಾರಣವೇನು ? ಪ್ರಶ್ನಿಸಿದರು.

ಸಮಾಜವನ್ನ ಹೊಡೆಯುವ ಉದ್ದೇಶ ಇಟ್ಕೊಂಡು ಹೊರಟಿದ್ದೀರಿ, ಇದರ ಫಲ ಹುಣ್ಣಬೇಕಾಗತ್ತೆ, ಯಾವ ವರದಿ ಕೊಡ್ತಾರೆ, ಯಾವ ವರದಿ ವಿಧಾನಸಭೆಯಲ್ಲಿ ಇಡ್ತಾರೆ ವಿಧಾನ ಸಭಾ ಕಲಾಪದಲ್ಲಿ ಇದ್ರ ಬಗ್ಗೆ ಚೆರ್ಚೆ ಮಾಡೋಣ. ಜಾತಿಯ ಹೆಸ್ರಿನಿಂದ ನಾನು ವಿರೋಧ ವ್ಯಕ್ತಪಡಿಸಲ್ಲ. ಸುಳ್ಳೆ ನಮ್ ಮನೆ ದೇವ್ರು ಅಂತಾರೆ. ಇವ್ರೆಲ್ಲ ಸತ್ಯಹರಿಶ್ಚಂದ್ರನ ವಂಶದವ್ರಾ? ಸ್ವಾಮಿಜಿಯವರ ನೇತೃತ್ವದಲ್ಲಿ ಸಿದ್ದವಾಗಿರುವ ಮನವಿಗೆ ಪಾಪ ಎಲ್ಲರೂ ಸಹಿ ಹಾಕಿದ್ದಾರೆ ಎಂದರು.

ಬಿಜೆಪಿಗರು ಹೇಳಿದ್ರೆ ಕುಮಾರಸ್ವಾಮಿ ಚೆಡ್ಡಿಯನ್ನ ಬೇಕಾದ್ರು ಹಾಕ್ತರೆ, ದತ್ತಮಾಲೆಯನ್ನ ಬೇಕಾದ್ರು ಹಾಕ್ತರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿದ್ರೆ ಚಲುವರಾಯಸ್ವಾಮಿ ಏನ್ ಹಾಕ್ತಾರೆ ಹೇಳಲಿ, ಆನಂತರ ನನ್ನದು ಮಾತನಾಡಲಿ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!