Wednesday, September 25, 2024

ಪ್ರಾಯೋಗಿಕ ಆವೃತ್ತಿ

ಬೀಡಿ, ಸಿಗರೇಟ್ ವ್ಯಸನ ಮುಕ್ತರಾಗಿಸಲು ಆರೋಗ್ಯ ಶಿಕ್ಷಣ ಅವಶ್ಯಕ: ಚೆಲುವರಾಜು

ಶ್ವಾಸಕೋಶದ ಆರೋಗ್ಯ ಹಾಗೂ ಬೀಡಿ ಸಿಗರೇಟ್ ವ್ಯಸನ ಮುಕ್ತರಾಗಿಸಲು ಸೂಕ್ತ ಆರೋಗ್ಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಚೆಲುವರಾಜು ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಪಿ ಹೊಸಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಪಾಲಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಆಯೋಜಿಸಿದ್ದ ವಿಶ್ವ ಶ್ವಾಸಕೋಶದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ಮನುಷ್ಯ ಮತ್ತು ಪ್ರಾಣಿಗಳಲ್ಲಿ ಅಗತ್ಯ ಉಸಿರಾಟದ ಅಂಗ ಎಂದರೆ ಶ್ವಾಸಕೋಶ ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನದ ಶೈಲಿಯಿಂದಾಗಿ ಯುವ ಪೀಳಿಗೆಯಲ್ಲಿ ಹಾಗೂ ಮಹಿಳೆಯರಲ್ಲಿ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್,ಕ್ಷಯ ರೋಗ,ಶ್ವಾಸಕೋಶದ ಸಮಸ್ಯಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಹಾಗಾಗಿ ಶ್ವಾಸಕೋಶದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಶ್ವಾಸಕೋಶದ ಆರೈಕೆಯನ್ನು ಉತ್ತೇಜಿಸಲು ಪ್ರತಿ ವರ್ಷ ಸೆ 25 ರಂದು ವಿಶ್ವ ಶ್ವಾಸಕೋಶ ದಿನ ಆಚರಿಸಲಾಗುತ್ತಿದೆ ಎಂದರು.

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಮಾತನಾಡಿ
ನಿಮ್ಮ ಶ್ವಾಸಕೋಶ ಆರೋಗ್ಯಕರವಾಗಿರಲು ಧೂಮಪಾನ ತ್ಯಜಿಸಿ,ನಿಯಮಿತವಾಗಿ ವ್ಯಾಯಾಮ ಮಾಡಿ,ಯೋಗಾಭ್ಯಾಸ ಮಾಡಿ,ಪೌಷ್ಠಿಕ ಆಹಾರ ಸೇವಿಸಿ,ಬೆವರು ಸುರಿಸಿ ಕೆಲಸ ಮಾಡಿ,ಸಂಚಾರ ದಟ್ಟಣೆಯಿಂದ ಬರುವ ಹೊಗೆಯಿಂದ,ದೂಳುಗಳಿಂದ ದೂರವಿರಿ ಒಟ್ಟಾರೆ ಸುಲಭವಾಗಿ ಉಸಿರಾಡಿ,ಆರೋಗ್ಯಕರವಾಗಿ ಬದುಕಿ ಎಂದು ಸಲಹೆ ನೀಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಚಲುವರಾಜು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ,ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ ಎಂ,ಜಿ ಬಿ ಹೇಮಣ್ಣ,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಣ್ಯವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಸುಮಿತ,ಸಮುದಾಯ ಆರೋಗ್ಯ ಅಧಿಕಾರಿ ನಂದಿನಿ ಎಸ್, ಗ್ರಾ ಪಂ ಸಿಬ್ಬಂದಿ ಭುವನ, ರಾಚಯ್ಯ, ಐ ವೈ ಡಿ ಲಿಂಕ್ ಕಾರ್ಯಕರ್ತೆ ನಾಗಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!