Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ : ಭೂ ಕುಸಿತದ ಭೀತಿ – ಜನಜೀವನ ಅಸ್ತವ್ಯಸ್ತ

ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕುಲು ಜಿಲ್ಲೆಯ ಕಸೋಲ್‌ನಲ್ಲಿ ಭೂಕುಸಿತಗಳು ಉಂಟಾಗಿವೆ. ಪರಿಣಾಮವಾಗಿ ಹಲವಾರು ಮನೆಗಳು ಜಖಂಗೊಂಡಿವೆ. ಜೊತೆಗೆ ಮಂಡಿ ಜಿಲ್ಲೆಯಲ್ಲಿರುವ ಬಿಯಾಸ್ ನದಿಯು ತುಂಬಿ ಹರಿಯುತ್ತಿರುವುದರಿಂದ ಆಟ್-ಬಂಜಾರ್‌ ನ ಸಂಪರ್ಕ ಸೇತುವೆ ಸೇತುವೆ ಸಂಪೂರ್ಣ ಕೊಚ್ಚಿಹೋಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

“>

ಬಿಯಾಸ್​ ನಂದಿಯಿಂದ ಮಂಡಿ ಜಿಲ್ಲೆಯ ಪಾಂಡೋಹ್​ ಎಂಬ ಹಳ್ಳಿಗೆ ನೀರು ನುಗ್ಗಿ, ಹಳ್ಳಿಗರೆಲ್ಲ ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ. ಬಿಯಾಸ್ ನದಿಯು ಮೈದುಂಬಿ ಹರಿಯುತ್ತಿವ ಕಾರಣ ಪಂಚವಕ್ತ್ರ ದೇವಾಲಯ ಮತ್ತು ಮಂಡಿ ಜಿಲ್ಲೆಯೂ ನೀರಿನಲ್ಲಿ ಮುಳುಗಿದೆ. ಸೋಲನ್‌ನ ಚೆವಾ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಅಲ್ಲದೆ ಮಂಡಿಯ ಥುನಾಗ್ ಪ್ರದೇಶದಲ್ಲಿ ಹಠಾತ್‌ ಪ್ರವಾಹಕ್ಕೆ ಕಾರಣವಾಗಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ.

ಮೇಘಸ್ಫೋಟದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸೋಲನ್‌ನಲ್ಲಿ 50 ವರ್ಷಗಳ ಬಳಿಕ ಭಾನುವಾರ ದಾಖಲೆಯ 13.5 ಸೆಂ.ಮೀ ಮಳೆಯಾಗಿದೆ. 1971ರಲ್ಲಿ 10.5 ಸೆಂ.ಮೀ ಮಳೆಯಾಗಿತ್ತು. ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ತುರ್ತು ಸಂದರ್ಭಗಳ ಹೊರತು ಹೊರಗೆ ಪ್ರಯಾಣ ಮಾಡದಂತೆ ಜನರಿಗೆ ಸರ್ಕಾರ ಸೂಚನೆ ನೀಡಿದೆ. ಈವರೆಗೆ ಮಳೆಯಿಂದ 8 ಮಂದಿ ಸಾವನ್ನಪ್ಪಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಧಾವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“>

ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಕುಲು ಜಿಲ್ಲೆಯ ಚರುಡು ಗ್ರಾಮದಲ್ಲಿ ಮುಳುಗಿಹೋಗಿದ್ದ ಮನೆಯೊಂದರಿಂದ ಐವರನ್ನು ರಕ್ಷಿಸಿದೆ. ಬಿಯಾಸ್​ ನದಿಯ ಪಕ್ಕದಲ್ಲಿ ಸಿಕ್ಕಿಹಾಕಿಕೊಂಡಿರುವ ನಾಲ್ಕು ಜನರನ್ನು ರಕ್ಷಿಸುವ ಕಾರ್ಯಾಚರಣೆ ಇನ್ನೂ ಸಾಗಿದೆ ಎಂದು ಎನ್​ಡಿಆರ್​ಎಫ್​ ಅಧಿಕಾರಿಗಳು ಹೇಳಿದ್ಧಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಂಭವವಿದ್ದು, ನದಿಗಳ ಬಳಿ ಹೋಗದಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ಧಾರೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಬಿಯಾಸ್​ನ ನೀರಿನ ಮಟ್ಟ ಹೆಚ್ಚಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಪ್ರವಾಹ ಉಂಟಾಗಿದೆ. ಕುಲು-ಮನಾಲಿ ರಸ್ತೆಯಲ್ಲಿ ಕಲ್ಲುಬಂಡೆಗಳು ಉರುಳಿ ಬಿದ್ದಿರುವುದರಿಂದ ಸಂಚಾರವನ್ನು ನಿಷೇಧಿಸಲಾಗಿದೆ.

ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯು ಜಲಾವೃತಗೊಂಡ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸಂಚಾರಿ, ಪ್ರವಾಸಿ ಮತ್ತು ರೈಲ್ವೇ ಪೊಲೀಸರು ರೈಲುಗಳನ್ನು ರದ್ದುಗೊಳಿಸಿದ್ದಾರೆ. ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಕೋಟಿ ಮತ್ತು ಸನ್ವಾರ ರೈಲು ನಿಲ್ದಾಣಗಳ ನಡುವಿನ ರೈಲ್ವೆಮಾರ್ಗವನ್ನು ಬಂದ್ ಮಾಡಲಾಗಿದೆ.

“>

ದೆಹಲಿಯಲ್ಲಿ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ಮಳೆ

ಅತಿ ಹೆಚ್ಚು ಮಳೆಯಿಂದಾಗಿ ಹಲವಾರು ರಾಜ್ಯಗಳಲ್ಲಿ ಜಲಾವೃತವಾಗಿದೆ. ಕಾರುಗಳು ಕೊಚ್ಚಿಹೋಗಿವೆ. ಸೇತುವೆಗಳು ಕೊಚ್ಚಿ ಹೋಗಿವೆ. ಭಾರತದಲ್ಲಿ ಭಾನುವಾರ ವಾಡಿಕೆಗಿಂತ 81% ಮಳೆ ಸುರಿದರೆ ದೆಹಲಿಯಲ್ಲಿ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಲವು ಪ್ರದೇಶಗಳು ಮುಳುಗಡೆಯಾಗಿವೆ. 1982 ರ ನಂತರ ಒಂದೇ ದಿನದಲ್ಲಿ 15 ಸೆಮೀ ಗಿಂತ ಹೆಚ್ಚು ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಭಾನುವಾರ 104 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ 13 ಪಟ್ಟು ಹೆಚ್ಚಾಗಿದೆ. ದೆಹಲಿ, ಚಂಡೀಗಢ, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ದಿನದ ಮಳೆ ಸಾಮಾನ್ಯಕ್ಕಿಂತ ಒಂಬತ್ತು ಪಟ್ಟು ಹೆಚ್ಚಿದ್ದರೆ, ಪಂಜಾಬ್‌ನಲ್ಲಿ ಸಾಮಾನ್ಯಕ್ಕಿಂತ 12 ಪಟ್ಟು ಹೆಚ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!