Friday, September 20, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ನೀರು| ಬಿಜೆಪಿಯಿಂದ ಆ.21ಕ್ಕೆ ಮೈ-ಬೆಂ ಹೆದ್ದಾರಿ ಬಂದ್

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಆ.21ರಂದು ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದ ಬಳಿ ಮೈ-ಬೆಂ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ತಿಳಿಸಿದರು.

ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಡೆದ ಹಳೆ ಮೈಸೂರು ಭಾಗದ ಬಿಜೆಪಿ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಅದರ ನಡುವೆ ತಮಿಳುನಾಡು ಕುರುವೈ ಬೆಳೆಗೆ ನೀರನ್ನ ಕೇಳ್ತಿದ್ದಾರೆ. ನಿಯಮದ ಪ್ರಕಾರ 1.8 ಲಕ್ಷ ಹೆಕ್ಟರ್ ಗೆ ಮಾತ್ರ ನೀರು‌ ಕೊಡಬೇಕಿದೆ.
ಆದ್ರೆ ತಮಿಳುನಾಡಿನಲ್ಲಿ 3 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕುರವೈ ಬೆಳೆ ಬೆಳೆಯುತ್ತಿದ್ದಾರೆ. ಇದರ ನಡುವೆಯು ಸುಪ್ರೀಂ ಕೋರ್ಟ್ ಗೆ ಅಪೀಲು ಹಾಕಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳು ಕೇವಲ ತಿಂಡಿ, ಕಾಫಿ ಕುಡಿದು ಬರುತ್ತಿದ್ದಾರೆ ಎಂದು ದೂರಿದರು.

ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಳ ಒಪ್ಪಂದಿದ ಡ್ಯಾಂನಿಂದ ನೀರು ಬಿಡಲಾಗ್ತಿದೆ. ಮೆಟ್ಟೂರು ಡ್ಯಾಂನಲ್ಲಿ 65 ಟಿಎಂಸಿ ನೀರು ಇದೆ. ಆದ್ರು KRS ಡ್ಯಾಂನಿಂದ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿದೆ. ಯಾವ ಆಧಾರದ ಮೇಲೆ ನೀರು ಬಿಡ್ತಿದ್ದಾರೆ. ಡಿಕೆಶಿ ಸ್ಟಾಲಿನ್ ನ್ನ ಓಲೈಕೆ ಮಾಡಿಕೊಳ್ಳಲು ನೀರು ಬಿಡಿಸಿದ್ದಾರೆ ಎಂದು ಆರೋಪಿಸಿದರು.

ಡಿಕೆಶಿವಕುಮಾರ್, ಚಲುವರಾಯಸ್ವಾಮಿ ರಾಜ್ಯದ ರೈತರ ಹಿತಕಾಯುತ್ತಿಲ್ಲ. ಇಬ್ಬರು ರಾಜಕೀಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ‌. ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸ್ತೇವೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಮೈಸೂರು ಗ್ರಾಮಾಂತರ ಜಿಲ್ಲೆ ಜನರು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ನಿಲ್ಲಿಸುವಂತೆ ಹೋರಾಟ ಮಾಡಲಾಗುವುದು ಎಂದರು.

ಈ ಹೋರಾಟಕ್ಕೆ ಮಾಜಿ ಸಿಎಂ ಯಡಿಯೂರಪ್ಪರನ್ನ ಪ್ರತಿಭಟನೆಗೆ ಕರೆತರಲು ಪ್ರಯತ್ನಿಸುತ್ತೇವೆ.
ಚಲುವರಾಯಸ್ವಾಮಿ-ಡಿಕೆಶಿ ಕೇಂದ್ರದ ಬಳಿ ಕಾವೇರಿ ಕೊಳ್ಳದ ಕೀ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು
ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ರಾಜಕೀಯ ಬಿಟ್ಟು ರೈತರ ಪರ ನಿಲ್ಲಬೇಕಿದೆ 

ಕಾವೇರಿ ನೀರಿನ ಸಮಸ್ಯೆ, ಮಳೆ ಕೊರತೆ, ರೈತರಿಗಾದ ಅನ್ಯಾಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಲ್ಲರೂ  ರಾಜಕೀಯ ಬಿಟ್ಟು ರೈತರ ಪರ ನಿಲ್ಲಬೇಕಿದೆ ಎಂದು ಸಂಸದೆ ಸುಮತಲಾ ಅಂಬರೀಶ್ ಹೇಳಿದರು.

ಬಿಜೆಪಿ ಮಾತ್ರ ಅಲ್ಲ ಹೋರಾಟಕ್ಕೆ ಯಾರೆಲ್ಲಾ ಬರ್ತಾರೆ ಅವ್ರನ್ನೆಲ್ಲಾ ಸೇರಿಸಿಕೊಳ್ಳಬೇಕು. ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಯಾರೆಲ್ಲಾ ಸಮಾನ ಮನಸ್ಕರರಿದ್ದಾರೆ ಎಲ್ಲರೂ ಸೇರಿ ಹೋರಾಟ ಮಾಡಬೇಕಿದೆ. ಇಲ್ಲಿಯವರೆಗೆ ತಮಿಳುನಾಡು ಪರವಾಗೆ ಆದೇಶಗಳು ಆಗ್ತಿದೆ. ನಮ್ಮ ರೈತರ ಸಂಕಷ್ಟದಲ್ಲೂ ತೀರ್ಪು ನಮ್ಮ ಪರ ಆಗ್ತಿಲ್ಲ ಎಂದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕೈಲಿ ಕೀ ಇದೆ ಅನ್ನುತ್ತೆ. ಅಂಬರೀಶ್ ಕೇಂದ್ರ ಸಚಿವರಾಗಿದ್ದಾಗ ಕಾಂಗ್ರೆಸ್ ಸರ್ಕಾರವೇ ಇತ್ತು. ಕೇಂದ್ರ ಸರ್ಕಾರ ಬಗೆಹರಿಸಬಹುದಿತ್ತು ಅನ್ನೋದಾಗಿದ್ರೆ ರಾಜಿನಾಮೆ ಯಾಕೆ ಕೊಡ್ತಿದ್ರು.
ಈ ವಿಚಾರವನ್ನ ಯಾರು ರಾಜಕೀಯವಾಗಿ ಬಳಸಬಾರದು. ನಾನು ಕಾವೇರಿ ನೀರಿನ ವಿಚಾರವಾಗಿ ಹಲವು ಬಾರಿ ಮಾತನಾಡಿದ್ದೇನೆ. ಆದರೆ ಸಂಸದರು ಕೋರ್ಟಿನಲ್ಲಿ ನಿಂತು ಮಾತನಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!