Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂಡೆನ್‌ಬರ್ಗ್ ವರದಿ ಪೆ ಚರ್ಚಾ ಯಾವಾಗ…. ? ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

LIC ಅದಾನಿ ಷೇರುಗಳಲ್ಲಿ ₹16580 ಕೋಟಿ ಕಳೆದುಕೊಂಡಿದೆ. ಲಕ್ಷಾಂತರ ಜನರ ಜೀವಿತಾವಧಿ ಉಳಿತಾಯ ಕೇವಲ 2 ದಿನಗಳಲ್ಲಿ ನಾಶವಾಯಿತು.

ಚಿಂತಿತ ಹೂಡಿಕೆದಾರರು “ಅದಾನಿ ಪೆ ಕರ್ಚಾ” ಕುರಿತು ನಿಮ್ಮ ನಿಲುವನ್ನು ತಿಳಿಯಲು ಬಯಸುತ್ತಾರೆ ಮತ್ತು ಇನ್ನೂ “ಹಿಂಡೆನ್‌ಬರ್ಗ್ ವರದಿ ಪೆ ಚರ್ಚಾ” ಗಾಗಿ ಕಾಯುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದೆ.

“>

ಲಕ್ಷಗಟ್ಟಲೆ MSMEಗಳು, SMEಗಳು ಸ್ಥಗಿತಗೊಂಡಿವೆ ಮತ್ತು ಉಳಿದವುಗಳು ಬದುಕಲು ಹೆಣಗಾಡುತ್ತಿವೆ. ನೋಟು ಅಮಾನ್ಯೀಕರಣದ ಕಠಿಣ ನಿರ್ಧಾರವಾಗಲಿ ಅಥವಾ ಅಪ್ರಾಯೋಗಿಕ ಜಿಎಸ್‌ಟಿ ಸ್ಲ್ಯಾಬ್‌ಗಳಾಗಲಿ, ಕೆಟ್ಟ ಆರ್ಥಿಕ ನೀತಿಗಳಿಂದ ಸಣ್ಣ ಉದ್ಯಮಗಳನ್ನು ಕೊಲ್ಲುವುದು ಬಿಜೆಪಿಯ ಹವ್ಯಾಸವಾಗಿದೆ. ಪ್ರಧಾನಿ ಮೋದಿಯವರೇ, ನೀವು ಜಿಎಸ್‌ಟಿ ಪೆ ಚರ್ಚಾವನ್ನು ಯಾವಾಗ ನಡೆಸಲು ಯೋಜಿಸುತ್ತೀರಿ ಹೇಳಿ ?

ಪೆಟ್ರೋಲ್ ₹ 101, ಡೀಸೆಲ್ ₹ 88, LPG ₹ 1000+, ಅಡುಗೆ ಎಣ್ಣೆ ₹ 190 ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಒತ್ತಡದಲ್ಲಿ ಬಡವರು ತತ್ತರಿಸುತ್ತಿದ್ದಾರೆ. “ಬೆಲೆ ಏರಿಕೆ ಪೆ ಚರ್ಚಾ” ನಡೆಸಲು ನಾವು ಪ್ರಧಾನಿ ಮೋದಿಯನ್ನು ಒತ್ತಾಯಿಸುತ್ತೇವೆ. ಭಾರತದ ನಿರುದ್ಯೋಗ ದರವು 8.3% ಕ್ಕೆ ಏರಿದೆ ಮತ್ತು ಯುವಕರು ಬಳಲುತ್ತಿದ್ದಾರೆ. ಕರ್ನಾಟಕವೊಂದರಲ್ಲೇ 2.5 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. “ನಿರುದ್ಯೋಗ ಪೆ ಚರ್ಚಾ” ವನ್ನು ಯಾವಾಗ ಮಾಡಿತ್ತೀರಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!