Friday, September 20, 2024

ಪ್ರಾಯೋಗಿಕ ಆವೃತ್ತಿ

ಈಶ್ವರಪ್ಪ ಬಂಧಿಸಿ : ಹಿಂದೂ ಮಹಾಸಭಾ ಆಗ್ರಹ

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲಾ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮಾತನಾಡುತ್ತ, ಹಿಂದೂ ಕಾರ್ಯಕರ್ತರ ಬಲಿ ನಾನಾ ರೀತಿಯಲ್ಲಿ ಆಗುತ್ತಿದೆ, ಇದಕ್ಕೆ ಪೂರಕ ಎಂಬಂತೆ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವು ಒಂದು. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವರಾದ ಈಶ್ಬರಪ್ಪನವರೇ ಈ ಆತ್ಮಹತ್ಯೆಗೆ ನೇರವಾದ ಕಾರಣ ಎಂದು ತಮ್ಮ ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರವು ಹಿಂದೂತ್ಬದ ವಿಚಾರ ಧಾರೆಯ ಮೇಲೆ ಆಧಿಕಾರಕ್ಕೆ ಬಂದಿತು, ಆತ್ಮಹತ್ಯೆ ಮಾಡಿಕೊಂಡಿರುವವರು ಒಬ್ಬ ಹಿಂದೂ. ಈಶ್ವರಪ್ಪನವರು ನೇರವಾಗಿ ರಾಜೀನಾಮೆ ಕೊಡಲಿಲ್ಲ ಅವರಿಗೆ ಸಾಕಷ್ಟು ಒತ್ತಡಗಳನ್ನು ಹಾಕಿದ ಮೇಲೆಯೇ ಅವರು ಕೊಟ್ಟಿದ್ದಾರೆ, ಆ ರಾಜೀನಾಮೆ ಪತ್ರವೂ ನಮ್ಮ ಬಳಿಯಲ್ಲಿ ಇದೆ. ನಮಗೆ ಬಂದಂತಹ ಮಾಹಿತಿ ಪ್ರಕಾರ, ಅತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿರುವ ಸಿಸಿ ಕ್ಯಾಮಾರಗಳು, ವರ್ಕ್ ಮಾಡುವುದನ್ನು ನಿಲ್ಲಿಸಿದೆ. ಕೇವಲ ರಾಜೀನಾಮೆ ಮಾತ್ರವಲ್ಲ, ಹಿಂದೂ ಮಹಾ ಸಭಾ ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಹಿಂದೂ ನಾಯಕರು ಕೇವಲ ಹೇಳಿಕೆ ಕೊಟ್ಟಾಗ ಸು ಮೊಟೊ ಕೇಸ್ ಹಾಕುವಂತಹ ಪೋಲೀಸರು ಇಂದು ಯಾವುದೇ ರೀತಿಯ ಮಾತುಗಳನ್ನಾಡುತ್ತಿಲ್ಲ, ಈ ಹಿಂದೆ ಹಿಂದೂ ಕಾರ್ಯಕರ್ತ ವಿನಾಯಕ ಬಾಳಿಗಾ (ಬಿಜೆಪಿ ಕಾರ್ಯಕರ್ತ) ಕೊಲೆ ಪ್ರಕರಣಕ್ಕೆ ಇನ್ನೂ ಯಾವುದೇ ರೀತಿಯ ನ್ಯಾಯ ದೊರಕಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈಶ್ಬರಪ್ಪನವರು ಕಮಿಷನ್ ತಗೊಂಡಿಲ್ಲವೆಂದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ

ಹಿಂದೂ ಮಹಾ ಸಭಾ ರಾಜ್ಯ ಕಾರ್ಯದರ್ಶಿ ಧರ್ಮೆಂದ್ರ ಸವಾಲು”

ಕೇವಲ ಹಿಂದೂ ಕಾರ್ಯಕರ್ತನ್ನು ಮೆಟ್ಟಿಲು ಮಾಡಿಕೊಂಡು, ಬಿಜೆಪಿಯು ಅಧಿಕಾರಕ್ಕೇರುವುದು ಮಾತ್ರ ಇವರ ಪರಿಕಲ್ಪನೆಯಾಗಿದೆ ಎಂದು ತಿಳಿಸಿದರು. ಬಿಜೆಪಿಗೆ ಲಂಚ, ಮಂಚ ಮತ್ತು ಹಿಂದೂ ವಿರೋಧಿ ನೀತಿಗಳು ಇವೇ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ, ಬೇರೆ ಇನ್ಯಾವುದೇ ಹಗರಣಗಳಿಲ್ಲ. ಹಿಂದೂ ವಿರೋಧಿ ನೀತಿಗಳಾಗುತ್ತಿದ್ದರೂ, ಅದನ್ನು ಬಗೆಹರಿಸುತ್ತಿಲ್ಲ, ಹಿಂದೂತ್ವಕ್ಕೆ ಸಂಬಂಧಪಟ್ಟಂತ ಯಾವ ಕೆಲಸಗಳು ನಡೆದಿಲ್ಲಾ, ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಈ ರಾಜೀನಾಮೆಯೂ ಕೂಡಾ ಬೂಟಾಟಿಕೆಯ ಅಜೆಂಡಾವಾಗಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಯಿರುವುದರಿಂದ ಅದರ ಸಲುವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ ಎಂದು ಹೇಳಿದರು.

ಸಂತೋಷ್ ಪಾಟೀಲ್ ಸಾವನ್ನು ಕೊಲೆಯೆನ್ನಬೇಕೋ, ಆತ್ಮಹತ್ಯೆ ಎನ್ನಬೇಕೊ ತಿಳಿಯುತ್ತಿಲ್ಲ, ಸಂತೋಷ್ ಮನೆಯ ಆಧಾರ ಸ್ಥಂಭವಾಗಿದ್ದರು, ಅವರ ಮನೆಯ ಪರಿಸ್ಥಿತಿ ಬಗೆಗೆ ಯಾರು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು ? ಈ ಬಗ್ಗೆ ಉನ್ನತ ತನಿಖೆಯಾಗಬೇಕು ಮತ್ತು ಈಶ್ವರಪ್ಪನವರನ್ನು ಬಂಧಿಸಬೇಕು, ತಪಿತಸ್ಥರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಧಮೇಂದ್ರ ಮಾತನಾಡಿ, ನರೇಂದ್ರ ಮೋದಿಯವರು ಭ್ರಷ್ಟಾಚಾರ ಮುಕ್ತ ಭಾರತ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದರು, ಇವರದೇ ಸರ್ಕಾರ ಇಂದು ಕರ್ನಾಟಕದಲ್ಲಿರುವುದು, 40% ಕಮೀಷನ್ ಬಗೆಗೆ ಪ್ರಧಾನ ಮಂತ್ರಿಗೆ ಬರೆದಿದ್ದು, ಅದನ್ನು ಪತ್ರಿಕೆಗಳು ಪ್ರಕಟ ಮಾಡಿದೆ. ಭಾರತಿಯ ಜನತಾ ಪಕ್ನದವರಿಗೆ, ಕರ್ನಾಟಕದಲ್ಲಿ ನರೇಂದ್ರ ಮೋದಿಯವರ ಘೋಷಣೆಯು ಅನ್ವಯವಾಗುವುದಿಲ್ಲವೇ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!