Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ಹಿರೇಮರಳಿ ಡೇರಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಆಯ್ಕೆ

ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತ‌ನ ಅಧ್ಯಕ್ಷರಾಗಿ ಆರ್. ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷರಾಗಿ ಎಚ್.ಕೆ.ಪುಷ್ಪಾ ಅವರು ಪಕ್ಷಾತೀತಾವಾಗಿ ಅವಿರೋಧ ಆಯ್ಕೆಗೊಂಡರು.

ಸಂಘದಲ್ಲಿ ಒಟ್ಟು 11 ನಿರ್ದೇಶರ ಬಲ ಇದ್ದು, ಅಧಿಕಾರ ಹಂಚಿಕೆ ಸೂತ್ರಧ್ವನಯ ಈ ಹಿಂದಿನ ಅಧ್ಯಕ್ಷ ಎಚ್.ಪಿ.ಚಂದ್ರಶೇಖರ ಹಾಗೂ ಉಪಾಧ್ಯಕ್ಷೆ ಎಚ್.ಆರ್.ಸವಿತಾ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆರ್.ಮಲ್ಲಿಕಾರ್ಜುನ್ ಹಾಗೂ ಎಚ್.ಕೆ.ಪುಷ್ಪಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರ ಅವಿರೋಧ ಆಯ್ಕೆಯನ್ನು‌ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಕೆ.ಎಂ.ನಿರ್ಮಲಾ ಪ್ರಕಟಿಸಿದರು‌.

ನೂತನ ಅಧ್ಯಕ್ಷ ಆರ್ .ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಎಚ್.ಕೆ.ಪುಷ್ಪಾ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಹಿರೇಮರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಅಭಿವೃದ್ಧಿಗೊಳಿಸುವ ಮೂಲಕ ಮಾದರಿಯನ್ನಾಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

ಈ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್.ಪಿ.ಚಂದ್ರಶೇಖರ, ಎಚ್.ಆರ್.ಸವಿತಾ, ಎಚ್.ಬಿ.ಸುನೀಲ್‌ಕುಮಾರ, ಎಚ್.ಜಿ.ರಘು, ಎಚ್.ಎಸ್.
ಪುರುಷೋತಮ್, ಕೃಷ್ಣೇಗೌಡ, ಎಚ್.ಸಿ.ರವಿ, ಎಂ.ಎನ್.ಪವನಾ, ಲೀಲಾವತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಜೆ.ಜಗದೀಶ್, ಗ್ರಾಮದ ಯುವ ಮುಖಂಡರಾದ ಮಂಜುನಾಥ್, ಶಿವಕುಮಾರ್, ಯಶ್ವಂತ್, ಸಂದೇಶ್, ಸತ್ಯಪ್ಪ, ಪ್ರವೀಣ್, ಹರೀಶ್, ರವಿ, ವಿಶ್ವ, ಕುಮಾರ್, ಕಲಾವಿದ ಶಂಭೂನಹಳ್ಳಿ ಮಂಜುನಾಥ್ ಇತರರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಗೌರವಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ