Thursday, November 19, 2026

ಪ್ರಾಯೋಗಿಕ ಆವೃತ್ತಿ

ಹೊಸ ಕೊಳವೆ ಬಾವಿ ಕೊರೆಯುವುದು ಗಣನೀಯ ಇಳಿಕೆ : ಕೆ.ಆರ್.‌ನಂದಿನಿ

ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವುದನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಗ್ರಾಮವಾರು ಸರ್ಕಾರದ ವ್ಯಾಪ್ತಿಗೆ ಬರುವ ಕೊಳವೆ ಬಾವಿ ಹಾಗೂ ಖಾಸಗಿ ಕೊಳವೆ ಬಾವಿಗಳು ಹಾಗೂ ಕೊಳವೆ ಬಾವಿಯಲ್ಲಿರುವ ನೀರಿನ ಇಳುವರಿ (yeild) ನ್ನು ಪಟ್ಟಿ ಮಾಡಲಾಗಿದೆ. ಕುಡಿಯುವ ನೀರಿನ ಕೊರತೆ ಉಂಟಾದರೆ ಖಾಸಗಿ ಬೋರ್ ವೆಲ್ ನ್ನು ಬಾಡಿಗೆಗೆ ಪಡೆಯಲಾಗುವುದು. ಹೊಸ ಬೋರ್ ವೆಲ್ ಕೊರೆಯಲು ಪ್ರಸ್ತಾವನೆ ಬಂದರೆ ಪಟ್ಟಿಯಲ್ಲಿ ಇಳುವರಿ ಪರಿಶೀಲಿಸಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬೋರ್ ವೆಲ್ ಗಳ ಸಂಖ್ಯೆ ಹಾಗೂ ಇಳುವರಿಯ ಸಮೀಕ್ಷೆ ನಡೆಸಿರುವುದರಿಂದ ಬೋರ್ ವೆಲ್ ಕೊರೆಯುವುದು ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲ್ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣವಾಗುವ ಕುಡಿಯುವ ನೀರಿನ ಪೈಪ್ ಲೈನ್ ಗಳು ಒಳಚರಂಡಿಗಳಿಂದ ಕನಿಷ್ಠ ಒಂದು ಅಡಿ ಯಾದರೂ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ತೊಂಬೆಗಳು ನಿರುಪಯುಕ್ತವಾಗಿದ್ದಲ್ಲಿ ಅವುಗಳನ್ನು ಮುಚ್ಚುವಂತೆ ಉಪಯೋಗಿಸುತ್ತಿದ್ದಲ್ಲಿ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಈ ಕುರಿತಂತೆ ತಾಲ್ಲೂಕು ಮಟ್ಟದಲ್ಲಿ ವಾಟರ್ ಮೆನ್ ಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಬೂದು ನೀರು, ಚರಂಡಿ ನೀರು ಅಥವಾ ಇನ್ನಿತರೆ ಮಲಿನ ನೀರು ಕೆರೆ, ಕಟ್ಟೆಗಳಿಗೆ ಸೇರದಂತೆ ನೋಡಿಕೊಳ್ಳಬೇಕು. ಈ ತರಹದ ಪ್ರಕರಣಗಳ ಬಗ್ಗೆ ಸರ್ವೆ ನಡೆಸಿ ನೀರಿನಲ್ಲಿ ಸೇರುವ ಮೊದಲು ಸರಿಪಡಿಸಲು ಕ್ರಮ ವಹಿಸಬೇಕು ಎಂದರು.

ಶುದ್ಧ ನೀರು ಕುಡಿಯುವ ಘಟಕಗಳ ಖಾಸಗಿ ಅವರಿಗೆ ನಿರ್ವಹಣೆ ನೀಡಲಾಗಿತ್ತು. ನಿರ್ವಹಣೆ ಅವಧಿ ಮುಕ್ತಾಯವಾಗಿರುವ ಘಟಕಗಳನ್ನು ದುರಸ್ತಿ ಇದ್ದಲ್ಲಿ ಸರಿ ಪಡಿಸಿ ಇನ್ನು ಮುಂದೆ ನಿರ್ವಹಣೆಗೆ ಪಂಚಾಯಿತಿಗಳಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ 680 ಶುದ್ಧ ಕುಡಿಯುವ ನೀರಿನ ಘಟಕದ ಪೈಕಿ 290 ಘಟಕಗಳನ್ನು ಪಂಚಾಯಿತಿಗಳಿಗೆ ನಿರ್ವಹಣೆಗೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು‌ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಮೋದ್ ಸೇರಿದಂತೆ ‌ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ