Friday, November 20, 2026

ಪ್ರಾಯೋಗಿಕ ಆವೃತ್ತಿ

ಹನಿಟ್ರ್ಯಾಪ್: ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಹನಿಟ್ರಾಪ್ ನಲ್ಲಿ 50 ಲಕ್ಷ ಕೊಟ್ಟು, ಹಣ ದರೋಡೆ, ಅಪಹರಣ ಎಂದು ಬಿಂಬಿಸಿ ದೂರು ನೀಡಿ ಹಲವು ಅನುಮಾನಕ್ಕೆ ಕಾರಣವಾಗಿರುವ ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ್ ಶೆಟ್ಟಿ ಹಾಗೂ ಆತನಿಗೆ ಸಹಕರಿಸಿದ ಶ್ರೀನಿವಾಸಶೆಟ್ಟಿ ಇತರರ ಮೇಲೆ ಗಂಭೀರ ಕಾನೂನು ಕ್ರಮ ಜರುಗಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಮಂಡ್ಯಜಿಲ್ಲೆಯ ಪ್ರಗತಿಪರ ಸಂಘಟನೆಗಳು ಪೋಲಿಸ್ ವರಿಷ್ಠಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದವು.

ಎಸ್ಪಿ ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಹನಿಟ್ರಾಪ್ ಗೆ ಒಳಗಾಗಿ 50ಲಕ್ಷ ಕೊಟ್ಟಿರುವ ಜಗನ್ನಾಥ್ ಶೆಟ್ಟಿ ಘಟನೆ ನಡೆದಿದ್ದು 2022ರ ಫೆಬ್ರವರಿ 26,27ರಂದು. ದೂರು ನೀಡಿದ್ದು 19-08-22ರಲ್ಲಿ.ದೂರು ನೀಡಲು ಇಷ್ಟು ವಿಳಂಬ ಮಾಡಿದ್ದು ಏಕೆ? ಒಬ್ಬ ಪ್ರಭಾವಿ ಉದ್ಯಮಿ ಶ್ರೀನಿಧಿ ಗೋಲ್ಡ್ ಮಾಲೀಕನು ನೀಡಿರುವ ದೂರಿನಲ್ಲಿರುವ ಅಂಶಗಳ ಪ್ರಕಾರ ಹಲವು ಅನುಮಾನಕ್ಕೆ ದಾರಿ ಮಾಡಿವೆ.ಆದ್ದರಿಂದ ಸರಿಯಾದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಮಂಗಳೂರಿಗೆ ಹೋಗಲು ರಾಜಹಂಸ ಬಸ್ ನಲ್ಲಿ ಟಿಕೆqಟ್ ಕಾಯ್ದಿರಿಸಿದ ವ್ಯಕ್ತಿ ದರ್ಶನ್ ಪ್ಯಾಲೇಸ್ ಲಾಡ್ಜ್ ಗೆ ಹೋಗಿದ್ದೇಕೆ? ರೂಮ್ ಒಳಗೆ ಹೆಣ್ಣುಮಗಳ ಜೊತೆ ಉಳಿದ್ದಿದ್ದು ಏಕೆ? ನಂತರ ವಿಡಿಯೋ ಮಾಡಿ ಬೆದರಿಕೆ ಮಾಡಿದರು ಅದಕ್ಕೆ 50ಲಕ್ಷ ಕೊಡಲು ಒಪ್ಪಿದೆ ಎನ್ನುವ ಜಗನ್ನಾಥ್ ಶೆಟ್ಟಿ ತಪ್ಪು ಮಾಡಿಲ್ಲ ಎಂದಾದರೆ 50ಲಕ್ಷ ಹಣ ನೀಡಲು ಒಪ್ಪಿದ್ಯಾಕೆ? ಇಷ್ಟೆಲ್ಲಾ ನಡೆಯುವಾಗ ಪೋಲೀಸ್‌ ನವರಿಗೆ ಸ್ವತಃ ಜಗನ್ನಾಥ್ ಶೆಟ್ಟಿ ಏಕೆ ತಿಳಿಸಲಿಲ್ಲ.

ಜಗನ್ನಾಥ್ ಶೆಟ್ಟಿ ಮತ್ತು ತಂಡ ಕೆಲವೇ ಗಂಟೆಗಳಲ್ಲಿ ಅರ್ಧಕೋಟಿ ಹಣ ನೀಡುತ್ತಾರೆಂದರೆ, ಇದರಲ್ಲಿ ಇನ್ನೂ ಏನೇನು ವಂಚನೆಗಳು ಅಡಗಿದ್ದು,ಪೋಲಿಸರು ತನಿಖೆ ನಡೆಸಿ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.

ಪೊಲೀಸ್ ಇಲಾಖೆಯು ದೊಡ್ಡ ಉದ್ಯಮಿಯ ಪ್ರಭಾವಕ್ಕೆ ಬೀಳದೆ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಹಿಳೆ ಮಕ್ಕಳ ಸಾಗಾಟ, ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಗೆಡದ ಹಾಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂನ ಸಿ.ಕುಮಾರಿ,ವಕೀಲ ಬಿ.ಟಿ.ವಿಶ್ವನಾಥ್, ಶಶಿಕಲಾ, ಜನವಾದಿ ಮಹಿಳಾ ಸಂಘಟನೆಯ ಡಿ.ಕೆ.ಲತಾ, ಶೋಭಾ, ರಾಣಿ,ಮಂಜುಳಾ ಮತ್ತಿತರರಿದ್ದರು ‌

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ