Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : 2023-24 ನೇ ಸಾಲಿನ ‘ವ್ಯಕ್ತಿ ಪ್ರಶಸ್ತಿ’ ಗೆ ನವೋದಯ ತರಬೇತಿ ಕೇಂದ್ರದ ಕನ್ನಿಕ ಆಯ್ಕೆ

ಮಂಡ್ಯದಲ್ಲಿ ಕಳೆದ 28 ವರ್ಷಗಳಿಂದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದ ವತಿಯಿಂದ ಮಕ್ಕಳಿಗೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಲು ಪರೀಕ್ಷಾ ತರಬೇತಿ ನೀಡುತ್ತಿರುವ ಸೇವೆಯನ್ನು ಗುರುತಿಸಿ ಕರ್ನಾಟಕ  ರಾಜ್ಯ ಸರ್ಕಾರವು ಇದೇ ನವೆಂಬರ್ 23- 2023ರ ಮಕ್ಕಳ ದಿನಾಚರಣೆಯಂದು ಮಂಡ್ಯದ ನವೋದಯ ಕೇಂದ್ರದ ತರಬೇತುದಾರರಾದ ಹೆಚ್.ಆರ್. ಕನ್ನಿಕ ಅವರಿಗೆ  ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ 2023-24ನೇ ಸಾಲಿನ ‘ವ್ಯಕ್ತಿ ಪ್ರಶಸ್ತಿ’ ಗೆ ಆಯ್ಕೆಯಾಗಿರುವ ಹೆಚ್. ಆರ್. ಕನ್ನಿಕ ಅವರಿಗೆ ದಿನಾಂಕ:23-11-2023 ರಂದು ಜವಾಹರ ಬಾಲಭವನ ಸೊಸೈಟಿ, ಕಬ್ಬನ್ ಉದ್ಯಾನವನ, ಬೆಂಗಳೂರು-01 ಇಲ್ಲಿ ನಡೆಯಲಿರುವ ‘ಮಕ್ಕಳ ದಿನಾಚರಣೆ ಕಾರ್ಯಕ್ರಮ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಇಲಾಖೆಯು ಹರ್ಷ ವ್ಯಕ್ತಪಡಿಸಿದೆ.

ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನಲ್ ಟ್ರಸ್ಟ್  ಮೂಲಕ ಜೆಎನ್‌ವಿಎಸ್‌ಟಿ ಆಯ್ಕೆ ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನವೋದಯ ಶಾಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ನೀಡಿದ ಕೀರ್ತಿ ಮಂಡ್ಯದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರಕ್ಕೆ ಇರುವುದು ಬಹಳ ಶ್ಲಾಘನೀಯವಾದದ್ದು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ‘ವ್ಯಕ್ತಿ ಪ್ರಶಸ್ತಿ’ ಗೆ ಆಯ್ಕೆಯಾಗಿರುವ ಹೆಚ್.ಆರ್. ಕನ್ನಿಕರವರು 17ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಹಲವಾರು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಇವರನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿರುವುದನ್ನು ಸ್ಮರಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!