Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಬೆಂಬಲಿಸಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲು ಸಹಕರಿಸಿ : ಹೆಚ್.ಟಿ.ಮಂಜು

ಪಂಚರತ್ನ ಯೋಜನೆಯು ಸಮಗ್ರ ಗ್ರಾಮೀಣ ಜನರ ಎಲ್ಲಾ ಆಶಯಗಳನ್ನು ಈಡೇರಿಸುವ ಮಹತ್ವಾಕಾಂಕ್ಷೆಯುಳ್ಳ ಯೋಜನೆಯಾಗಿದೆ, ಕೃಷಿ ಅಭಿವೃದ್ಧಿಗೆ ಪೂರಕವಾಗಿದೆ ಇದನ್ನು ಜಾರಿಗೆ ತರಲು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಮನವಿ ಮಾಡಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಮೆಳ್ಳಹಳ್ಳಿ, ಮಡುವಿನಕೋಡಿ, ಹರಿಹರಪುರ, ದೊಡ್ಡಯಾಚೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಂಚರತ್ನ ಯೋಜನೆ ಕುರಿತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮತಯಾಚನೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಜನತಾ ಪಕ್ಷ, ಜನತಾದಳ ಪಕ್ಷವು ಅಧಿಕಾರದಲ್ಲಿ ಇದ್ದಾಗ ಉತ್ತಮ ಬಡವರ ಪರವಾದ ಆಡಳಿತವನ್ನು ರಾಜ್ಯದ ಜನತೆ ನೋಡಿದ್ದಾರೆ. ಬಡವರಿಗೆ ರೇಷನ್ ಕಾರ್ಡ್ ಮೂಲಕ ಅಕ್ಕಿ, ಗೋಧಿ, ಸೀಮೆಎಣ್ಣೆ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು ನಮ್ಮ ಜನತಾಪಕ್ಷ(ದಳ) ಸರ್ಕಾರ. 2006 ರಲ್ಲಿ ಕುಮಾರಣ್ಣ ಅವರು ಪ್ರಥಮ ಭಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಸುವರ್ಣಾಕ್ಷರ ದಲ್ಲಿ ಬರೆದಿಡುವಂತಹ ಉತ್ತಮ ಆಡಳಿತ ನೀಡಿದ್ದರು ಎಂದು ಸ್ಮರಿಸಿದರು.

ಇಂತಹ ಅತ್ಯುತ್ತಮ ಆಡಳಿತ ನೀಡಿರುವ ಕುಮಾರಸ್ವಾಮಿ ಅವರು ಈ ಬಾರಿ ಎಲ್ಲಾ ಜನರಿಗೆ ಅನುಕೂಲವಾಗುವಂತಹ  ಪಂಚರತ್ನ ಯೋಜನೆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವ ವಾಗ್ದಾನ ಮಾಡಿದ್ದಾರೆ. ಈ ಪಂಚರತ್ನ ಯೋಜನೆ ಜಾರಿಗಾಗಿ ಈ ಭಾರಿ  ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್, ಎನ್.ಜಿ.ಸಾಗರ್, ಗ್ರಾ.ಪಂ.ಸದಸ್ಯ ಮೆಳ್ಳಹಳ್ಳಿ ರವಿ,  ಮುಖಂಡರಾದ ಮಹಾದೇವ್, ನಿವೃತ್ತ ಶಿಕ್ಷಕ ಗಂಗಾಧರ್, ಅಂಗಡಿ ರಾಜಪ್ಪ, ಎಂ.ಎಸ್.ಮAಜುನಾಥ್, ವಡ್ಡರಹಳ್ಳಿ ಮಹದೇವೇಗೌಡ  ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!