Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾನು ನಿನ್ನ ಪ್ರೀತಿಸುತ್ತೇನೆ……

ಮೂಲ : ಪಾಬ್ಲೋ ನೆರೂಡ
ಕನ್ನಡಕ್ಕೆ : ಚಿದಂಬರ ನರೇಂದ್ರ


ನಾನು ನಿನ್ನ ಪ್ರೀತಿಸುವುದಿಲ್ಲ,
ನೀನು ಹೊಳೆಯುವ ಗುಲಾಬಿ ಹಾಗೆ,
ಮಿನುಗುವ ನೀಲಮಣಿಯಂತೆ ಅಥವಾ
ಇರುವೆಯೆಂದು ಬೆಂಕಿಯಿಂದ ಚಿಮ್ಮಿ
ಹಾರಾಡುತ್ತಿರುವ ಕಿಡಿಗಳ ಹಾಗೆ,

ನಾನು ನಿನ್ನ ಪ್ರೀತಿಸುತ್ತೇನೆ
ಆತ್ಮ ಮತ್ತು ನೆರಳುಗಳ ನಡುವೆ,
ಕೆಲ ನಿಗೂಢ ಸಂಗತಿಗಳನ್ನ ಹೇಗೆ ರಹಸ್ಯವಾಗಿ
ಪ್ರೀತಿಸಬೇಕೋ ಹಾಗೆ,

ನಾನು ನಿನ್ನ ಪ್ರೀತಿಸುತ್ತೇನೆ,
ಎಂದೂ ಹೂ ಬಿಡದ ಆದರೆ ಅದೃಶ್ಯ ಹೂಗಳ
ಎಲ್ಲ ಬೆಳಕನ್ನೂ
ತನ್ನೊಳಗೆ ಹೊತ್ತ ಗಿಡದ ಹಾಗೆ.

ನಾನು ನಿನ್ನ ಪ್ರೀತಿಸುತ್ತೇನೆ
ಹೇಗೆ, ಯಾವಾಗ, ಎಲ್ಲಿಂದ ಮೊದಲಾಗಿ
ಯಾವುದೂ ಗೊತ್ತಿಲ್ಲದಿರುವಾಗಲೂ.

ಈ ಪ್ರೇಮದಲ್ಲಿ ಇಲ್ಲ ನಾನು ನೀನು ಇಬ್ಬರೂ,
ಇಲ್ಲಿ ನಾವಿಬ್ಬರೂ ಎಷ್ಟು ಹತ್ತಿರವಾಗಿದ್ದೇವೆಂದರೆ ;

ನನ್ನ ಎದೆಯ ಮೇಲೆ ನೀನು ಕೈ ಇಟ್ಟಾಗ
ನನಗೆ ಬೀಳುವ ಕನಸು ಮತ್ತು
ನನ್ನ ಎದೆಯ ಮೇಲೆ ನಾನೇ ಕೈ ಇಟ್ಟುಕೊಂಡಾಗ
ಬೀಳುವ ಕನಸು ಬೇರೆ ಬೇರೆ ಅಲ್ಲ,
ಮತ್ತು
ನಾನು ನಿದ್ದೆಗಿಳಿದಾಗ
ನೀನು ಎದ್ದು ಕೂತ ಉದಾಹರಣೆ ಇಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!