Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರದ ನಿರ್ದೇಶನದಂತೆ ಜಲ್ ಜೀವನ್ ಮಿಷನ್ ಅನುಷ್ಠಾನಗೊಳಿಸಿ

ಮನೆ- ಮನೆಗೆ ಒದಗಿಸುವ ಜಲ್ ಜೀವನ್ ಮಿಷನ್ ಕಾಮಗಾರಿಗಳನ್ನು ಸರ್ಕಾರದ ನಿರ್ದೇಶನದಂತೆ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ ಅವರು ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀರಂಗಪಟ್ಟಣದ -43 ಜನವಸತಿ, ಮಂಡ್ಯ-82, ಪಾಂಡವಪುರ-49, ಮಳವಳ್ಳಿ-25 ಒಟ್ಟು 199 ಜನವಸತಿಗಳಿಗೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರತಿ ಕುಟುಂಬಕ್ಕೆ ನಲ್ಲಿ ಒದಗಿಸಲು ಯೋಜನಾ ವೆಚ್ಚ 25,000/- ರೂ ಮೀರಿದರೆ ಅವುಗಳನ್ನು ಮೊತ್ತಮ್ಮೆ ಪರಿಶೀಲಿಸಿ ಅಧಿಕಾರಿಗಳಿಂದ ವರದಿ ಪಡೆದು ಸಭೆಗೆ ಮಂಡಿಸುವಂತೆ ತಿಳಿಸಿದರು.

ಹತ್ತಕ್ಕಿಂತ ಕಡಿಮೆ ಜನವಸತಿ ಇರುವ ಸ್ಥಳಗಳಲ್ಲಿ ಮನೆ-ಮೆನೆಗೆ ನೀರು ಒದಗಿಸಲು ಮಂಡಿಸಿರುವ ಯೋಜನಾ ವರದಿಗಳಿಗೆ ನಿಗದಿಯಾಗಿರುವ ಅನುದಾನವನ್ನು ಗಮನಿಸಿದರೆ ಇದಕ್ಕೆ ಬೇರೆ ಯೋಜನೆ ನೀಡಿ ಕಡಿಮೆ ವೆಚ್ಚದಲ್ಲಿ ಮನೆಗೆ ನೀರು ಒದಗಿಸಬಹುದು. ಇದರಿಂದ ಅನುದಾನ ವ್ಯರ್ಥವಾಗುವುದಿಲ್ಲ, ಈ ಬಗ್ಗೆ ಚಿಂತಿಸಬೇಕಿದೆ ಎಂದರು.

ಈ ಯೋಜನೆಯಡಿ ಬಹಳಷ್ಟು ಕಾಮಗಾರಿಯ ವ್ಯಾಪ್ತಿ ಗ್ರಾಮದ ಒಳಭಾಗದಲ್ಲೇ ಇರುತ್ತದೆ. ಓವರ್ ಹೆಡ್ ಟ್ಯಾಂಕ್‍ಗಳ ನಿರ್ಮಾಣ ಮಾಡುವಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದೇ ಎಂದು ಪರಿಶೀಲಿಸಿ ಅವರಿಂದ ವರದಿ ಪಡೆದುಕೊಳ್ಳಿ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ತೊಂದರೆಯಾಗುವುದು ಬೇಡ ಎಂದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲು ಸುಸ್ಥಿರ ಮೂಲಗಳನ್ನು ಗುರುತಿಸಲಾಗುವುದು. ಇದರೊಂದಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಅವಶ್ಯಕತೆಯನ್ನು ಗುರುತಿಸಿ ಅದರ ಅನುಸಾರ ಬೋರ್‍ವೆಲ್‍ಗಳ ವ್ಯವಸ್ಥೆ ಮಾಡಿ ಎಂದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ಶಾಲಾ, ಕಾಲೇಜು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಮಾರ್ಗಸೂಚಿಯಲ್ಲಿ ಸರ್ಕಾರಿ ಕಟ್ಟಡಗಳಿಗೆ ಅವಕಾಶವಿದ್ದಲ್ಲಿ, ಗ್ರಾಮ ಪಂಚಾಯಿತಿ ಕಚೇರಿ, ರೈತ ಸಂಪರ್ಕ ಕೇಂದ್ರಗಳಿಗೂ ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರ ತಮ್ಮಣ್ಣ, ವಿ.ಸಿ.ನಾಲೆ ಕಾರ್ಯಪಾಲಕ ಅಭಿಯಂತರ ನಾಗರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಆರ್ ಅಶೋಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜವರೇಗೌಡ ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್.ನಿರ್ಮಲ, ಜಿ.ಪಂ.ಯೋಜನಾಧಿಕಾರಿ ಧನರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!