Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಡು ಕಂಡ ಅಪರೂಪದ ರಾಜಕಾರಣಿ ಎಸ್‌.ಡಿ ಜಯರಾಂ: ಕೆ.ಟಿ ಶ್ರೀಕಂಠೇಗೌಡ

ಮಾಜಿ ಸಚಿವ ಎಸ್‌.ಡಿ ಜಯರಾಮ್ ಅವರು ನಾಡು ಕಂಡ ಅಪರೂಪದ ರಾಜಕಾರಣಿಯಾಗಿದ್ದರು, ಅಲ್ಲದೇ ಮಂಡ್ಯ ಜಿಲ್ಲೆಗೆ ಹೊಸ ದಿಕ್ಸೂಚಿ ನಾಯಕರಾಗಿ ಅಭಿವೃದ್ಧಿಯ ಹರಿಕಾರರಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಮಾಜಿ ಶಾಸಕ ಕೆ‌. ಟಿ ಶ್ರೀಕಂಠೇಗೌಡ ಹೇಳಿದರು.

ಮಂಡ್ಯ ನಗರದ ಹೊಸಹಳ್ಳಿ ವೃತ್ತದಲ್ಲಿರುವ ಎಸ್. ಡಿ. ಜಯರಾಂ ಆಟೋ ನಿಲ್ದಾಣದ ಬಳಿ ನಡೆದ ಮಾಜಿ ಸಚಿವ ಎಸ್. ಡಿ. ಜಯರಾಮ್ ಅವರ ಪುಣ್ಯಸ್ಮರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

.ನನ್ನಂತಹ ಎಷ್ಟು ಜನರಿಗೆ ನಾಯಕತ್ವದ ಶಕ್ತಿಯನ್ನು ತುಂಬಿ ಬೆಳೆಸಿದ ಅವರು, ಜಿಲ್ಲೆಯಲ್ಲಿ ತಮ್ಮದೇ ಆದ ನಾಯಕರ ಪಡೆ ಕಟ್ಟಿಕೊಂಡು ಅಭಿವೃದ್ಧಿಯ ಪಥದೆಡೆಗೆ ಮುನ್ನುಡಿಯ ಹಾಕಿದ್ದರು ಎಂದರು.

ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರನ್ನು ಹುಟ್ಟು ಹಾಕಿದ ಕೀರ್ತಿ ನಮ್ಮ ನೆಚ್ಚಿನ ನಾಯಕರಾದ ಎಸ್.ಡಿ. ಜಯರಾಂ ಅವರಿಗೆ ಸಲ್ಲುತ್ತದೆ , ಅಂಬರೀಶ್ ಅವರ ಒಡನಾಡಿಯಾಗಿದ್ದ ಎಸ್‌.ಡಿ. ಜಯರಾಮ್ ಅವರು ಗ್ರಾಮೀಣ ಅಭಿವೃದ್ಧಿಯಲ್ಲಿ ಜನಪ್ರಿಯರಾಗಿದ್ದರು ಎಂದು ಸ್ಮರಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಎಸ್ ಡಿ ಜಯರಾಂ ಅಭಿಮಾನಿಗಳು ಮತ್ತು ಅವರ ಬೆಂಬಲಿಗರು ಪಾಲ್ಗೊಂಡು ಪ್ರತಿಮೆಗೆ ಪುಷ್ಪ ನಮನ, ದೀಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಕೆ.ಟಿ ಶಂಕರೇಗೌಡ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್, ಕಮ್ಮನಾಯಕನಹಳ್ಳಿ ಗ್ರಾಪಂ ಸದಸ್ಯ ಅನಿಲ್ ಕುಮಾರ್, ಮಂಗಲ ಗ್ರಾಪಂ ಸದಸ್ಯ ಮಹದೇವ್, ಕರವೇ
ಕಮ್ಮನಾಯಕನಹಳ್ಳಿ, ಮಂಜುನಾಥ್, ಮುಮೆಂಟೊ ಲೋಕೇಶ್, ವೈದ್ಯರಾದ ಡಾ.ಅಶ್ವಿನ್, ತಗ್ಗಹಳ್ಳಿ ಮಂಜು , ಗಂಗಣ್ಣ, ನಿಂಗಣ್ಣ ಹಾಗೂ ಎಸ್ ಡಿ ಜಯರಾಮ್ ಅಭಿಮಾನಿಗಳ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!