Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಂದಾಯ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ : ಎಲ್.ಆರ್.ಶಿವರಾಮೇಗೌಡ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ರೈತರು ತಮ್ಮ ಭೂಮಿ ಸರ್ವೇ ಮಾಡಿಸಿಕೊಳ್ಳಲು ಸರ್ವೇಯವರಿಗೆ ಹಣ ನೀಡುವ ಪರಿಸ್ಥಿತಿ ಎದುರಾಗಿದೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಆರೋಪಿಸಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಕಂಚನಹಳ್ಳಿ, ಆರಣಿ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸರ್ವೇ ಅಧಿಕಾರಿಗಳು ದುಡ್ಡು ಕೊಡದಿದ್ದರೆ ಸರ್ವೇ ಮಾಡಲು ಹೋಗುವುದೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣ ವಾಗಿದೆ, ಇಷ್ಟೆಲ್ಲ ಆದರೂ ಜನಪ್ರತಿನಿಧಿಗಳು ಸುಮ್ಮನೆ ಇರುವುದಾದರೂ ಏಕೆ ? ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ  ಉತ್ತರಿಸಲಿ ಎಂದು ಪ್ರಶ್ನಿಸಿದರು.

ನನ್ನ ತಾಯಿಯ ಸ್ವಗ್ರಾಮ ಕಂಚನಹಳ್ಳಿಗೆ ನನ್ನ ಅವಧಿಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟಿದ್ದು ಬಿಟ್ಟರೆ ಚಲುವರಾಯಸ್ವಾಮಿ ಆಗಲಿ ಸುರೇಶ್ ಗೌಡ ಆಗಲಿ ಅಭಿವೃದ್ಧಿ ಮಾಡಲು ಆಗಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ 28.000 ಎಕರೆ ಭೂಮಿ ಮಂಜೂರು ಮಾಡಿಕೊಟ್ಟಿದ್ದೇನೇ ಎಂದು ಹೇಳಿ ಅಭಿವೃದ್ಧಿ ಮಾಡುವಲ್ಲಿ ಇವರು ಇಬ್ಬರು ಕೂಡ ವಿಫಲರಾಗಿದ್ದಾರೆ ಎಂದು ದೂರಿದರು.

ಕದಬಹಳ್ಳಿಯಲ್ಲಿ ಸ್ವಾಭಿಮಾನಿ ಪರ್ವ ಸಮಾವೇಶ ಮಾಡಿದ್ದೇನೆ ಜ.22ರಂದು ಬೃಹತ್ ಎಲ್ ಆರ್ ಎಸ್ ಸ್ವಾಭಿಮಾನಿ ಸಮಾವೇಶವನ್ನ ಕೊಪ್ಪ ಹೋಬಳಿಯಲ್ಲಿ ಹಮ್ಮಿಕೊಂಡಿದ್ದೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!