Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೈರಾಗಿದ್ದರೂ ಅಮಾನತು : ಪಾರ್ಥಿಬನ್ ವಿರುದ್ಧದ ಕ್ರಮ ಹಿಂಪಡೆದ ಸರ್ಕಾರ

ಡಿಎಂಕೆ ಸಂಸದ ಎಸ್. ಆರ್. ಪಾರ್ಥಿಬನ್ ಅವರು ಸದನದಲ್ಲಿ ಗೈರುಹಾಜರಾಗಿದ್ದರೂ ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಳಿಸಿರುವ ಘಟನೆ ಲೋಕಸಭೆಯಲ್ಲಿ ಇಂದು ನಡೆದಿದೆ.

ಇದರಿಂದ ಎಚ್ಚೆತ್ತ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆದಿದೆ. ‘ತಪ್ಪಾಗಿ’  ಅಮಾನತು ಮಾಡಬೇಕಾದವರ ಜೊತೆಗೆ ಡಿಎಂಕೆ ಸಂಸದ ಪಾರ್ಥಿಬನ್ ಅವರ ಹೆಸರನ್ನು ಸೇರಿಸಿದ ಕಾರಣ ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ, ಸದಸ್ಯರನ್ನು ಗುರುತಿಸುವಲ್ಲಿ ಸಿಬ್ಬಂದಿಯ ಕಡೆಯಿಂದ ತಪ್ಪಾಗಿರುವ ಕಾರಣ ಪಾರ್ಥಿಬನ್ ಹೆಸರನ್ನು ಅಮಾನತುಗೊಳಿಸಿದ ಲೋಕಸಭಾ ಸದಸ್ಯರ ಪಟ್ಟಿಯಿಂದ ಹಿಂಪಡೆಯಲಾಗಿದೆ ಎಂದು ಹೇಳಿದರು.

ತಪ್ಪಾದ ಗುರುತಿನ ಪ್ರಕರಣವಾಗಿರುವುದರಿಂದ ಸದಸ್ಯರ ಹೆಸರನ್ನು ಕೈಬಿಡುವಂತೆ ಸ್ಪೀಕರ್‌ ಅವರಿಗೆ ಮನವಿ ಮಾಡಿದ್ದೇನೆ ಎಂದು ಜೋಶಿ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!