Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉಳಿಗಾಲ‌ವಿಲ್ಲ-ಜೆಡಿಎಸ್ ಜೋಕರ್ ಇದ್ದಂತೆ: ಆರ್‌.ಅಶೋಕ್

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ,ಜೆಡಿಎಸ್ ಪಕ್ಷ ಜೋಕರ್ ಇದ್ದಂತೆ.ಅದು ಅವಕಾಶಕ್ಕಾಗಿ ಕಾಯುತ್ತದೆ. ಆದರೆ ರಾಜ್ಯದ ಜನರು ತೀರ್ಮಾನ ಮಾಡಿದ್ದು,ಮತ್ತೆ ಬಿಜೆಪಿ ಸರ್ಕಾರ ಜಾರಿಗೆ ಬರಲಿದೆ ಎಂದು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.

ಶ್ರೀರಂಗಪಟ್ಟಣದಲ್ಲಿ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಅವರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಏನೂ ಮಾಡಿಲ್ಲ
ಜೆಡಿಎಸ್‌ನವರು ಪಂಚರತ್ನ ಮಾಡ್ತೀವಿ ಅಂತಾರೆ.ಕಾಂಗ್ರೆಸ್‌ನವರು ಪ್ರಜಾಧ್ವನಿ ಮಾಡ್ತಾ ಇದ್ದಾರೆ. ಪಂಚರತ್ನ, ಪ್ರಜಾಧ್ವನಿ ಎನ್ನುವ ಜೆಡಿಎಸ್,ಕಾಂಗ್ರೆಸ್ ಪಕ್ಷಗಳಿಗೆ ಜನರು 14 ತಿಂಗಳು ಅವಕಾಶ ಕೊಟ್ಟಿದ್ರು.ಆದರೆ 14 ತಿಂಗಳು ಹೊಡೆದಾಟ ಬಡಿದಾಟ ಅಷ್ಟೇ ಆಗಿದ್ದು.

ಕುಮಾರಸ್ವಾಮಿ ನನ್ನ ಪೀವನ್ ತರ ನೋಡ್ತಾ ಇದ್ರು ಅಂದ್ರೆ, ಕಾಂಗ್ರೆಸ್‌ನವರು ಕಿರುಕುಳ ಕೊಡ್ತಾರೆ ಅಂದ್ರು. ಈಗ ಜೆಡಿಎಸ್ 15 -20 ಸ್ಥಾನಗಳಷ್ಟೇ ಗೆಲ್ಲೋದು. ಅಧಿಕಾರ ಕೊಟ್ಟಾಗ ಕಾಂಗ್ರೆಸ್, ಜೆಡಿಎಸ್ ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕತ್ತಿ ಮಸೆಯುತ್ತಿದ್ದಾರೆ
ಸಿದ್ದರಾಮಯ್ಯ ಅವರು ಯಡವಟ್ಟು ಮಾಡಿಕೊಂಡಿರೋದಕ್ಕೆ ಹುಟ್ಟ ಬಟ್ಟೆಯಲ್ಕೇ ಮೈಸೂರಿನವರು ಓಡಿಸಿದರು. ಅಲ್ಲಿಂದ ಬಾದಾಮಿಗೆ ಹೋಗಿದ್ರು, ಅಲ್ಲೂ ಸಹ ಓಡಿಸಿದ್ರು. ಈಗ ಕೋಲಾರಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಕೋಲಾರದಲ್ಲೂ ಗೆಲ್ಲಲ್ಲ. ಸಿದ್ದು ಸೋಲಿಸಲು ಎಲ್ಲಾ ರೆಡಿಯಾಗಿದೆ. ಪರಮೇಶ್ವರ್ ಹಾಗೂ ಖರ್ಗೆಯನ್ನು ಸಿದ್ದರಾಮಯ್ಯ ಸೋಲಿಸಿದ್ರು.ಈಗ ಸಿದ್ದರಾಮಯ್ಯ ಮೇಲೆ ಬೂತಯ್ಯನ ಮಗ ಅಯ್ಯು ತರ ಖರ್ಗೆ, ಪರಮೇಶ್ವರ್ ಕತ್ತಿ ಮಸೆಯುತ್ತಿದ್ದಾರೆ.

ಕತ್ತಿಗೆ ಡಿಕೆಶಿ ಪೌಡರ್ ಹಾಕ್ತಾ ಇದ್ದಾರೆ.
ಮೂರು ಜನರು ಸೇರಿ ಸಿದ್ದರಾಮಯ್ಯರನ್ನು ಮುಗಿಸುತ್ತಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರಿಗೆ ಟಿಪ್ಪು ಮೇಲೆ ಪ್ರೀತಿ. ಟಿಪ್ಪು ಪ್ರೀತಿ ಮಾಡುವವರು ಪಾಕಿಸ್ತಾನದಲ್ಲಿ ಇದ್ದಾರೆ, ಅಲ್ಲಿ ಹೋಗಿ ನಿಂತುಕೊಳ್ಳಿ ಎಂದು ವ್ಯಂಗ್ಯವಾಡಿದರು.

ಕುಂಟೆತ್ತು
ಎಂಪಿ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಹೆಚ್‌.ಡಿ.ಕುಮಾರಸ್ವಾಮಿ ನಾವು ಜೋಡೆತ್ತು ಎಂದ್ರು.
ರಾಜ್ಯದ ಜನರು ಅವರ ಕಾಲು ಮುರಿದು ಕುಂಟೆತ್ತು ಮಾಡಿದ್ದಾರೆ ಎಂದರು.

ಯುವಕರಿಗೆ ಅವಕಾಶ ಕೊಡಿ
ಮಂಡ್ಯ ಜನ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳ ನೋಡಿ ಸಾಕಾಗಿದ್ದಾರೆ. ಹೊಸಬರಿಗೆ ಅವಕಾಶ ಕೊಡಿ.
ಹೊಸಬರು, ಯವಕರು ಏನು ಮಾಡ್ತಾರೆ ನೋಡೋಣ ಒಂದು ಅವಕಾಶ ಕೊಡಿ ಎಂದ ಅವರು, ಸಚ್ಚಿದಾನಂದನಿಗೆ ಆಶೀರ್ವಾದ ಮಾಡಿ ಎಂದು ಜನತೆಗೆ ಮನವಿ ಮಾಡಿದರು.

ಆಟ ನಡೆಯಲ್ಲ
ನರೇಂದ್ರ ಮೋದಿ ಅವರು ಬಂದು ನಿಮ್ಮ ಬಳಿ ಮತ ಕೇಳ್ತಾರೆ.ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಬಂದಿದ್ದರು.ಕಾಂಗ್ರೆಸ್, ಜೆಡಿಎಸ್ ಮಾಟ-ಮಂತ್ರ ಮಾಡಿದ್ರು ಬಿಜೆಪಿ ಗೆಲುವು ತಡೆಯಲಾಗಲ್ಲ.
104 ಸ್ಥಾನ ಬಂದಾಗಲೇ ಸರ್ಕಾರ ಮಾಡಿದ್ದೇವೆ. ಮೋದಿ, ಶಾ ಮುಂದೆ ಇವರ ಆಟ ನಡೆಯಲ್ಲ ಎಂದರು.

ಸಚಿವ ಆರ್‌.ಅಶೋಕ್, ಶಾಸಕ ಸತೀಶ್ ರೆಡ್ಡಿ ಹಾಗೂ ಸಚ್ಚಿದಾನಂದ ಅವರನ್ನು ಸಾವಿರಾರು  ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ವೇದಿಕೆಗೆ ಕರೆದು ತಂದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರಿಗೆ ಬೃಹತ್ ಗಾತ್ರದ ಕಿತ್ತಳೆ ಹಣ್ಣಿನ ಹಾರ ಹಾಕಿ ಸಚ್ಚಿದಾನಂದ ಬರ ಮಾಡಿಕೊಂಡರು. ಶಾಸಕ ಸತೀಶ್ ರೆಡ್ಡಿ,ಮುಖಂಡರಾದ ಲಿಂಗರಾಜು, ಶ್ರೀಧರ್ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!