Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ

ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿಯ ಸುಂಡಹಳ್ಳಿ ಹಾಗೂ ಇಂಡುವಾಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚೆಸ್ಕಾಂ ಅಧ್ಯಕ್ಷರು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಅವರು ಗುದ್ದಲಿಪೂಜೆ ನೆರವೇರಿಸಿದರು

ಸುಂಡಹಳ್ಳಿ ಗ್ರಾಮದಲ್ಲಿ ವಾಟರ್ ಟ್ಯಾಂಕ್ ಮತ್ತು ಕುಡಿಯುವ ನೀರು, ಇಂಡವಾಳು ಗ್ರಾಮದಲ್ಲಿ ಅಂಗನವಾಡಿ ಮತ್ತು ಜೆಜೆಎಂ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಾವಣ ಮಾಸ ಪ್ರಾರಂಭವಾಗಿರುವುದರಿಂದ ನಿಂತು ಹೋಗಿರುವ ಹಳೇ ಕೆಲಸಗಳ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಿದ್ದೇವೆ ಎಂದರು.

ನೀರು ಕೊಡಲ್ಲ ಎನ್ನುವ ಆತಂಕ ಬೇಡ, ನೀರು ಕೊಡುತ್ತೇವೆ ಕಾನೂನಾತ್ಮಕ ಕಾರಣಗಳಿಂದ ಕಾನೂನು ಬದ್ಧವಾಗಿ ಸರ್ಕಾರ ಅಧಿಕಾರಿಗಳು ಮಾಡಿದ್ದಾರೆ. ರೈತರು ಧೈರ್ಯವಾಗಿ ಇರಿ ಯಾವುದೇ ತರಹದ ಯೋಚನೆ ಮಾಡುವುದು ಬೇಡ ಧೈರ್ಯವಾಗಿ ಇರಿ ನೀರು ಕೊಡುತ್ತೇವೆ ಎಂದು ಹೇಳಿದರು.

ಸುಂಡಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ವಾಟರ್ ಟ್ಯಾಂಕ್, ಇಂಡವಾಳು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ, 75 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಂಪೌಂಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು,ಒಟ್ಟಾರೆ ಇಂಡುವಾಳು ಗ್ರಾಮದ ಅಭಿವೃದ್ಧಿಗೆ ಕಂಕಣ ಬದ್ಧವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಗ್ರಾಮ ಪಂಚಾಯತಿ ಸದಸ್ಯರಾದ ತೇಜ,ಸತೀಶ, ಚಿಕ್ಕಯ್ಯ, ಮುಖಂಡರಾದ ಸಿದ್ದರಾಜು, ಕಾಳೇನಹಳ್ಳಿ ಮಂಜು,ಸೋಮ ಶೇಖರ್, ಸಿಡಿಪಿಓ ಕುಮಾರಸ್ವಾಮಿ, ಪಿಡಿಒ ಯೋಗೇಶ್,ಗುತ್ತಿಗೆದಾರ ಸುದೀರ್ ನಾಯ್ಡು,ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!