Wednesday, July 24, 2024

ಪ್ರಾಯೋಗಿಕ ಆವೃತ್ತಿ

ಭಾರತದ ಲೋಕಪಾಲ್ ಅವರಿಗೆ ಗೌರವ ಸಲ್ಲಿಕೆ

ಮದ್ದೂರು ಮಾರ್ಗದ ಮೂಲಕ ಮೈಸೂರಿಗೆ ತೆರಳುತ್ತಿದ್ದ ಭಾರತದ ಪ್ರಥಮ ಲೋಕಪಾಲ್ ಪಿನಾಕಿ ಚಂದ್ರ ಘೋಷ್ ಅವರನ್ನು ಸಿಪಾಯಿ ಹೋಟೆಲ್ ಬಳಿ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಅಭಿನಂದಿಸಿ, ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಾಯಿ ಶ್ರೀನಿವಾಸ್, ಭಾರತದ ಲೋಕಪಾಲ್ ಸಂಸ್ಥೆಯ ಪಿನಾಕಿ ಚಂದ್ರ ಘೋಷ್ ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದವರು. ಪಿನಾಕಿ ಚಂದ್ರ ಘೋಷ್ ಅವರು ತಮ್ಮ ದಿಟ್ಟ ನ್ಯಾಯಾದೇಶಗಳಿಂದ ದೇಶದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣದಲ್ಲಿ ಬ್ರಹ್ಮಾಸ್ರ ಎಂದೇ ಪ್ರಖ್ಯಾತರಾಗಿದ್ದಾರೆ. ಅವರನ್ನು ಗುರುತಿಸಿ 2019 ರಲ್ಲಿ ಸರ್ಕಾರ ಅವರನ್ನು ಭಾರತದ ಮೊದಲ ಲೋಕಪಾಲ ಮುಖ್ಯಸ್ಥರನ್ನಾಗಿ ಮಾಡಿರುವುದು ಸಂತಸದ ಸಂಗತಿ.ಲೋಕಪಾಲ ಆಗಿರುವ ಪಿನಾಕಿ ಚಂದ್ರ ಅವರನ್ನು ಗೌರವಿಸಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ವಿಜಯ್ ಕುಮಾರ್, ವಕೀಲ ನವೀನ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!