Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಮಂಡ್ಯದ ಹುಡುಗ

ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ತಿರುಗಿ‌ ನೋಡುವಂತೆ ಮಾಡಿದ ಮಂಡ್ಯದ ಹುಡುಗ ವಿಜಯ್ ಕಿರಗಂದೂರು ಈಗ ವಿಶ್ವ ಪ್ರಸಿದ್ಧ ಹೆಸರು.

ಒಂದು ಕಾಲದಲ್ಲಿ ಬಿಗ್ ಬಜೆಟ್ ಚಿತ್ರಗಳೆಂದರೆ ಬಾಲಿವುಡ್ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬಜೆಟ್ ನಲ್ಲಿ ನಿರ್ಮಿಸಿ ಮಂಡ್ಯ ಅಂದ್ರೆ ಇಂಡಿಯಾ ಎಂಬ ಮಾತಿಗೆ ಅನ್ವರ್ಥವಾಗುವಂತೆ ಮಾಡಿದವರು ವಿಜಯ್ ಕಿರಗಂದೂರು ಎಂದರೆ ತಪ್ಪಾಗಲಾರದು.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ 2 ನಿರ್ಮಿಸಿ ಸಾವಿರಾರು ಕೋಟಿ ವ್ಯವಹಾರ ಮಾಡುವ ಮೂಲಕ ವಿಶ್ವದಲ್ಲಿ ಸಂಚಲನ ಮೂಡಿಸಿದ್ದಾರೆ. ಬಾಲಿವುಡ್ ಗೆ ಸಮನಾಗಿ ಕನ್ನಡ ಭಾಷೆಯಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿ ಹಿಂದಿ ಚಿತ್ರರಂಗವೇ ಶಾಕ್ ಗೆ ಒಳಗಾಗುವಂತೆ ಯಾರಪ್ಪಾ ಈ ವಿಜಯ್ ಕಿರಗಂದೂರು ಎನ್ನುವಂತೆ ಬೆಚ್ವಿ ಬೀಳುವಂತೆ ಮಾಡಿದ್ದಾರೆ.

ಮಂಡ್ಯ ಅಂದ್ರೆ ಇಂಡಿಯಾ ಎನ್ನುವ ಮಾತಿಗೆ ತಕ್ಕಂತೆ ಕನ್ನಡ ಸಿನಿಮಾಗೂ ದೊಡ್ಡ ಬಜೆಟ್ ಹಾಕಿ ನಿರ್ಮಾಣ ಮಾಡುವ ವಿಜಯ್ ಕಿರಗಂದೂರು ಮಂಡ್ಯದ ಖ್ಯಾತಿಯನ್ನು ವಿಶ್ವ ಮಟ್ಟದಲ್ಲಿ ಸಾರಿದ್ದಾರೆ.

ಟಾಲಿವುಡ್ ನಟ ಪ್ರಭಾಸ್ ಅಭಿನಯದ ಸಲಾರ್, ಮಲಯಾಳಂ ಚಿತ್ರರಂಗದ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಟೈಸನ್‌, ಕನ್ನಡದ ಶ್ರೀಮುರಳಿ ಅಭಿನಯದ ಬಘೀರ, ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಇವರ ಮುಂದಿನ ಬಿಗ್ ಬಜೆಟ್ ಚಿತ್ರಗಳಾಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!