Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ವಕೀಲೆ ಮೇಲೆ ಅಮಾನುಷವಾಗಿ ಹಲ್ಲೆ

ಬಾಗಲಕೋಟೆ:  ಸ್ತ್ರೀ ಸ್ವಾತಂತ್ರ್ಯ ಕೊಟ್ಟ ಬಸವನಾಡಿನ ನೆಲದಲ್ಲಿ ನಡೆದ ಮಹಿಳಾ ದೌರ್ಜನ್ಯವನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ತೀವ್ರವಾಗಿ ಖಂಡಿಸಿದೆ.

ಮಹಿಳಾ ವಕೀಲೆಯೊಬ್ಬರ ಮೇಲೆ ಮಹಾಂತೇಶ್ ಚೋಳದಗುಡ್ಡ ಎಂಬ ವ್ಯಕ್ತಿ ಸಾರ್ವಜನಿಕರ ಎದುರೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ಜರುಗಿದೆ. ಗಾಯಗೊಂಡ ಮಹಿಳೆ ಮತ್ತು ಆಕೆಯ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಈ ಅಮಾನವೀಯ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಮಂದಿ ವಕೀಲೆ ಸಂಗೀತಾ ಕ್ಕಿಕ್ಕೇರಿ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಸ್ತ್ರೀ ಸ್ವಾತಂತ್ರ್ಯ ಕೊಟ್ಟ ಬಸವನಾಡಿನ ನೆಲದಲ್ಲಿ ನಡೆದ ಮಹಿಳಾ ದೌರ್ಜನ್ಯವನ್ನು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಹಿಳಾ ನ್ಯಾಯವಾದಿಯಾದ #ಸಂಗೀತ_ಶಿಕ್ಕೇರಿ ಅವರ ಮೇಲೆ “ಮಾಂತೇಶ್ ಚೊಳಚಗುಡ್ಡ” ಎಂಬ ನೀಚ ವ್ಯಕ್ತಿ ನಡುರಸ್ತೆಯಲ್ಲಿ ಈ ರೀತಿಯಾಗಿ ತಳಿಸುತ್ತಿರುವುದನ್ನು ವಿಕೃತ ಮನಸ್ಸಿನವರು ಅಲ್ಲಿ ನಿಂತು ನೋಡುತ್ತಿರುವ ಆ ಸ್ಥಳಿಯರಿಗೆ ಏನೊ ಹೇಳಬೇಕೋ ಹಾಗೂ ಇಂತಹ ನೀಚ ವ್ಯಕ್ತಿಗೆ ಕಠಿಣ ಶಿಕ್ಷೆಗೆ ಆಗಲೇಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ  ನಾಡಿನ ಹಲವು ಸಾಮಾಜಿಕ ಸಂಘಟಕರು, ನಾಗರೀಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯ ಮಹಿಳಾ ವಕೀಲರ ಮೇಲಿನ ಹಲ್ಲೆಯನ್ನು ಅಖಿಲ ಭಾರತ ವಕೀಲರ ಓಕ್ಕೂಟವು (AILU) ಖಂಡಿಸುತ್ತದೆ ಎಂದು ಸಂಘದ  ಪದಾಥಿಕಾರಿಗಳಾದ ಶ್ರೀನಿವಾಸ್ ಕುಮಾರ್ ರವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!