Friday, September 20, 2024

ಪ್ರಾಯೋಗಿಕ ಆವೃತ್ತಿ

ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಆದರ್ಶವಾಗಲಿ: ದಿನೇಶ್ ಗೂಳಿಗೌಡ

ಸಿಕ್ಕ ಅವಕಾಶಗಳನ್ನು ಬಳಸಿಕೊಂಡು, ಓಂಲಿಪಿಕ್ಸ್‌ ಮತ್ತು ಬೇರೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಡಿ, ಕೀರ್ತಿ ತಂದವರನ್ನು ಆದರ್ಶವಾಗಿಟ್ಟುಕೊಂಡು ಛಲ ಬಿಡದೇ ಸಾಧನೆ ಮಾಡಿ, ಗುರಿ ತಲುಪಿ ಎಂದು ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ನಾಗಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬ್ರಹ್ಮದೇವರಹಳ್ಳಿಯ ರಾಮನಾಥಸ್ವಾಮಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಕೆಟ್‌, ವಿವಿಧ ಅಥ್ಲೆಟಿಕ್ಸ್‌ ಗೇಮ್‌ಗಳು, ಓಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ, ದೇಶಕ್ಕೆ ದೊಡ್ಡ ಕೀರ್ತಿ ತಂದವಲ್ಲಿ ಹಳ್ಳಿಯ ಮಕ್ಕಳೇ ಹೆಚ್ಚಿದ್ದಾರೆ. ಅವರ ಪ್ರಯತ್ನ, ಜೀವನ ಚರಿತ್ರೆಗಳನ್ನು ಅರಿತು ಅವರನ್ನು ಮಾದರಿಯಾಗಿರಿಸಿಕೊಳ್ಳಿ ಎಂದರು.

ಗ್ರಾಮೀಣ ಮಟ್ಟದಲ್ಲಿ ಇಂಥ ಕ್ರೀಡಾಕೂಟಗಳು ಹೆಚ್ಚು ನಡೆಯಬೇಕು. ಅದರಿಂದ ನಮ್ಮಲ್ಲಿ ಪೈಪೋಟಿಯ ಜತೆಗೆ ಸೌಹಾರ್ದತೆ ಬೆಳೆಯುತ್ತದೆ. ಸರ್ಕಾರವೂ ಸಹ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ, ಸಹಕಾರ ಕೊಡುತ್ತಿದೆ. ಅದನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ, ಇಂಥ ಕ್ರೀಡಾಕೂಟಗಳಿಗೆ ಒಂದು ಅರ್ಥ ಬರುತ್ತದೆ. ದೈಹಿಕ ಶಿಕ್ಷಕರು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಿ, ಉತ್ತೇಜಿಸಿದರೆ ಕ್ರೀಡಾ ಪ್ರತಿಭೆಗಳು ಹೊರ ಬರಲು ಅವಕಾಶವಾಗುತ್ತದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.

ʼಎ ಸೌಂಡ್‌ ಮೈಂಡ್‌ ಈಸ್‌ ಇನ್‌ ಅ ಸೌಂಡ್‌ ಬಾಡಿʼ ಎಂದರೆ ದೇಹ ಸದೃಢವಾಗಿದ್ದರೆ, ಆರೋಗ್ಯ ಉತ್ತಮವಾಗಿರುತ್ತದೆ. ಹಾಗಿದ್ದಲ್ಲಿ ನಮ್ಮ ಮನಸ್ಸೂ ಆರೋಗ್ಯಕರವಾಗಿರುತ್ತದೆ ಎಂದರ್ಥ. ಹಾಗಿರಬೇಕು ಎಂದರೆ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಕ್ರಿಯಾಶೀಲವಾಗಿರಬೇಕು ಎಂದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು ಎಂದರು.

ಪ್ರಾಥಮಿಕ ಹಂತದಲ್ಲಿ ಯಾವ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತೇವೆ. ಅವು ನಮ್ಮ ಜೀವನದ ಕೊನೆಯವರೆಗೆ ಉಳಿಯುತ್ತದೆ. ಉದಾಹರಣೆಗೆ ನಾವು ಚಿಕ್ಕವರಿದ್ದಾಗ ಖೋಖೋ ಕಬಡ್ಡಿ, ಬ್ಯಾಡ್ಮಿಂಟನ್‌ ಮುಂತಾದವನ್ನು ಆಡಿ ಅವುಗಳ ಬಗ್ಗೆ ತಿಳಿದುಕೊಂಡರೆ, ನಮ್ಮ ಜೀವನದ ಕೊನೆಯವರೆಗೂ ನಾವು ಅಂಥ ಆಟಗಳ ಬಗ್ಗೆ ಆಸಕ್ತಿ ಹೊಂದಿರುತ್ತೇವೆ. ಹಾಗಾಗಿ ನಾವು ಬಾಲ್ಯದಲ್ಲಿ ಆಸಕ್ತಿ ವಹಿಸಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅವುಗಳಲ್ಲಿ ವಿಜೇತರಾಗುವುದರಿಂದ ನಾವು ಹುಟ್ಟಿದ ಊರಿಗೆ, ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬಹುದು. ಇಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ಗೆದ್ದವರು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗೆದ್ದು, ರಾಷ್ಟ್ರೀಯ ಮಟ್ಟದಲ್ಲಿ ಆಡಿ, ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ನಾನು ಹಾರೈಸುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವಮ್ಮ ಧರ್ಮ ಪ್ರಸಾದ್, ಗ್ರಾಪಂ ಸದಸ್ಯರಾದ ರವಿ, ಮಂಡ್ಯ ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್. ನಾಗಮಂಗಲ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ.ರುದ್ರೇಶ್ ಹಾಗೂ ಶಿಕ್ಷಣ ಸಂಯೋಜಕರುಗಳು. ತಾಲ್ಲೂಕಿನ ಎಲ್ಲಾ ಸಿ.ಆರ್. ಪಿ.ಗಳು .ದೈಹಿಕ ಶಿಕ್ಷಕರು, ಕ್ರೀಡಾ ಪಟುಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!