Friday, September 20, 2024

ಪ್ರಾಯೋಗಿಕ ಆವೃತ್ತಿ

ISCA ಕಾರ್ಯಕಾರಿ ಸಮಿತಿಗೆ ಡಾ. ಶೋಭಿತ್ ರಂಗಪ್ಪ ಆಯ್ಕೆ

ಮೈಸೂರು ಯುವ ವಿಜ್ಞಾನಿ ಡಾ.ಶೋಭಿತ್ ರಂಗಪ್ಪ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್‌ ISCA (Indian Science Congress Association) ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಫಾರ್ ಮಾಲಿಕ್ಯೂಲರ್ ಮೆಡಿಸಿನ್‌ನ ನಿರ್ದೇಶಕ ಡಾ.ಶೋಭಿತ್ ರಂಗಪ್ಪ ಅವರನ್ನು 2023-24 ನೇ ಸಾಲನ ISCA ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮತದಾನದ ಮೂಲಕ ಆಯ್ಕೆಮಾಡಲಾಗಿದೆ.

ಡಾ. ಶೋಭಿತ್, ಸಕ್ರಿಯ ಸಂಶೋಧಕರಾಗಿದ್ದು, ಅಂತಾರಾಷ್ಟ್ರೀ ಯ ಪ್ರತಿಷ್ಠಿತ ಜರ್ನಲ್‌ಗಳಲ್ಲಿ 80 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಾಗೂ 5 ಪೇಟೆಂಟ್‌ಗಳನ್ನು ಕ್ಯಾನ್ಸರ್ ಡ್ರಗ್ ಡಿಸ್ಕವರಿ ಕ್ಷೇತ್ರದಲ್ಲಿ ಹೊಂದಿದ್ದಾರೆ.

ಡಾ.ಶೋಭಿತ್ ರಂಗಪ್ಪ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಹೆಸರಾಂತ ರಾಷ್ಟ್ರೀಯ ಸಂಸ್ಥೆ ISCA ಗುರುತಿಸಿರುವುದು, ಆದಿಚುಂಚನಗಿರಿ ವಿಶ್ವವಿದ್ಯಾಲಯಕ್ಕೆ ಸಂದ ಗೌರವವಾಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ ಎಂ.ಎ.ಶೇಖರ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!