Thursday, September 19, 2024

ಪ್ರಾಯೋಗಿಕ ಆವೃತ್ತಿ

ತಂದೆಯ ಬಯಕೆಯಂತೆ ಜನಸೇವೆ: ಸಚ್ಚಿದಾನಂದ

ನನ್ನ ತಂದೆಯವರ ಬಯಕೆಯಂತೆ ಜನಸೇವೆ ಮಾಡುತ್ತಿದ್ದೇನೆ ಎಂದು ಯುವನಾಯಕ ಇಂಡುವಾಳು ಸಚ್ಚಿದಾನಂದ ತಿಳಿಸಿದರು.

ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಚಿಕ್ಕಂಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚ್ಚಿದಾನಂದ, ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರು ಶೇಖರಿಸಿಡುವ 25ಲೀ. ಕ್ಯಾನ್‌‌ಗಳನ್ನು ಶ್ರೀ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.

ನಾನು ದುಡಿದ ಹಣದಲ್ಲಿ ಒಂದಷ್ಟು ಭಾಗವನ್ನು ಜನರ ಸೇವೆಗಾಗಿ ಖರ್ಚು ಮಾಡುವಂತೆ ನನ್ನ ತಂದೆ ಶಂಕರೇಗೌಡ ಅವರು ಸದಾ ಹೇಳುತ್ತಿದ್ದರು. ಅವರ ಅಭಿಲಾಷೆಯಂತೆ ನಾನು ಜನರ ಸೇವೆ ಮಾಡುತ್ತಿದ್ದೇನೆ. ಜನರ ಆಶೀರ್ವಾದ ನನಗೆ ಬೇಕು ಎಂದರು.

ನಂತರ ಗ್ರಾಮದಲ್ಲಿ ಅಕಾಲಿಕ ಮರಣ ಹೊಂದಿದ್ದ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು. ಅನಾರೋಗ್ಯದಿಂದ ಕಾಲು ಕಳೆದುಕೊಂಡ ಪ್ರಕಾಶ್‌ ಅವರನ್ನು ಭೇಟಿಯಾಗಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.

ಹೆಬ್ಬಾಡಿಹುಂಡಿ ಗ್ರಾಮಕ್ಕೆ ಬೇಟಿ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ  ಗ್ರಾಮವಾದ ಹೆಬ್ಬಾಡಿಹುಂಡಿಗೆ ತೆರಳಿ ಪ್ರತಿ ಮನೆಗೂ ಕುಡಿಯುವ ನೀರು ಶೇಖರಿಸಿಡುವ 25ಲೀ.ಕ್ಯಾನ್ಗಳನ್ನು ಶ್ರೀ ಎನ್.ಶಂಕರೇಗೌಡ ಚಾರಿಟೇಬಲ್ ಟ್ರಸ್ಟ್ ಮೂಲಕ ವಿತರಿಸಿದರು. ಬಳಿಕ ಗ್ರಾಮದಲ್ಲಿ ಅಕಾಲಿಕ ಮರಣ ಹೊಂದಿದ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಯಜಮಾನರುಗಳಾದ ಅಂದಾನಯ್ಯ, ಚಿಕ್ಕೇಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜೆ.ರಾಜು, ಮುಖಂಡರುಗಳಾದ ಕುಮಾರ್, ಪಾಪಣ್ಣ, ಪುಟ್ಟಸ್ವಾಮಿ, ಸಂಪತ್ ಕುಮಾರ್, ಸಿದ್ದರಾಜು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.

ಇದನ್ನು ಓದಿ: ದೇವಸ್ಥಾನಕ್ಕೆ ಆರ್ಥಿಕ ನೆರವು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!