Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಜನತಾ ಪರಿವಾರದ ದತ್ತು ಮಕ್ಕಳಿಗೆ ಬಿಜೆಪಿ ಟಿಕೆಟ್

ಜನತಾ ದಳವನ್ನು ನಾಯಕರನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಹೇಳಲಾಗುತ್ತದೆ. ಅದರಂತೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಾಗಿ ಜನತಾದಳ ಸೃಷ್ಟಿಸಿದ ಬಹುತೇಕರಿಗೆ ಬಿ. ಫಾರಂ ನೀಡುವುದರೊಂದಿಗೆ ಬಿಜೆಪಿ ಮತ್ತೊಮ್ಮೆ ಅದನ್ನು ಸಾಬೀತು ಮಾಡಿದೆ.

ಆ ಪೈಕಿ ಮಂಡ್ಯದಿಂದ ಜಾ.ದಳ ನಾಯಕ ದಿವಂಗತ ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂ, ಮದ್ದೂರಿನಿಂದ ಎಸ್.ಪಿ. ಸ್ವಾಮಿ, ಕೆ.ಆರ್. ಪೇಟೆಯಿಂದ ಕೆ.ಸಿ.ನಾರಾಯಣ ಗೌಡ, ನಾಗಮಂಗಲದಿಂದ ಜಾ.ದಳದಿಂದ ಸಂಸದರಾಗಿದ್ದ ಎಲ್‌.ಆರ್. ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರೆಲ್ಲರೂ ಜನತಾ ಪರಿವಾರದಿಂದ ಬಿಜೆಪಿಗೆ ಬಂದವರು ಎಂಬುದು ವಿಶೇಷ.

ಇನ್ನು ಶ್ರೀರಂಗಪಟ್ಟಣದಿಂದ ಇಂಡುವಾಳು ಸಚ್ಚಿದಾನಂದ,ಮೇಲುಕೋಟೆ ಕ್ಷೇತ್ರದಿಂದ ಡಾ.ಇಂದ್ರೇಶ್ ಕುಮಾರ್
ಮಳ್ಳವಳ್ಳಿಯಿಂದ ಮುನಿರಾಜು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗಮಂಗಲದಿಂದ ಮಾಜಿ ಶಾಸಕ, ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡರಿಗೆ ಬದಲು ಅವರ ಪತ್ನಿ ಸುಧಾ ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾಂಟ್ರೊವರ್ಸಿಗೆ ಹೆಸರುವಾಸಿ. ಶಿವರಾಮೇಗೌಡ,ಅವರ ಮಗ ಚೇತನ್ ಬಿಟ್ಟು ಸುಧಾ ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!