ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟದ ನನ್ನ ಪತಿ ಜಯಕುಮಾರ್ ಕೊಲೆಗೆ ಅನಿಲ್‌ಕುಮಾರನೇ ಕಾರಣವಾಗಿದ್ದು, ಆತನಿಗೆ ಶಿಕ್ಷೆಯಾಗಬೇಕು ಎಂದು ಲಕ್ಷ್ಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತಿ ಹತ್ಯೆಯ ನಂತರ ಸಮಾಜ ಕಲ್ಯಾಣ ಇಲಾಖೆಯ ವಾಹನದಲ್ಲಿಯೇ ಪೊಲೀಸ್ ಠಾಣೆಗೆ ಕರೆದೊಯ್ದು ವಕೀಲ ಪ್ರಸಾದ್ ಹಾಗೂ ನನ್ನ ಸಂಬಂಧಿಕರ ಎದುರೇ ಪೊಲೀಸರಿಗೆ ದೂರು ಬರೆದು ಕೊಡಲಾಗಿದ್ದು, ಅಲ್ಲಿ ಆತ್ಮಹತ್ಯೆ ಎಂದು ಮತ್ತೆ ದೂರು ಬರೆದುಕೊಟ್ಟಿದ್ದು ಯಾರು ಎಂಬುದು ತಿಳಿಯದು, ನನಗೆ ತಿಳಿಯದಂತೆ ಪೊಲೀಸರು ಎರಡು ಬಾರಿ ಸಹಿ ಮಾಡಿಸಿಕೊಂಡಿದ್ದು ದಿಕ್ಕು ತಪ್ಪಿಸಿದ್ದಾರೆ ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಯ ಶವಾಗಾರದಿಂದ ಪತಿ ಜಯಕುಮಾರ್ ಅವರ ಮೃತ ದೇಹವನ್ನು ಹಸ್ತಾಂತರಿಸುವ ವೇಳೆ ಸಮಾಜ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಶವ ಸಂಸ್ಕಾರ ಸಂಬಂಧ ಗ್ರಾಮಸ್ಥರು ಸಂಬಂಧಿಕರ ನಿರ್ಧಾರದಂತೆ ಸುಡಲು ಒಪ್ಪಿದ್ದು, ಅಂತ್ಯ ಸಂಸ್ಕಾರದ ವೇಳೆಗೆ ಅವರನ್ನು ಮತ್ತೆ ಸ್ಥಳಕ್ಕೆ ಕರೆಸಲಾಯಿತು. ಸಂಸ್ಕಾರದ ನಂತರ ಅಧಿಕಾರಿಯು ನನಗೆ ದೈರ್ಯ ತುಂಬಿದ್ದು, ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಮಂಜೂರು ಮಾಡಿಸುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದು, ಕಲ್ಯಾಣ ಇಲಾಖೆಗೆ ಅಧಿಕಾರಿ ಮೇಲೆ ಕೆಲ ಸಂಘಟನೆಗಳ ಆರೋಪಿಸುವುದು ಸರಿಯಲ್ಲ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್‍ಸ್ ರಾಜ್ಯಾಧ್ಯಕ್ಷ ಹೆಚ್.ಜಿ.ಗಂಗರಾಜು ಮಾತನಾಡಿ, ಪ್ರಕರಣ ಸಂಬಂಧ ಲೋಪವೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವುದಾಗಿ ಐಜಿ ಹಾಗೂ ಡಿಐಜಿ ಅವರು ಭರವಸೆ ನೀಡಿದ್ದು, ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿದೆ. ಅವರು ತಾವು ಹೇಳಿದಂತೆ ನಡೆಯದೇ ಹೋದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ನನ್ನ ಪತಿ ಹತ್ಯೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆತ್ಮಸ್ಥೈರ್ಯ ತುಂಬಿದ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸಹಕಾರ ನೀಡಿದ ಎಲ್ಲ ಅಧಿಕಾರಿಗಳಿಗೆ ಮೃತ ಜಯಕುಮಾರ್ ಪತ್ನಿ ಲಕ್ಷ್ಮಿ ಧನ್ಯವಾದಗಳನ್ನು ತಿಳಿಸಿದರು.
ಗೋಷ್ಠಿಯಲ್ಲಿ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರಸನ್ನ ಜೆ, ಮಹಿಳಾ ರಾಜ್ಯಾಧ್ಯಕ್ಷೆ ಮಮತಾ ಸಿ.ಎಂ, ರಾಜ್ಯ ಗೌರವಾಧ್ಯಕ್ಷ ಶಂಕರ್.ಎಸ್.ಬಿ, ಜಿಲ್ಲಾಧ್ಯಕ್ಷ ನಿರಂಜನ್, ಸಲಹೆಗಾರ ಡಿ.ಸ್ವಾಮಿ ಇದ್ದರು.




