Wednesday, September 18, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | KSRTC ನೌಕರನ ಆತ್ಮಹತ್ಯೆ ಯತ್ನ ; ತನಿಖೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ನಾಗಮಂಗಲ ಕೆಎಸ್ಆರ್’ಟಿಸಿ ನೌಕರ ಜಗದೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ರಾಜಕೀಯ ತಿರುವು ಪಡೆದು ಕೊಂಡಿದೆ, ನೌಕರನ ವರ್ಗಾವಣೆ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ, ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಾಗಮಂಗಲ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕೆಎಸ್ಆರ್’ಟಿಸಿ ನಾಗಮಂಗಲ ಘಟಕ ಆವರಣದಲ್ಲಿ ಬಸ್ ಗಳನ್ನು ತಡೆದು ಪ್ರತಿಭಟಿಸಿದರಲ್ಲದೇ ನಿಲ್ದಾಣದ ಆವರಣದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಚಾಲಕ ಹಾಗೂ ನಿರ್ವಾಹಕನ ವರ್ಗಾವಣೆಗೆ ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ, ರಾಜಕೀಯ ದುರುದ್ದೇಶದಿಂದ, ಆತನ ವರ್ಗಾವಣೆ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೌಕರ ಜಗದೀಶ್ ಮಹಿಳೆಯೊಬ್ಬರ ಜೊತೆ ಅಸಭ್ಯ ವರ್ತನೆ ನಡೆಸಿದ್ದರು ಎನ್ನಲಾಗುತ್ತಿದೆ, ಆದರೆ  ಇಂತಹ ಪ್ರಕರಣ ನಡೆದಿಲ್ಲ ಪ್ರತಿಭಟನಕಾರರು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಕೆ.ಎಸ್ ಆರ್.ಟಿ.ಸಿ ಜಿಲ್ಲಾ ಅಧಿಕಾರಿ ನಾಗರಾಜು ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕೆಎಸ್ಆರ್’ಟಿಸಿ ಅಧಿಕಾರಿ ನಾಗರಾಜ್ ಮಾತನಾಡಿ, ಆತ್ಮಹತ್ಯೆ ಪ್ರಯತ್ನ ಮಾಡಿದ ಜಗದೀಶ್ ವರ್ಗಾವಣೆಯನ್ನು ಹಿಂಪಡೆಯಲಾಗಿದೆ. ಅವರ ವೈದ್ಯಕೀಯ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಅವರ ಮೇಲೆ ಯಾವುದೇ ರೀತಿಯ ಮಹಿಳೆ ದೂರಿನ ಆಪಾದನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಜಗದೀಶ್ ಆತ್ಮಹತ್ಯೆ ಯತ್ನ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ  ಇಲಾಖೆಯ ಅಧಿಕಾರಿ ಮಂಜುನಾಥ್ ಕುರಿತು ತನಿಖೆ ಮಾಡಲಾಗುವುದು ಎಂದರು.

ನೌಕರ ಜಗದೀಶ್ ಅವರ ತಂದೆ ರಾಜಣ್ಣ ಮಾತನಾಡಿ, ನನ್ನ ಸೊಸೆ ಕಾಂತಪುರ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾಗಿದ್ದು, ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಗ್ರಾಮದ ಇಬ್ಬರು ಕಾಂಗ್ರೆಸ್ ಮುಖಂಡರು ಕಿರುಕುಳ ನೀಡಿದ್ದಾರೆ. ಹಾಗಾಗಿ ಈ ಘಟನೆ ನಡೆಸಿದೆ. ತಪ್ಪಿತಸ್ಥರ ವಿರುದ್ದ ಕೈಗೊಳ್ಳಬೇಕೆಂದು ಎಂದು ಮನವಿ ಮಾಡಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!