Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಡಂದಿಗಳ ಹಾವಳಿ : ಬೆಳೆನಷ್ಟದ ಅರ್ಜಿಗಳನ್ನು ಗ್ರಾ.ಪಂ.ಗಳಲ್ಲೇ ಸ್ವಿಕರಿಸಲು ಆದೇಶ 

ವರದಿ : ನ.ಲಿ.ಕೃಷ್ಣ

ಕಾಡು ಪ್ರಾಣಿಗಳಾದ ಮುಳ್ಳಂದಿ ಹಾಗೂ ಕಾಡಂದಿಯಿಂದ ಬೆಳೆ ನಷ್ಟದ ಬಗ್ಗೆ ಗ್ರಾ.ಪಂ.ಗಳಲ್ಲೇ ರೈತರಿಂದ ಅರ್ಜಿಗಳನ್ನು ಸ್ವೀಕರಿಸುವಂತೆ ಎಂದು ಮದ್ದೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಆದೇಶ ಹೊರಡಿಸಿದ್ದಾರೆ.

ಕಳೆದ ನ.29ರಂದು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷರ ಮನವಿ ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ. ಗ್ರಾ.ಪಂ.ಗಳು ಸ್ವೀಕರಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ನಿಯಮಾನುಸಾರ ವರ್ಗಾಯಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೇ ಗ್ರಾಮ ಪಂಚಾಯಿತಿ ಹಂತದ ಕೆಡಿಪಿ ಸಭೆಯಲ್ಲಿಯು ಮುಳ್ಳಂದಿ ಹಾಗೂ ಕಾಡಂದಿಗಳ ಹಾವಳಿ ಕುರಿತು ಚರ್ಚಿಸಿ ನಡಾವಳಿ ಮಾಡಿ, ನಿಯಮಾನುಸಾರ ಕ್ರಮ ಅನುಸರಿಸಬೇಕೆಂದು. ಮದ್ದೂರು ತಾಲ್ಲೂಕಿನಾದ್ಯಂತ ಕಾಡು ಹಂದಿಗಳ ಹಾವಳಿ ಮಿತಿ ಮೀರಿದ್ದು, ಲಕ್ಷಂತಾರ ತೆಂಗಿನ ಗಿಡ ಹಾಗೂ ಸಹಸ್ರಾರು ಎಕರೆ ಕಬ್ಬಿನ ಗದ್ದೆ ಹಂದಿ ಹಾವಳಿಯಿಂದ ಹಾನಿ ಆಗಿದ್ದು, ಅರಣ್ಯ ಇಲಾಖೆಯವರು ಹಾನಿಯಾಗಿರುವುದರಿಂದ ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಲು ತಿಳಿಸಿದ್ದರು.

ಎಲ್ಲಾ ರೈತರು ತಾಲ್ಲೂಕು ಕೇಂದ್ರಕ್ಕೆ ಬಂದು ಅರ್ಜಿ ಸಲ್ಲಿಸುವುದು ತ್ರಾಸದಾಯಕ. ಹಾಗಾಗಿ ಗ್ರಾ.ಪಂ.ಗಳಲ್ಲೆ ಅರ್ಜಿ ಸ್ವಿಕರಿಸಲು ತಿಳಿಸಬೇಕೆಂದು ತಹಶೀಲ್ದಾರ್ ನರಸಿಂಹ ಮೂರ್ತಿ ಅವವರಿಗೆ ಮನವಿ ಮಾಡಿದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

nudikarnataka.com
MLC Dineshgooligowda

ರೈತರು ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸುವ ವೇಳೆ ಆರ್.ಟಿ.ಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಬೆಳೆ ಹಾನಿ ಆಗಿರುವ ಒಂದು ಪೋಟೋ ಹಾಗೂ ಆರ್.ಟಿ.ಸಿ ಯ ಬೆಳೆ ಕಾಲಂ ನಲ್ಲಿ ಬೆಳೆ ವಿವರ ನಮೂದಾಗದಿದ್ದರೆ ನಾಡ ಕಚೇರಿಯ ಮೂಲಕ ಅರ್ಜಿ ಸಲ್ಲಿಸಿ ಗ್ರಾಮ ಲೆಕ್ಕಿಗರಿಂದ ಆನ್ ಲೈನ್ ಬೆಳೆ ವರದಿ ಪಡೆದು ಲಗತ್ತಿಸುವಂತೆ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!