Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಗುವಿಗೆ ಗರ್ಭಾವಸ್ಥೆಯಲ್ಲಿಯೇ ಹಲವಾರು ಹಕ್ಕುಗಳಿವೆ- ನ್ಯಾ. ಇಂದಿರೇಶ್

ಮಗುವಿಗೆ ಗರ್ಭದಿಂದಲೇ ಹಲವಾರು ಹಕ್ಕುಗಳು ದೊರೆಯುತ್ತದೆ. ಮಕ್ಕಳು ಸಮಾಜದಲ್ಲಿ ಬೆಳೆದು ಉತ್ತಮ ಪ್ರಜೆಯಾಗಲು ಯಾವುದೇ ತೊಂದರೆಯಾಗಬಾರದು ಎಂದು ಕಾನೂನು ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ – 2006 (ಕರ್ನಾಟಕ ತಿದ್ದುಪಡಿ) ಕಾಯ್ದೆ- 2016, ಮಕ್ಕಳ ಉಚಿತ ಮತ್ತು ಕಡ್ಡಿಯ ಶಿಕ್ಷಣ ಹಕ್ಕಿನ  (ಆರ್.ಟಿ.ಇ) ಕಾಯ್ದೆ -2009, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ- 2012, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ -1986, ಈ ನಾಲ್ಕು ಕಾಯ್ದೆಗಳು ಕಟ್ಟುನಿಟ್ಟಾಗಿ ಪಾಲನೆಯಾದರೆ ಮಕ್ಕಳು ಸುರಕ್ಷಿತವಾಗಿ ಬೆಳೆಯುತ್ತಾರೆ ಎಂದರು.

1774 ರಲ್ಲಿ ವಾರನ್  ಹೇಸ್ಟಿಂಗ್ ಅವರು ರೆಗುಲೇಷನ್ ಕಾಯ್ದೆ ಜಾರಿಗೆ ತಂದರು. ಇಲ್ಲಿಂದ ಮಕ್ಕಳ ಬಗ್ಗೆ ಚಿಂತನೆಗಳು ಪ್ರಾರಂಭವಾಯಿತು. ತದನಂತರ 1935 ರವರೆಗೆ ಮಕ್ಕಳ ರಕ್ಷಣೆಗಾಗಿ 8 ರಿಂದ 10 ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.

ಶಿವಕಾಶಿಯಲ್ಲಿ ದೀಪಾವಳಿ  ಹಬ್ಬ ಹತ್ತಿರ ಬರುತ್ತಿದಂತೆ ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿ ಪಾಟಕಿ ತಯಾರಿಕೆ ಕೆಲಸಕ್ಕೆ ಹೋಗುತ್ತಿದ್ದರು. ಕೋಲಕೊತ್ತದಲ್ಲಿ ಕಸೂತಿ ತಯಾರಿಕೆಗೆ ಸಣ್ಣ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದರು ಇದನ್ನು ತಡೆಗಟ್ಟಲು ಸುಪ್ರೀಂ ಕೊರ್ಟ್ ಕಾಳಜಿ ವಹಿಸಿ ಬಾಲ ಕಾರ್ಮಿಕ ನಿೆಷೇಧ ಕಾಯ್ದೆಯನ್ನು ಜಾರಿಗೆ ತಂದರು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಕ್ಕಳು ಸಂಸ್ಕಾರ ಬೆಳೆಯುತ್ತದೆ. ಸಂಸ್ಕಾರ ಇದ್ದ ಕಡೆ  ಶೋಷಣೆಗಳು ಇರುವುದಿಲ್ಲ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ಮಕ್ಕಳನ್ನು ಬಲಿಕೊಟ್ಟು ಯಾವ ದೇಶಕಟ್ಟಲು ಸಾಧ್ಯವಿಲ್ಲ. ರಾಷ್ಟ್ರ ಕಟ್ಟಬೇಕಾದರೆ ಮಕ್ಕಳು, ಪರಿಸರ ಮತ್ತು ನೀರು ಇವುಗಳು ಅತ್ಯವಶ್ಯ. ಹಾಗಾಗಿ ಸಾರ್ವಜನಿಕರು, ಅಧಿಕಾರಿಗಳು ಇವುಗಳ ಮೇಲೆ ವಿಶೇಷ ಕಾಳಜಿವಹಿಸಲಿ ಎಂದರು.

ಹೆಣ್ಣುಭ್ರೂಣಹತ್ಯೆ ಹಾಗೂ ಬಾಲ್ಯವಿವಾಹಗಳು ಸಮಾಜಘಾತುಕ ಕೆಲಸಗಳು. ಅಧಿಕಾರಿಗಳು ಅಂತಹವ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ. ಜೊತೆಗೆ ಬಾಲ್ಯವಿವಾಹಗಳು ನಡೆಯದೆ ಇರುವ ಆಗೆ ಜಿಲ್ಲೆ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಅರಿವು ಮೂಡಿಸಿ. ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಧಿಕಾರಿ, ಪಿಡಿಒ ವಿಶೇಷವಾಗಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗೆ ಒಂದುವಾರ  ಹೆಣ್ಣು ಮಗು ಬರಲಿಲ್ಲ ಎಂದರೆ, ಅಂತಹವರನ್ನು ಹುಡುಕಿ ಕಾರಣ ಕೇಳಿ ಶಾಲೆಗೆ ಕರೆತನ್ನಿ, ಇಂತಹ ಸಂಧರ್ಭದಲ್ಲಿ ಬಾಲ್ಯವಿವಾಹ ಮಾಡುವುದಕ್ಕೆ ಸಜ್ಜಾಗಿದ್ದಿರೆ ಪೋಷಕರಿಗೆ ತಿಳಿ ಹೇಳಿ, ಆ ಹೆಣ್ಣು ಮಗುವಿಗೆ ವಿಶೇಷ ಕೌನ್ಸಿಲ್ ನೀಡಿ ಉನ್ನತ ಶಿಕ್ಷಣಕ್ಕೆ ದಾರಿಮಾಡಿಕೊಡಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾಸನ ಗೊಳಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. . ಗ್ರಾಮಮಟ್ಟದಲ್ಲಿಯೇ ಬಾಲ್ಯವಿವಾಹ ತಡೆಗಟ್ಟಲು ಎಲ್ಲರೂ ಸಹಕರಿಸಿ ಎಂದು ಹೇಳಿದರು.

ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದೆ. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಜನರು  ತಾಂತ್ರಿಕ,  ವೈಜ್ಞಾನಿಕ, ಶೈಕ್ಷಣಿಕವಾಗಿ ಮುಂದಿದ್ದಾರೆ ಆದರೆ ಇಷ್ಟೆಲ್ಲ ಇದ್ದರೂ  ಬಾಲ್ಯವಿವಾಹ ಹೆಚ್ಚಿದೆ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಪ್ರಶಾಂತ್,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ವಾಣಿ.ಎ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ