Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಡಪ್ರಭು ಕೆಂಪೇಗೌಡರ ಜಯಂತಿ ವಿಜೃಂಭಣೆಯ ಆಚರಣೆಗೆ ಸಕಲ ಸಿದ್ದತೆ : ಕೆ.ಎಂ.ಉದಯ್

ವರದಿ : ನ.ಲಿ.ಕೃಷ್ಣ

ಕರ್ನಾಟಕ ಹಾಗೂ ಬೆಂಗಳೂರಿನ ಹೆಸರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವುದಕ್ಕೆ ನಾಡ ಪ್ರಭು ಶ್ರೀ ಕೆಂಪೇಗೌಡರ ದೂರದರ್ಶಿತ್ವದ ಅಭಿವೃದ್ದಿ ಪರಕಲ್ಪನೆಯೇ ಕಾರಣ‌. ಸರ್ವಜನರ ಹಿತಕ್ಕಾಗಿ ಬೆಂಗಳೂರು ನಗರ ನಿರ್ಮಾಣ ಮಾಡಿದ ನಾಡಪ್ರಭುಗಳ ಜಯಂತಿಯನ್ನು ಸರ್ವ ಜನರ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲು ಸಕಲ ಸಿದ್ದತೆ ನಡೆಸೋಣ ಎಂದು ಶಾಸಕ ಕೆ. ಎಮ್. ಉದಯ್ ಅವರು ತಿಳಿಸಿದರು

ಮದ್ದೂರು ತಾಲ್ಲೂಕು ಪಂಚಾಯುತ್ ಸಭಾಂಗಣದಲ್ಲಿ ತಾಲೂಕು ಆಡಳಿತವು ಕರೆದಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಮಕ್ಕಳು ಹಾಗೂ ವಿವಿಧ ಕಲಾತಂಡಗಳೊಟ್ಟಿಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಯು ನರಸಿಂಹ ಸ್ವಾಮಿ ದೇವಸ್ಥಾನದಿಂದ ಹೊರಟು, ಪೇಟೆ ಬೀದಿ ಮೂಲಕ ಪ್ರವಾಸಿ ಮಂದಿರದವರೆಗೂ ಮೆರವಣಿಗೆ ನಡೆಯಲಿದ್ದು, ಸಂಚಾರಿ ಪೊಲೀಸರು ಮೆರವಣಿಗೆ ಸಾಗುವ ಸ್ಥಳದಿಂದ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿ, ಕಟ್ಟುನಿಟ್ಟಿನ ಕ್ರಮ ವಹಿಸಲು ಸಂಚಾರಿ ಪೊಲೀಸ್ ಅಧಿಕಾರಿ ಅಯ್ಯನ್ ಗೌಡ ಅವರಿಗೆ ಸೂಚಿಸಿದರು.

ಇದುವರೆಗೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ವೆಚ್ಚದ ಸಹಭಾಗಿತ್ವ ವಹಿಸಿಕೊಂಡು ತಾಲೂಕು ಆಡಳಿತದೊಟ್ಟಿಗೆ ಹಲವು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬರುತ್ತಿರುವುದು ಈ ಸಭೆಯ ಮೂಲಕ ನನ್ನ ಗಮನಕ್ಕೆ ಬಂದಿದೆ ಎಂದ ಉದಯ್ ಅವರು, ಕೆಂಪೇಗೌಡ ಜಯಂತಿಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿ, ಸಾರ್ವಜನಿಕರು ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದರು.

ಸಭೆಯಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ, ಇ. ಓ.ಸಂದೀಪ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರವಿಗೌಡ, ಕ್ರಾಂತಿಸಿಂಹ, ಸೊ. ಶಿ. ಪ್ರಕಾಶ್ ಚನ್ಸಸಂದ್ರ, ಲಕ್ಷಣ, ಶ್ರೀ ಕಾ ಶ್ರೀನಿವಾಸ್ ಮಹದೇವ್ ಹುಲಿಗೆರೆಪುರ, ವೆಂಕಟ ಚಲುವಯ್ಯ, ಮಹದೇವ್ ಎಂ.ಪಿ.ಲಿಂಗೇಗೌಡ ಕೂಳಗೆರೆ ಜಯರಾಮ್, ಹಾಗಹಳ್ಳಿ ಬಸವರಾಜ್, ಕುಂಟನಹಳ್ಳಿ ಮರಲಿಂಗು, ಪಣ್ಣೆದೊಡ್ಡಿ ವೆಂಕಟೇಶ್, ಸ್ವಾಮಿ ಹುಣಸೆ ಮರದದೊಡ್ಡಿ, ಎಮ್ ಪಿ ಜಗದೀಶ್ ಮಾರಸಿಂಗನಹಳ್ಳಿ, ರಾಮಚಂದ್ರು ಸುರೇಶ್, ಶಿವಪ್ಪ ಸಭೆಯಲ್ಲಿ ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!