Friday, April 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಎಸ್. ಪಕ್ಷದಿಂದ ಜನಚೈತನ್ಯ ಯಾತ್ರೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಂದು ಶ್ರೀರಂಗಪಟ್ಟಣದಲ್ಲಿ ಕರ್ನಾಟಕ ಜನಚೈತನ್ಯ ಯಾತ್ರೆಯನ್ನು ನಡೆಸಿತು.

ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಏಕೈಕ ಪಕ್ಷವೆಂದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವಾಗಿದೆ. ಕೆ.ಆರ್.ಎಸ್. ಪಕ್ಷ ಎಲೆಕ್ಷನ್ ಸಮಯದಲ್ಲಿ ಬಂದು ಗಂಡಸರಿಗೆ ಲಿಕ್ಕರ್ರು, ಹೆಂಗಸರಿಗೆ ಕುಕ್ಕರ್ರು ಕೊಡುವ ಪಕ್ಷವಲ್ಲ.

ಇವತ್ತಿನ ರಾಜಕಾರಣದಲ್ಲಿರುವ ಯಾವ ಶಾಸಕನೂ, ಸಂಸದನೂ, ತಾಲ್ಲೂಕು ಪಂಚಾಯಿತಿ ಸದಸ್ಯನೂ ಬಡವನಾಗಿಲ್ಲ. ಈ ರಾಜಕಾರಣಿಗಳು ಜನರನ್ನು ಬಡವರನ್ನಾಗಿಸಿದ್ದಾರೆ.

ಇಂದಿನ ರಾಜಕಾರಣಿಗಳು, ಇನ್ನೂ ಮೀಸೆ ಬರದ ತಮ್ಮ ಮಕ್ಕಳು – ಮೊಮ್ಮೊಕ್ಕಳ ಹೆಸರಿನಲ್ಲಿ 200-300 ಕೋಟಿ ಆಸ್ತಿ ಮಾಡಿಟ್ಟಿದ್ದಾರೆ. ಈ ಆಸ್ತಿಯನ್ನೆಲ್ಲ ಯಾವ ಹೊಲದಲ್ಲಿ ಕಷ್ಟಪಟ್ಟು ದುಡಿದ್ದಾರೆ ಎಂದು ಪ್ರಶ್ನಿಸಿಸಬೇಕಾಗಿದೆ.

ಪರಮ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಭೀತಿಯನ್ನು ಹುಟ್ಟಿಸಿರುವ ಪಕ್ಷವಾಗಿ ಬೆಳೆಯುತ್ತಿರುವ ಈ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಶ್ರೀರಂಗಪಟ್ಟಣದ ಜನಸಾಮಾನ್ಯರು ಬೆಂಬಲಿಸಿ ಬೆಳೆಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿಯವರು ಜನಚೈತನ್ಯ ಯಾತ್ರೆಯಲ್ಲಿ ಕರೆ ನೀಡಿದರು.

ಇಂದಿನ ಜನಚೈತನ್ಯ ಯಾತ್ರೆಯಲ್ಲಿ ಉಪಾಧ್ಯಕ್ಷರಾದ ಎಸ್.ಎಚ್. ಲಿಂಗೇಗೌಡ, ಮಂಡ್ಯ ಜಿಲ್ಲಾಧ್ಯಕ್ಷರಾದ ರಮೇಶ್ ಗೌಡ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರು ಮತ್ತು ಶ್ರೀ ರಂಗಪಟ್ಟಣದ ವಿಧಾನಸಭಾ ಕ್ಷೇತ್ರದ ಸಂಭವ್ಯ ಅಭ್ಯರ್ಥಿಯಾದ ಅರುಣಕುಮಾರ ಹೆಚ್, ಎಂ. ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾದ ರವಿಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಮಹೇಂದ್ರ ಕುಮಾರ್, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ವರುಣ್, ಪಾಂಡವಪುರ ತಾಲ್ಲೂಕಿನ ಅಧ್ಯಕ್ಷ ವಿಶ್ವನಾಥ್ , ರಾಜ್ಯ ರೈತ ಘಟಕದ ರಾಜ್ಯ ಉಪಾಧ್ಯಕ್ಷ ಹೆಚ್. ಸಿ. ಪುಟ್ಟಲಿಂಗಯ್ಯ, ರಾಜ್ಯ ಜಂಟಿ ಕಾರ್ಯದರ್ಶಿ ಸೋಮಸುಂದರ್, ಜಂಟಿ ಕಾರ್ಯದರ್ಶಿ ಪ್ರಸನ್ನ, ಬಿ.ಕೆ.ಇನ್ನೂ ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!