Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿ

ಮಂಡ್ಯ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಸಂಸ್ಥೆ ಹಾಗೂ ಡಾ.ಹೆಚ್.ಡಿ.ಚೌಡಯ್ಯ ಅಭಿಮಾನಿ ಬಳಗದ ವತಿಯಿಂದ ಸೆ.23 ಹಾಗೂ 24ರಂದು ಮಂಡ್ಯ ನಗರದ ಪಿ.ಇ.ಎಸ್‌ ತಾಂತ್ರಿಕ ಕಾಲೇಜು ಅವರಣದಲ್ಲಿ ಡಾ. ಹೆಚ್.ಡಿ.ಚೌಡಯ್ಯ ಸ್ಮಾರಕ (ಬೆಳ್ಳಿ ಪರ್ಯಾಯ ಪಾರಿತೋಷಕ) ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಹೆಚ್.ಡಿ.ಸಿ ಕಬಡ್ಡಿ ಕಪ್ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು 32 ತಂಡಗಳು ಭಾಗವಹಿಸಲಿವೆ, ಈಗಾಗಲೇ ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪಂದ್ಯಾವಳಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿಯಂತ ನಡೆಸಲಾಗುವುದು. (ಅಂದರೆ  ಪ್ರತಿಯೊಬ್ಬ ಆಟಗಾರರು ಅರ್ಹತಾ ಪತ್ರ ತರಬೇಕು ಹಾಗೂ 55 ಕೆಜಿ ಒಳಗಿರಬೇಕು) ಪ್ರತಿ ತಂಡಕ್ಕೆ 10 ಮಂದಿ ಆಟಗಾರ ಇರಬೇಕು ಭಾಗವಹಿಸುವ ಆಟಗಾರರಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು, ವಿಜೇತ ತಂಡಕ್ಕೆ ಪರ್ಯಾಯ ಪಾರಿತೋಷಕ ಹಾಗೂ 10 ಮಂದಿ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದರು.

ಹೊರ ತಾಲೂಕಿನ ತಂಡಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು (ಕೆಎಸ್ ಆರ್ ಟಿ ಸಿ) (ಟಿ ಎ) ಪಂದ್ಯಾವಳಿಯು ಸೆ.23ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಎಲ್ಲಾ ತಂಡಗಳು ನಿಗದಿತ ಸಮಯಕ್ಕೆ ಸರಿಯಾಗಿ ನೋಂದಾಯಿಸಿಕೊಳ್ಳಬೇಕು. ಟೆಸ್ಟ್ ಡ್ರಾ ನಂತರ ತಂಡಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ ತೀರ್ಪುಗಾರರ ತೀರ್ಮಾನವೇ ಅಂತಿಮ ಹಾಗೂ ಹೊರ ವಿದ್ಯಾರ್ಥಿಗಳನ್ನು ಆಡಿಸಿದ್ದಲ್ಲಿ ಅಥವಾ ಇನ್ನಿತರೆ ಸಮಸ್ಯೆ ಉಂಟು ಮಾಡಿದ್ದಲ್ಲಿ. ಅಂತಹ ತಂಡವನ್ನು ಯಾವುದೇ ವಿಚಾರಣೆ ಇಲ್ಲದ ಟೂರ್ನಿಯಿಂದ ಹೊರ ಹಾಕಲಾಗುವುದು. ಭಾಗವಹಿಸುವ ಕಬಡ್ಡಿ ತಂಡಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೊಬೈಲ್‌ ಫೋನ್ ನಿಷೇಧಿಸಲಾಗಿದ್ದು, ಭಾಗವಹಿಸುವ ತಂಡಗಳ ಆಟಗಾರರಿಗೆ ಕ್ರೀಡಾ ಸಮವಸ್ತ್ರ ನೀಡಲಾಗುವುದು. ಆಟಗಾರರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನನ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಯತೀಶ್, ಮನು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!