ಪುಟ್ಟ ರಾಜ್ಯವಾದ ಮಣಿಪುರದಲ್ಲಿ ಕ್ರಿಶ್ನಿಯನ್ನರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಕೆಲವು ದುಷ್ಟಶಕ್ತಿಗಳು ಹಿಂಸಾಚಾರದಲ್ಲಿ ನಿರತವಾಗಿದ್ದು, ಡಬಲ್ ಇಂಜಿನ್ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಅಖಿಲ ಭಾರತ ಕ್ರೈಸ್ಥ ಮಹಾಸಭಾ ಅಧ್ಯಕ್ಷ ಹೊಯ್ಸಳರಾಜ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಬೆತ್ತಲೆ ಮೆರವಣಿಗೆ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಿಂಸೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಣಿಪುರ ರಾಜ್ಯದಲ್ಲಿ ಶೇ. 41.29ರಷ್ಟು ಕ್ರಿಶ್ಚಿಯನ್ನರು ಶಾಂತಿಯುತವಾಗಿ ವಾಸಿಸುವ ರಾಜ್ಯವಾಗಿದೆ. ಅಲ್ಲಿನ ಬಹುತೇಕ ಕೈಸ್ಥರ ಶಾಲೆ, ಆಸ್ಪತ್ರೆ, ಅನಾಥಾಶ್ರಮಗಳನ್ನು ನಡೆಸಿಕೊಂಡು ದೇಶ ಸೇವೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅಲ್ಲಿ ಗಲಭೆಗಳು ಏರ್ಪಟ್ಟು ಕ್ರಿಶ್ಚಿಯನ್ನರು ಮತ್ತು ಚರ್ಚ್ ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗುತ್ತಿದೆ. ಕ್ರಿಶ್ಚಿಯನ್ನರ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ. ನೂರಾರು ಮಂದಿ ಹತ್ಯೆ ಮಾಡಲಾಗಿದೆ. ಹಲವರು ಗಾಯಗೊಂಡಿದ್ದಾರೆ. ಬಹುತೇಕ ಜನರು ಪ್ರಾಣ ಕಳೆದುಕೊಂಡು ನೂರಾರು ಮಕ್ಕಳು ಅನಾಥರಾಗುತ್ತಿದ್ದಾರೆ. ರಸ್ತೆಯಲ್ಲೇ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರು ವಿಧವೆಯರಾಗುತ್ತಿದ್ದಾರೆ. ನೂರಾರು ಕ್ರಿಶ್ಚಿಯನ್ ಧಾರ್ಮಿಕ ಸ್ಥಳಗಳನ್ನು ಕೆಡವಾಗುತ್ತಿದೆ. ಅನೇಕ ಚರ್ಚ್ಗಳನ್ನು ಸುಡಲಾಗುತ್ತಿದೆ ಇದನ್ನು ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಮಹಾಸಭಾದ ಪದಾಧಿಕಾರಿಗಳಾದ ಸುಧಾಕರ್, ದೀಪು, ಡೇವಿಡ್, ಸಾಲುಮನ್, ವಿಜಯಕುಮಾರ್, ಸುದರ್ಶನ್ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




