ಜಸ್ಟ್ ಆಸ್ಕಿಂಗ್
– ಶಿವಸುಂದರ್
ವಿಷಯವಿಷ್ಟೇ :
ಕಾಂಗ್ರೆಸ್ ಬಿಜೆಪಿಯ ಹಿಂದುತ್ವವನ್ನು ಹತ್ತಿಕ್ಕದಿರಲು ಕಾರಣ ಕೇವಲ ಹಿಂದೂ ಓಟುಗಳನ್ನು ಕಳೆದುಕೊಂಡು ಸೋಲುವ ಭಯವೂ ಅಲ್ಲ.
ಅಥವಾ
ಹಿಂದೂತ್ವದ ಬಗ್ಗೆ ತಪ್ಪು ತಿಳವಳಿಕೆಯೂ ಅಲ್ಲ.
ಭಾರತದ ಅಸಲೀ ಆಳುವವರ್ಗಗಳಾದ ಬ್ರಾಹ್ಮಣವಾದ ಮತ್ತು ಬಂಡವಾಳವಾದದ ದಮನಕಾರಿ ತಂತುವೇ ಕಾಂಗ್ರೆಸ್-ಬಿಜೆಪಿ ಇನ್ನಿತರ ಎಲ್ಲಾ ಆಳುವ ವರ್ಗದ ಪಕ್ಷಗಳ DNA ದಲ್ಲೂ ಇವೆ.
ಹೀಗಾಗಿ ಹಿಂದುತ್ವ ವಿರೋಧಿ ಸಮರದಲ್ಲಿ ಕಾಂಗ್ರೆಸ್ಸನ್ನು ಮಿತ್ರನೆಂದು ಭಾವಿಸುವುದಾಗಲೀ, ಕಾಂಗ್ರೆಸ್ ಹಿಂದುತ್ವ ವಿರೋಧಿ ಪಾತ್ರ ನಿರ್ವಹಿಸದಿರುವುದಕ್ಕೆ ಕಾರಣ ಚುನಾವಣಾ ದೌರ್ಬಲ್ಯ ಎಂದು ಭಾವಿಸುವುದಾಗಲೀ ಪ್ರಮಾದವಾಗುತ್ತದೆ.
ಉದಾಹರಣೆಗೆ , ಕಾಂಗ್ರೆಸ್ ಚುನಾವಣಾ ರೀತ್ಯ ಅತ್ಯಂತ ಪ್ರಬಲವಾಗಿದಾಗಲೂ ಅದು ಪ್ರಬಲವಾದ ಹಿಂದೂತ್ವ ವಿರೋಧಿ ನಿಲುವಿನ ಮೂಲಕ ಬಗ್ಗುಬಡಿಯದೇ ಅದಕ್ಕೆ ಪೂರಕವಾದ ನೀತಿಯನ್ನೇ ಅನುಸರಿಸುತ್ತ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ:
– ಇಂದಿರಾಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ 1980 ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಶೇ. 42 ರಷ್ಟು ಓಟುಗಳು ಮತ್ತು 353 ಸೀಟುಗಳನ್ನು ಪಡೆದುಕೊಂಡಿತ್ತು.
ಅದು 1971ರಲ್ಲಿ ಇದೆ ಇಂದಿರಾಗಾಂಧಿಯವರು ಸಮಾಜವಾದ ಮತ್ತು ಸೆಕ್ಯುಲಾರಿಸಂ ಅಜೇಂಡಾಗಳ ಮೇಲೆ ಪಡೆದುಕೊಂಡ ಓಟು ಮತ್ತು ಸೀಟುಗಳಿಗೆ ಸರಿಸಮಾನವಾಗಿತ್ತು.
ಆದರೂ
1980 ರ ನಂತರ ಇಂದಿರಾಗಾಂಧಿಯವರು ಬಹಳ ಪ್ರಜ್ಞಾಪೂರ್ವಕವಾಗಿ ಹಿಂದೂತ್ವ ಅಜೇಂಡಾ ಮುಂದಿಡಲು ಪ್ರಾರಂಭಿಸಿದರು. ”
ಹಿಂದೂ ಖತರೇ ಮೇ ಹಾಯ್- ದೇಶ್ ಖತರೇ ಮೇ ಹೈ”
ಇನ್ನಿತ್ಯಾದಿ ಹಿಂದುತ್ವವಾದಿ ಘೋಷಣೆಗಳನ್ನು ಚುನಾವಣಾ ರಾಜಕಾರಣದಲ್ಲಿ ಮೊದಲು ಬಳಸಿದ್ದೆ ಇಂದಿರಾಗಾಂಧಿಯವರು!
ಕಾಶ್ಮೀರ ಮತ್ತು ಪಂಜಾಬಿನಲ್ಲಿ ಅವರ ತೆಗೆದುಕೊಂಡ ಹಿಂದೂತ್ವವಾದಿ ಕ್ರಮಗಳನ್ನುಆರೆಸ್ಸೆಸ್ಸಿನ ಅಂದಿನ ಸರಸಂಘ ಚಾಲಕ ಬಾಳಾಸಾಹೇಬ್ ದೇವರಸ್ ಅವರೇ ಕೊಂಡಾಡಿದ್ದರು.
ಹೀಗಾಗಿಯೇ ಇಂದಿರಾಗಾಂಧಿಯವರ ಕೊಲೆಯಾದಾಗ ಆರೆಸ್ಸೆಸ್ಸಿನ ನೂರಾರೂ ಕಾರ್ಯಕರ್ತರು ಸಿಖ್ಖ ವಿರೋಧಿ ದಂಗೆಗಳಲ್ಲಿ ಪಾಲ್ಗೊಂಡಿದ್ದರು.
– 1984 ರಲ್ಲಿ ಇಂದಿರಾಗಾಂಧಿಯವರ ಕೊಲೆಯಾದ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ. 49.1 ರಷ್ಟು ಓಟುಗಳನ್ನು ಮತ್ತು 414 ಸೀಟುಗಳನ್ನು ಪಡೆದುಕೊಂಡು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. .
ಇದು ಈವರೆಗೆ ಯಾವುದೇ ಪಕ್ಷ ಪಡೆದುಕೊಂಡಿರುವ ಅತಿ ಹೆಚ್ಚು ಓಟು ಮತ್ತು ಸೀಟು ಷೇರು.
ಅಂದರೆ ಸೆಕ್ಯುಲಾರಿಸಂ ಮತ್ತು ಸಮಾಜವಾದಕ್ಕೆ ಬದ್ಧವಾಗಿದ್ದ ಲ್ಲಿ ಅದನ್ನು ಅತ್ಯಂತ ಸಮಗ್ರವಾಗಿ ಜಾರಿಗೆ ತರಬಹುದಾದಷ್ಟ್ ಬಹಮತವನ್ನು ಜನರು ಕೊಟ್ಟಿದ್ದರು.
ಆಗ ಬಿಜೆಪಿಗೆ ಕೇವಲ ಶೇ. 7.5. ರಷ್ಟು ಓಟುಗಳು ಮತ್ತು ಎರಡು ಸೀಟುಗಳು ಮಾತ್ರ ಬಂದಿತ್ತು. ಅಂದರೆ ಬಿಜೆಪಿ ಅತ್ಯಂತ ಬಲಹೀನವಾಗಿತ್ತು.
ಆದರೂ ಅಂದಿನ ಕಾಂಗ್ರೆಸ್ ಪ್ರಧಾನಿ ರಾಜೀವವ್ ಗಾಂಧಿ ರಾಮಮಂದಿರದ ಬಾಗಿಲನ್ನು ತೆರೆದು ಹಿಂದುತ್ವವಾದಿ ರಾಜಕಾರಣಕ್ಕೆ ಅನುವು ಮಾಡಿಕೊಟ್ಟರು.
ಜೊತೆಜೊತೆಗೆ ಪ್ರಭುತ್ವ ಒಡೆತನದಲ್ಲಿ ದೂರದರ್ಶನದಲ್ಲಿ ರಾಮಾಯಣ , ಮಹಾಭಾರತಗಳನ್ನು ಪ್ರದರ್ಶಿಸಿ ಹಿಂದುತ್ವದ ಆಕ್ರಣಮಕ್ಕೆ ಭೂಮಿಕೆ ಸಿದ್ದ ಮಾಡಿಕೊಟ್ಟರು.
ಅಷ್ಟು ಮಾತ್ರವಲ್ಲ. 1980-90ರ ಇಡೀ ಅವಧಿಯಲ್ಲಿ ಇಂದಿರಾ ಮತ್ತು ರಾಜೀವ್ ಅವರುಗಳು ಅಪಾರ ಜನಬೆಂಬಲ ಹೊಂದಿದ್ದರೂ ಇನ್ನು ಹಲವು ಬಗೆಯ ದೀರ್ಘ ಕಾಲೀನ ಮತ್ತು ದೂರಗಾಮಿ ಪರಿಣಾಮಗಳನ್ನು ಬೀರುವ ಹಿಂದುತ್ವ ಅಜೇಂಡಾಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕು ಕೊಟ್ಟರು.
– ಹೀಗಾಗಿ ಚುನಾವಣಾ ಭಯದಿಂದ ಹಿಂದೂ ಓಲೈಕೆ ಯ ರಾಜಕಾರಣವನ್ನು ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ ಎನ್ನುವುದು ಪೂರ್ಣ ಸತ್ಯವಲ್ಲ.
ವಾಸ್ತವದಲ್ಲಿ ,
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸುವ ನಿಲುವುಗಳು ಏನೇ ಇದ್ದರೂ…
– ಕಾಂಗ್ರೆಸ್ ನ ನೀತಿಗಳು,
-ಮೇಲಿನಿಂದ ಕೆಳಗಿನವರೆಗೆ ಬಹುಪಾಲು ನಾಯಕರ ಸರಾಸರಿ ಗ್ರಹಿಕೆ ಮತ್ತು ನಿಲುವುಗಳು ಆರೆಸ್ಸೆಸ್ಸಿನ ಹಿಂದುತ್ವದ ವಿರೋಧಿಯೇನಲ್ಲ.
ಆರೆಸ್ಸೆಸ್ ನ ಹಿಂದುತ್ವ ವಿರೋಧಿ ನಿಲುವುಳ್ಳವರು ಕಾಂಗ್ರೆಸ್ಸಿನಲ್ಲಿ ಅತ್ಯಂತ ದುರ್ಬಲ ಅಲ್ಪಸಂಖ್ಯಾತರು.
ಆದ್ದರಿಂದಲೇ…
ಬಾಬ್ರಿ ಮಸೀದಿಯನ್ನ ಕೆಡವಿ ಕಟ್ಟಿದ ಮಂದಿರವನ್ನು ಅಧರ್ಮದ ಹಾಗೂ ಅನ್ಯಾಯದ ಸ್ಮಾರಕ ಎನ್ನುವ ಬದ್ಧತೆಯನ್ನು ಕಾಂಗ್ರೆಸ್ ತೋರಿಸುತ್ತಿಲ್ಲ.
ಬದಲಿಗೆ ಪ್ರಿಯಾಂಕಾ ಗಾಂಧಿಯಿಂದ ಹಿಡಿದು ಕಮಲ್ ನಾಥ್ ವರೆಗೆ ಎಲ್ಲರೂ ರಾಮಂದಿರದದ ಹಿರಿಮೆ ಕಾಂಗ್ರೆಸ್ಸಿಗೆಸೇರಬೇಕು ಎಂದು ಬಿಜೆಪಿಯೊಡನೆ ಪೈಪೋಟಿ ಮಾಡುತ್ತಾರೆ. ಮತ್ತು ರಾಮಮಂದಿರ ನಿರ್ಮಾಣಕ್ಕೆ ಹಣಸಂಗ್ರಹವನ್ನು ಮಾಡುತ್ತಾರೆ!
ಆರೆಸ್ಸ್ಸಿನೊಂದಿಗೆ ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ಸಾಮೀಪ್ಯದ ಕಾರಣದಿಂದಾಗಿಯೇ ಕಾಂಗ್ರೆಸ್ಸಿನ ಹಲವಾರು ಹಿರಿಯ ನಾಯಕರು ಬಿಜೆಪಿ ಗೆ ಪಕ್ಷಾಂತರ ಮಾಡುವಾಗ ಯಾವುದೇ ಇಬ್ಬಂದಿ ಎದುರಿಸುವುದಿಲ್ಲ.
ಉದಾಹರಣೆಗೆ :
ಅಸ್ಸಾಮಿನ ಇಂದಿನ ಬಿಜೆಪಿ ಮುಖ್ಯಮಂತ್ರಿ ಹಿಮಾಂತ್ ಶರ್ಮ 2016 ರ ತನಕ ಕಾಂಗ್ರೆಸ್ಸಿನ ಹಿರಿಯ ನಾಯಕನಾಗಿದ್ದವನು . ಈಗ ಅವನು ಆರೆಸ್ಸೆಸ್ ಕೂಡ ನಾಚುವಂತ ಆರೆಸ್ಸಿಗ .
ಹಾಗೆಯೇ ಮಣಿಪುರದಲ್ಲಿ ಕೋಮುವಾದಿ ನರಸಂಹಾರದಲ್ಲಿ ನಿರತನಾಗಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೂಡಾ ಮಾಜಿ ಹಿರಿಯ ಕಾಂಗ್ರೆಸ್ಸಿಗನೇ ..
ಇದು ಬಿಜೆಪಿಗೆ ಸೇರಿದ ನಂತರ ಆದ ಬದಲಾವಣೆ ಎಂದುಕೊಳ್ಳುವುದು ಕೇವಲ ರಾಜಕೀಯ ಮುಟ್ಟಾಳತನವಾಗುವುದಿಲ್ಲ…
ಅಶೋಕ ವಿಶ್ವವಿದ್ಯಾಲಯದ ಒಂದು ಅಧ್ಯಯನದ ಪ್ರಕಾರ 2022 ರಲ್ಲಿ ಭಾರತದ 30 ರಾಜ್ಯಗಳ ವಿಧಾನಸಭೆಯಲ್ಲಿ ಒಟ್ಟಾರೆಯಾಗಿ 1200 ಬಿಜೆಪಿ ಶಾಸಕರಿದ್ದಾರೆ ಅದರಲ್ಲಿ 500 ಜನ ಕಾಂಗ್ರೆಸ್ಸಿನಿಂದ ಬಂದವರಾಗಿದ್ದರು ..
– ಕಾಂಗ್ರೆಸ್ ಪ್ರಬಲವಾಗಿದ್ದಾಗಲೂ, ದುರ್ಬಲವಾಗಿದ್ದಲೂ ಅದರ DNA ದಲ್ಲಿ ಹಿಂದೂತ್ವವಾದಿ ತಂತುಗಳು ಇದ್ದೆ ಇದ್ದವು.
ಏಕೆಂದರೆ ಸಂವಿಧಾನದಲ್ಲಿ ಏನೇ ಬರೆದುಕೊಂಡಿದ್ದರೂ ಭಾರತದ ಅಸಲಿ ಆಳುವವರ್ಗದ ….
ಅಂದರೆ
…ಈ ದೇಶದ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಮತ್ತು ಊಳಿಗಮಾನ್ಯ ಭೂ ಮಾಲೀಕರ ಹಾಗೂ ಇಂದಿನ ನವ ಉದಾರವಾದಿ ಕಾರ್ಪೊರೇಟ್ಸಿ ಪ್ರಭುಗಳ ಸಿದ್ಧಾಂತ ಮತ್ತು ಸಂಸ್ಕೃತಿ *ಜಾತಿವಾದಿ , ಬಂಡವಾಳವಾದಿ ಬ್ರಾಹ್ಮಣ್ಯವೆ ಆಗಿದೆ.
ಬ್ರಾಹ್ಮಣ್ಯವಾದಿ ಬಡವಾಳವಾದಕ್ಕೂ ಮತ್ತು ಆರೆಸ್ಸಿನ ಹಿಂದೂತ್ವಕ್ಕೋ ಹೊಕ್ಕಳುಬಳ್ಳಿ ಸಂಬಂಧವಿದೆ.
ಇದು ಕಾಂಗ್ರೆಸ್ ಗೆ ಮಾತ್ರ ಅನ್ವಯವಾಗುವ ವಿಶ್ಲೇಷಣೆಯೇನಲ್ಲ…
ಬ್ರಾಹ್ಮಣ್ಯವಾದಿ ಹಿಂದೂಧರ್ಮ ಮತ್ತು ಕಾರ್ಪೊರೇಟ್ ಬಂಡವಾಳವಾದದ ರಾಜಕೀಯ ಹೊಂದಿರುವ ಎಲ್ಲಾ ಆಳುವವರ್ಗದ ಪಕ್ಷಕ್ಕೂ ಅನ್ವಯವಾಗುವ ತರ್ಕ.
ಹೀಗಾಗೀ ಕಾಂಗ್ರೆಸ್ಸನ್ನು ಒಳಗೊಂಡಂತೆ ಬಹುಪಾಲು ವಿರೋಧ ಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ವಿರೋಧಿಯಾಗಿದ್ದರೂ , ಹಿಂದುತ್ವ-ಬ್ರಾಹ್ಮಣ್ಯ- ಕಾರ್ಪೋರೇಟ್ ಬಂಡವಾಳದ- ವಿರೋಧಿಗಳಲ್ಲ…
ಅರ್ಥತ್…
ಕಾರ್ಪೋರೆಟ್ ಬ್ರಾಹ್ಮಣ್ಯದ ಸಮರ್ಥಕ ಎಲ್ಲಾ ಪಕ್ಷಗಳು ಭಾರತಿಯ ಫ್ಯಾಸಿಸಂ ನ ಸಂಬಂಧಿಗಳು…. ಅಥವಾ ಹೆಚ್ಚೆಂದರೆ ದಾಯಾದಿಗಳು…. ಅಷ್ಟೇ…
ಹೀಗಾಗಿ ಕಾಂಗ್ರೇಸ್ಸನ್ನು ಹಚ್ಚಿಕೊಂಡು ಅಥವಾ ನೆಚ್ಚಿಕೊಂಡು ಕಾರ್ಪೋರೆಟ್ ಬ್ರಾಹ್ಮಣ್ಯವನ್ನಾಗಲಿ ಅಥವಾ ಅದರ ಉಗ್ರ ರಾಜಕೀಯ ಅಭಿವ್ಯಕ್ತಿಯಾಗುರುವ RSS- ಬಿಜೆಪಿ ಫ್ಯಾಸಿಸಂ ನಾಗಲಿ ಸೋಲಿಸುವ ಕನಸು ಕಾಣಲಾಗದು...
ಆದ್ದರಿಂದ…
- ಒಂದು ಜನಪರ್ಯಾಯವನ್ನು ಕಟ್ಟದೆ.
- ಜನರ ನಡುವೆ ಬಲವಾದ ಸಮಾಜಾವಾದಿ- ಧರ್ಮಾತೀತ ಭ್ರಾತೃತ್ವನ್ನು ಕಟ್ಟದೆ
- ಕಾಂಗ್ರೆಸ್ಸನ್ನು ಫ್ಯಾಸಿಸ್ಟ್ ವಿರೋಧಿ ಮಿತ್ರ ಶಕ್ತಿ ಎಂದು ಪರಿಗಣಿಸಿದರೆ …
- ಫ್ಯಾಸಿಸ್ಟ್ ವಿರೋಧಿ ಜನ ಚಳವಳಿ ತನ್ನ ಕಾಲಮೇಲೆ ತಾನೇ ದೊಡ್ಡ ಬಂಡೆಯನ್ನು ಹಾಕಿಕೊಂಡಂತಾಗುತ್ತದೆ.
ಕರ್ನಾಟಕದಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ಸಿನ ನಡೆಗಳು ಸಾಬೀತು ಮಾಡುತ್ತಿರುವುದು ಇದನ್ನೇ.
ಹಾಗಿದ್ದರೆ ದಾರಿಯೇನು?
– ಮೊದಲು ಕಾಂಗ್ರೆಸ್ಸಿನ ಮೇಲೆ ಬ್ರಾಂತಿಯನ್ನು ಕಳಚಿಕೊಳ್ಳಬೇಕು.
– ಬಿಜೆಪಿ ಮತ್ತು ಆರೆಸ್ಸಸ್ ಪ್ರಧಾನ ಶತ್ರುವಾದರೂ , ಕಾಂಗ್ರೆಸ್ ಆಳುವವರ್ಗದ ಪಕ್ಷವೇ ಹೊರತು ಜನತೆಯ ಮಿತ್ರನೇನಲ್ಲ ಎಂಬುದನ್ನು ಸ್ಪಷ್ಟ ಮಾಡಿಕೊಳ್ಳಬೇಕು.
– ಹಾಗೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಂತರವಿದ್ದರೂ ಅದು ಅತ್ಯಲ್ಪ ಎಂದು ವಿಷಯವನ್ನು ಈಗಲಾದರೂ ಅರಿತುಕೊಳ್ಳಬೇಕು.
– ಇಂದಿನ ಆರೆಸ್ಸೆಸ್ ಪ್ರಣೀತ ಹಿಂದೂತ್ವದ ಬೇರುಗಳು ಬ್ರಾಹ್ಮಣೀಯ , ಜಾತಿ ವಾದಿ ವೈದಿಕ ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ಬಿತ್ತಿರುವ ಜಾತಿ ಶ್ರೇಷ್ಠತೆ , ಕುಲ-ಲಿಂಗ ತಾರತಮ್ಯ ಮತ್ತು ವಿರೋಧಿಗಳ ಬಗೆಗಿನ ಅಸಹನೆಯಲ್ಲಿದೆ.
ಅದನ್ನು ಆಸರೆಯಾಗಿಸಿಕೊಂಡು ಬೆಳೆಯುತ್ತಿರುವ ಕಾರ್ಪೊರೇಟ್ ಹಿಂದೂತ್ವವು ಬಿತ್ತುತ್ತಿರುವ ದ್ವೇಷ ರಾಜಕಾರಣವನ್ನು ಸಮಾಜಾವಾದಿ ನೆಲೆ ಮತ್ತು “ಪ್ರಬುದ್ಧ” ಬ್ರಾತೃತ್ವ ಬೆಸೆಯುವ ಚಳವಳಿಗಳ ಮೂಲಕ ಸೋಲಿಸುತ್ತಾ ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಬೇಕು.
– ಇದು ಒಂದು ನಿರಂತರ ಚಳವಳಿಯಾಗದೆ ಭಾರತೀಯ ಫ್ಯಾಸೀಸಂ ಸೋಲಿಸಲಾಗದು.
ಅಲ್ಲಿಯ ತನಕ ಚುನಾವಣೆಯಲ್ಲಿ ಅಕಸ್ಮಾತ್ ಅಲ್ಲಲ್ಲಿ ಮತ್ತು ಆಗಾಗ ಬಿಜೆಪಿ ಸೋತರೂ ಅದು ಹಿಂದೂತ್ವದ ಸೋಲಾಗಿರುವುದಿಲ್ಲ .
ಅಲ್ಲವೇ?