Sunday, May 5, 2024

ಪ್ರಾಯೋಗಿಕ ಆವೃತ್ತಿ

ಹರಿಯಾಣ ಪೊಲೀಸರಿಂದ ರೈತರ ಮೇಲೆ ಅಶ್ರುವಾಯು ಶೆಲ್ ದಾಳಿ: 100ಕ್ಕೂ ಹೆಚ್ಚು ರೈತರು ಗಾಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದೆಹಲಿ ಚಲೋ’ ಹಮ್ಮಿಕೊಂಡಿರುವ ರೈತರನ್ನು ತಡೆಯಲು ಹರಿಯಾಣ-ಪಂಜಾಬ್‌ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಪರಿಣಾಮ ಗಡಿ ಪ್ರದೇಶ ಯುದ್ಧ ಭೂಮಿಯಂತಾಗಿದೆ.

ಖಾನೌರಿ ಗಡಿಯಲ್ಲಿ ಹರಿಯಾಣ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಪಂಜಾಬ್‌ನ ಭೂ ಪ್ರದೇಶದೊಳಗೆ ನುಗ್ಗಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ನಮ್ಮ ವಾಹನಗಳನ್ನು ಹಾನಿಗೊಳಿಸಿದ್ದಾರೆ ಎಂದು ರೈತರು ಆರೋಪಿಸಿದ್ದು, ಘಟನೆಯಲ್ಲಿ 100ಕ್ಕೂ ಅಧಿಕ ಪ್ರತಿಭಟನಾ ನಿರತರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಪಂಜಾಬ್‌-ಹರಿಯಾಣ ಗಡಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳ ಬಳಿ ರೈತರು ತಲುಪಿದಾಗ ಪೊಲೀಸರು ಅಶ್ರುವಾಯು ಶೆಲ್ ದಾಳಿ ಆರಂಭಿಸಿದ್ದರು. ಅಪರಾಹ್ನ 2 ಗಂಟೆಯವರೆಗೆ ಶೆಲ್ ದಾಳಿ ಮುಂದುವರೆದಿತ್ತು. ಈ ವೇಳೆ ಪೊಲೀಸರುನ್ನು ಎದುರಿಸಲು ರೈತರು ಜಮೀನಿಗೆ ತೆರಳಿ ಹುಲ್ಲಿಗೆ ಬೆಂಕಿ ಹಾಕಿದ್ದಾರೆ. ಸಂಜೆ 3:15ರ ಸುಮಾರಿಗೆ ಪೊಲೀಸರು ಮತ್ತೆ ಶೆಲ್ ದಾಳಿ ಪುನರಾರಂಭಿಸಿದ್ದಾರೆ ಎಂದು ವರದಿಗಳು ಹೇಳಿವೆ.

“ಪೊಲೀಸರು ಪಂಜಾಬ್‌ನ ಭೂ ಪ್ರದೇಶದ ಕೃಷಿ ಭೂಮಿಗೆ ನುಗ್ಗಿ ರೈತರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಎದುರಿಸಲು ರೈತರು ಹುಲ್ಲಿಗೆ ಬೆಂಕಿ ಹಾಕಿದಷ್ಟೆ, ಅವರಿಗೆ ಬಹಳ ಹಿಂಸೆಯಾಗಿದೆ. ಕಳೆದ ಒಂದು ವಾರದಿಂದ ಅವರು ರೈತರಿಗೆ ಅದೇ ರೀತಿಯ ಹಿಂಸೆ ನೀಡುತ್ತಿದ್ದಾರೆ. ಪೊಲೀಸರು 12 ಬೋರ್ ಗನ್‌ಗಳಿಂದ ನಮ್ಮ ಮೇಲೆ ಗುಂಡು ಹಾರಿಸಿದ್ದಾರೆ. ನಾವು ರೈತರು, ಭಯೋತ್ಪಾದಕರಲ್ಲ” ಎಂದು ಪೊಲೀಸ್ ದಾಳಿಯಿಂದ ಗಾಯಗೊಂಡ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸರೋನ್ ಗ್ರಾಮದ ರೈತ ಜರ್ನೈಲ್ ಸಿಂಗ್ (46) ಹೇಳಿದ್ದಾರೆ.

ಹರಿಯಾಣ ಪೊಲೀಸರು ತಮ್ಮ ಗಡಿಯೊಳಗೆ ನುಗ್ಗಿರುವುದನ್ನು ಪಂಜಾಬ್‌ ಪೊಲೀಸರು ನಿರಾಕರಿಸಿದ್ದಾರೆ. ಬ್ಯಾರಿಕೇಡ್‌ನಿಂದ ಸುಮಾರು 500 ಮೀಟರ್ ಜಾಗ ಹರಿಯಾಣ ರಾಜ್ಯಕ್ಕೆ ಸೇರಿದ್ದು ಎಂದು ಪತ್ರಾನ್ ಡಿಎಸ್ಪಿ ದಲ್ಜಿತ್ ಸಿಂಗ್ ವಿರ್ಕ್ ತಿಳಿಸಿದ್ದಾರೆ.

“ಎರಡೂ ಕಡೆಯಿಂದ ಸಂಘರ್ಷದ ವರದಿಗಳು ಬಂದಿರುವುದರಿಂದ ನಾನು ಸತ್ಯಾಸತ್ಯತೆ ಪರಿಶೀಲಿಸುತ್ತೇನೆ. ಹರಿಯಾಣದ ವಾದವನ್ನು ಆಲಿಸುತ್ತೇನೆ. ಪ್ರತಿಭಟನಾ ನಿರತ ರೈತರು ಹುಲ್ಲು ಸುಟ್ಟಿದ್ದರಿಂದ ಸ್ವಲ್ಪ ಗೊಂದಲದ ವಾತಾವರಣ ಉಂಟಾಗಿತ್ತು. ಘಟನೆಯ ಸಂದರ್ಭ ನಾನು ಸ್ಥಳಲದಲ್ಲಿ ಇರಲಿಲ್ಲ. ಸತ್ಯಾಸತ್ಯತೆ ತಿಳಿದು ಮಾತನಾಡುತ್ತೇನೆ” ಎಂದು ಪಟಿಯಾಲ ಡೆಪ್ಯುಟಿ ಕಮಿಷನರ್ ಶೌಖತ್ ಅಹ್ಮದ್ ಪರ್ರೆ ಹೇಳಿದ್ದಾರೆ.

“ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ರೈತರ ಮೇಲೆ ದೌರ್ಜನ್ಯ ಎಸಗಿದ್ದು, ಒಬ್ಬ ರೈತನನ್ನು ಹತ್ಯೆ ಮಾಡಿದ್ದಾರೆ. ಹಲವರನ್ನು ಗಾಯಗೊಳಿಸಿದ್ದಾರೆ. ಪೊಲೀಸರು ಪಂಜಾಬ್ ಗಡಿಯೊಳಗೆ ನುಗ್ಗಿ ಟ್ರ್ಯಾಕ್ಟರ್‌ಗಳು ಸೇರಿದಂತೆ ರೈತರ ವಾಹನಗಳನ್ನು ಜಖಂಗೊಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ರೈತರು ಶಾಂತಿಯುತವಾಗಿ ಮುಂದುವರಿಯಲು ಕೇಂದ್ರ ಮತ್ತು ಹರಿಯಾಣ ಸರ್ಕಾರಗಳು ಬ್ಯಾರಿಕೇಡ್‌ಗಳನ್ನು ತೆಗೆದುಹಾಕಬೇಕೆಂದು ಅವರು ಬಯಸಿದ್ದರು ಆದರೆ ಪೊಲೀಸರು ಭಾರೀ ಶೆಲ್ ದಾಳಿ ನಡೆಸಿದರು ಎಂದು ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಣ್ ಸಿಂಗ್ ಪಂಧೇರ್ ಹೇಳಿದರು. “ದೇಶದ ರೈತರ ಹಿತದೃಷ್ಟಿಯಿಂದ ನಾವು ಸಾಯಲು ಮತ್ತು ಗುಂಡು ಹಾರಿಸಲು ಸಿದ್ಧರಿದ್ದೇವೆ, ನಾವು ದೆಹಲಿ ತಲುಪಲು ಅಚಲವಾಗಿದ್ದೇವೆ, ಆದರೆ ಅವರು ಗುಂಡಿನ ದಾಳಿ ಮಾಡಿದರೆ ಅಥವಾ ಬಲಪ್ರಯೋಗ ಮಾಡಿದರೆ, ಏನು ಸಂಭವಿಸಿದರೂ ಈ ಬ್ಯಾರಿಕೇಡ್‌ಗಳನ್ನು ಹಾಕಿದವರ ಜವಾಬ್ದಾರಿ.” ದಲ್ಲೆವಾಲ್ ಮತ್ತು ಪಂಧೇರ್ ಹೇಳಿದರು.

“ರೈತರು ಶಾಂತಿಯುತವಾಗಿ ದೆಹಲಿಗೆ ತೆರಳಲು ಅನುಮತಿಸುವಂತೆ ಕೇಂದ್ರ ಮತ್ತು ಹರಿಯಾಣ ಸರ್ಕಾರಕ್ಕೆ ನಾವು ಆಗ್ರಹಿಸುತ್ತೇವೆ. ಪೊಲೀಸರು ಶೆಲ್ ದಾಳಿ ನಡೆಸಿದರೆ, ದೇಶದ ರೈತರಿಗಾಗಿ ಸಾಯಲೂ ನಾವು ಸಿದ್ದ. ದೆಹಲಿಗೆ ತೆರಳುವ ವಿಚಾರದಲ್ಲಿ ನಾವು ಅಚಲವಾಗಿದ್ದೇವೆ. ಭದ್ರತಾ ಪಡೆಗಳ ಬಳಕೆ, ಗುಂಡಿನ ದಾಳಿಯಿಂದ ಏನಾದರು ಸಂಭವಿಸಿದರೆ ಬ್ಯಾರಿಕೇಡ್ ಹಾಕಿದವರೇ ಅದಕ್ಕೆ ನೇರ ಹೊಣೆ” ಎಂದು ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವಣ್ ಸಿಂಗ್ ಪಂಧೇರ್ ಹೇಳಿದ್ದಾರೆ.

ನಾವು ಶಾಂತಿಯುತವಾಗಿ ಮುಂದುವರೆಯಲು ನಿರ್ಧರಿಸಿದ್ದೇವೆ. ಆದರೆ, ಸರ್ಕಾರ ರೈತರ ರಕ್ತದಲ್ಲಿ ಹೋಳಿ ಆಡಲು ಭಯಸುತ್ತಿದೆ. ಪ್ರಧಾನ ಮಂತ್ರಿಗಳು ಮುಂದೆ ಬಂದು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. ನಾವು ಯಾವುದೇ ಅಡೆತಡೆಗಳಿಲ್ಲದೆ ದೆಹಲಿ ಪ್ರವೇಶಿಸಲು ಅನುಮತಿ ನೀಡಬೇಕು. ಸಂವಿಧಾನವನ್ನು ರಕ್ಷಿಸುವುದು ಪ್ರಧಾನಿಯ ಕರ್ತವ್ಯ ಎಂದು ದಲ್ಲೆವಾಲ್ ಮತ್ತು ಪಂಧೇರ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ನಾವು ನಮ್ಮ ಕಡೆಯಿಂದ ಶಾಂತಿಯುತವಾಗಿ ಉಳಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಇದು ಗುರುಕಾ ಬಾಗ್‌ನಂತಹ ಮೋರ್ಚಾ ಆಗಿರುತ್ತದೆ, ಅಲ್ಲಿ ನಾವು ಸರ್ಕಾರದ ಮೇಲೆ ಹೊರೆ ಹೊತ್ತಿದ್ದೇವೆ ಆದರೆ ಕೈ ಎತ್ತಲಿಲ್ಲ. ಕೇಂದ್ರವು ರೈತರ ರಕ್ತದಿಂದ ಹೋಳಿ ಆಡುತ್ತದೆ ಎಂದು ನಾವು ಭಾವಿಸುತ್ತೇವೆ. ಕಾರ್ಮಿಕರು, ಪ್ರಧಾನ ಮಂತ್ರಿಗಳು ಮುಂದೆ ಬಂದು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು, ಕೇಂದ್ರವು ಬೇಡಿಕೆಯನ್ನು ಒಪ್ಪಿಕೊಳ್ಳುವಲ್ಲಿ ಸ್ವಲ್ಪ ಅನುಮಾನವಿದೆ ಎಂದು ಭಾವಿಸಿದರೆ, ಸಂವಿಧಾನವನ್ನು ರಕ್ಷಿಸುವುದು ಪ್ರಧಾನಿಯವರ ಕರ್ತವ್ಯ ಎಂದು ನಾವು ವಿನಂತಿಸುತ್ತೇವೆ, ಅದರಂತೆ ನಮಗೆ ಅವಕಾಶ ನೀಡಬೇಕು. ಅಡೆತಡೆಗಳನ್ನು ತೆರೆಯುವ ಮೂಲಕ ದೆಹಲಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ”ಎಂದು ದಲ್ಲೆವಾಲ್ ಅವರೊಂದಿಗೆ ಬೆಳಿಗ್ಗೆ ಮಾಧ್ಯಮಗೋಷ್ಠಿಯಲ್ಲಿ ಪಂಧೇರ್ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!