ಭಕ್ತ ಕನಕದಾಸರು ಸಾಮಾಜಿಕ ಅಸಮಾನತೆ ವಿರುದ್ಧ ತನ್ನ ಕೀರ್ತನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದ ಮಹಾನ್ ಶ್ರೇಷ್ಠ ಸಂತ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಕೃತಿಯಾದ ರಾಮ ಧ್ಯಾನ ಚರಿತ್ರೆಯಲ್ಲಿ ಭತ್ತವನ್ನು ಶ್ರೀಮಂತರಿಗೆ, ರಾಗಿಯನ್ನು ಬಡವರಿಗೆ ಹೋಲಿಸಿ ರಾಗಿಯ ಮಹತ್ವವನ್ನು ಜಗತ್ತಿಗೆ ಸಾರುವ ಮೂಲಕ ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಸಾರಿದರು.
ಇದೇ ವೇಳೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ ಸಾಧಕರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ. ವಿ ಕುಮಾರ್, ಇ.ಓ ಶ್ರೀನಿವಾಸ್, ಬಿಇಒ ಉಮಾ, ಉಪನ್ಯಾಸಕ ಭೀಮರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮಲ್ ನಿರ್ದೇಶಕ ವಿಶ್ವಾಸ್, ಪುರಸಭೆ ಸದಸ್ಯರಾದ ಪ್ರಮೀಳಾ ಶಿವಸ್ವಾಮಿ, ನೂರುಲ್ಲಾ, ಬಸವರಾಜು, ಸಂತೋಷ್, ಆನಂದ್, ಬಸವರಾಜು., ಕುರುಬ ಸಮಾಜದ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಪಿ ರಾಜು, ದೊಡ್ಡಯ್ಯ ಸಮುದಾಯದ ಮುಖಂಡರಾದ ಪುಟ್ಟ ಬಸವಯ್ಯ, ಬಂಕ್ ಮಹಾದೇವ್ ಸೇರಿದಂತೆ ಇತರರು ಇದ್ದರು.




