Thursday, September 19, 2024

ಪ್ರಾಯೋಗಿಕ ಆವೃತ್ತಿ

ಜು.22ಕ್ಕೆ ಕಾರಸವಾಡಿ ಮಹದೇವ – 50, ಅಭಿನಂದನಾ ಸಂಭ್ರಮ

ಯುವಜನ ಚಟುವಟಿಕೆ, ಸಾವಯವ ಕೃಷಿ, ಪತ್ರಿಕೋದ್ಯಮ, ಜನಪದ, ಗ್ರಾಮಾಭಿವೃದ್ಧಿ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಕಳೆದ ಮೂರು ದಶಕಗಳಿಂದ ಕೆಲಸ ಮಾಡುತ್ತಾ ಬಂದಿರುವ ಒಡನಾಡಿ ಕಾರಸವಾಡಿ ಮಹದೇವ ಅವರ ಜನ್ಮ ಸುವರ್ಣ ಸಂಭ್ರಮ, ಅಭಿನಂದನಾ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ ಜುಲೈ 22ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯ ನಗರದ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಭಿನಂದನ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ತಿಳಿಸಿದರು.

ಜಾಹೀರಾತು

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭವಾಗಲಿರುವ ಚಿಂತನ ಮಂಥನ ಉತ್ಥಾನ ವಿಚಾರ ಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ನೆರವೇರಿಸಲಿದ್ದು, ಫೆವಾರ್ಡ್ -ಕೆ ಅಧ್ಯಕ್ಷ ಮಹೇಶ್ ಚಂದ್ರಗುರು ಅಧ್ಯಕ್ಷತೆ  ವಹಿಸುವರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್‌, ಕಾರಸವಾಡಿ ಮಹದೇವು ಉಪಸ್ಥಿತರಿರುವರು ಎಂದರು.

ನಂತರ ನಡೆಯಲಿರುವ ಚಿಂತನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೀವನ: ಯುವಜನ ಸಾಂಸ್ಕೃತಿ ಚಟುವಟಿಕೆ, ಸಾಂಸ್ಕೃತಿಕ ಸಂಚಲನ “ಹೇಗಿತ್ತು” ಎಂಬ ಚಿಂತನೆಯಲ್ಲಿ ಸಂಸ್ಕೃತಿ ಚಿಂತಕರಾದ ಕೆ.ಕಾಳೇಗೌಡ. SIRD ತರಬೇತುದಾರ ನ.ಲಿ.ಕೃ‍‍‍‍ಷ್ಣ, ಸಾಂಸ್ಕೃತಿಕ ಪರಿಚಾರಕರಾದ ವಳಗರೆಹಳ್ಳಿ ಲೋಕೇಶ್ ಅವರು ತಮ್ಮ ವಿಚಾರ ಮಂಡಿಸಲಿದ್ದಾರೆ, ಬಳಿಕ ಈಗ ಹೇಗಿದೆ ? ಎಂಬ ವಿಷಯ ಕುರಿತು ಶಿಕ್ಷಣ ತಜ್ಞ ಡಾ. ಎಸ್.ಬಿ. ಶಂಕರಗೌಡ ಅವರು ವಿಷಯ ಮಂಡಿಸಲಿದ್ದಾರೆ. “ಮುಂದೆ ಏನಾಗಬೇಕು” ಎಂಬ ಕುರಿತು ಅಭಿವೃದ್ಧಿ ಚಿಂತಕರಾದ ಯೋಗೇಶ್ ಅಪ್ಪಾಜಯ್ಯ ಅವರು ಮಾತಾನಾಡಲಿದ್ದು, ಸಂವಾದದಲ್ಲಿ ವಿದ್ಯಾರ್ಥಿಗಳು, ಯುವಜನರು, ಯುವ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವರು ಎಂದರು.

ನಂತರ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಕಾರಸವಾಡಿ ಮಹದೇವು -ಹರಿಣಿ ದಂಪತಿಗಳನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಲಿದ್ದಾರೆ. ಯುವ ಚಿಂತಕ ಕುಮಾರ್‌ ಕೊಪ್ಪ ಅಭಿನಂದನಾ ಭಾಷಣ ಮಾಡಲಿದ್ದು, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು ಯುವ ಸ್ಪೂರ್ತಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ನಾಯಕ ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ರಾಮಕೃಷ್ಣ, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪತಕರ್ತ ಡಿ.ದೇವರಾಜ ಕೊಪ್ಪ, ಮುಖಂಡರಾದ ಕೀಲಾರ ಕಷ್ಣೇಗೌಡ, ಪುಟ್ಟಸ್ವಾಮಿ, ಚಾಮನಹಳ್ಳಿ ಮಂಜು, ಮಂಜೇಶ್ ಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!