Friday, November 20, 2026

ಪ್ರಾಯೋಗಿಕ ಆವೃತ್ತಿ

ಕರಾಟೆ ಓಪನ್ ಚಾಂಪಿಯನ್ ಶಿಪ್: ಮಂಡ್ಯದ ವಿದ್ಯಾರ್ಥಿಗಳ ಸಾಧನೆ

ತಮಿಳುನಾಡಿನ ಇರೋಡ್ ನಲ್ಲಿ ನಡೆದ ಸೌತ್ ಇಂಡಿಯನ್ ಕರಾಟೆ ಓಪನ್ ಚಾಂಪಿಯನ್ ಶಿಪ್ ನಲ್ಲಿ  ಮಂಡ್ಯದ ಗೋಜು ರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಹಾಗೂ ಟೀಮ್ ವಿ. ಎಲ್. ಎಂ. ಎಂ. ಕರಾಟೆ ಟ್ರೈನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

9 ವರ್ಷ ಕಟಾ ಬಾಲಕ, ಬಾಲಕಿಯರ ವಿಭಾಗ

ನಿಶಾಂತ್. ಆರ್ ಪ್ರಥಮ, ಹಂಶಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ, 12 ವರ್ಷದೊಳಗಿನ ಕಟಾ ಬಾಲಕ, ಬಾಲಕಿಯರ ವಿಭಾಗದಲ್ಲಿ: ವಿಷ್ಣು ಮೊದಲಿಯಾರ್, ರಂಜನ್ ಶಶಾಂಕ್, ಪ್ರಥಮ ಸ್ಥಾನ, ಪೂರ್ವಿಕ, ಹನಿ, ದೀಕ್ಷಿತ್, ಹೇಮಂತ್, ಲಲಿತ್ ದ್ವಿತೀಯ ಸ್ಥಾನ ಪಡೆದರೆ, 13 ರಿಂದ 15 ವರ್ಷ ಬಾಲಕ ,ಬಾಲಕಿಯರ ವಿಭಾಗದಲ್ಲಿ – ಪೂವಿಲ್, ಹಂಸ ಪ್ರಿಯಾ, ಹರ್ಷ ಎಂ ಗೌಡ ಪ್ರಥಮ ಸ್ಥಾನ, ವರುಣ್, ಯಶಸ್, ಸುಪ್ರೀತ್, ನೂತನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕರಾಟೆ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕರಾಟೆ ತರಬೇತುದಾರರಾದ ಲೋಕೇಶ್ ಮೊದಲಿಯಾರ್ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಕಟಾ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಈ ಚಾಂಪಿಯನ್ ಶಿಫ್ ಟೀಮ್ ಮ್ಯಾನೇಜರ್ ಹಾಗೂ ತರಬೇತುದಾರ ಎಸ್. ಸಿ. ಸಚಿನ್ ಕುಮಾರ್ ಕಾರ್ಯ ನಿರ್ವಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ