Saturday, July 13, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರದಲ್ಲಿ ಕರ್ನಾಟಕ ಜನಚೈತನ್ಯ ಯಾತ್ರೆ

ಕರ್ನಾಟಕ ಜನಚೈತನ್ಯ ಯಾತ್ರೆ ಇಂದು ಪಾಂಡವಪುರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ KRS ಪಕ್ಷದ ಕಾರ್ಯಕರ್ತರು ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಯಶಸ್ವಿ ಪ್ರಚಾರ ಕಾರ್ಯಕ್ರಮವನ್ನು ಮಾಡಿದರು.

ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ರೈತರು ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟದಲ್ಲಿ ಭಾಗವಹಿಸಿ ರಾಜ್ಯಾಧ್ಯಕ್ಷರು ಅಲ್ಲಿ ನೆರೆದಿದ್ದ ಗ್ರಾಮದ ರೈತಾಪಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಜನಚೈತನ್ಯ ಯಾತ್ರ ತಂಡವು ಚಿನಕುರುಳಿ ಹಾಗೂ ಬೂಕನಕೆರೆ ಗ್ರಾಮಕ್ಕೆ ತೆರಳಿ ಜನಚೈತನ್ಯ ಯಾತ್ರೆಯ ಸದುದ್ದೇಶಗಳ ಅರಿವು ಮೂಡಿಸುವುದರ ಮೂಲಕ ಪ್ರಚಾರ ನಡೆಸಿ ಜನರಿಂದ ದೇಣಿಗೆ ಸಂಗ್ರಹವನ್ನು ಕೂಡ ಮಾಡಿತು.

ಆನಂತರದಲ್ಲಿ ಅರಕಲಗೂಡಿಗೆ ಬಂದ ಕರ್ನಾಟಕ ಜನ ಚೈತನ್ಯ ಯಾತ್ರೆ, ಅರಕಲಗೂಡಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಜಂಟೀ ಕಾರ್ಯದರ್ಶಿ ಸೋಮಸುಂದರ್, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ, ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!