Thursday, September 19, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕದ ರಾಜಕೀಯ ಆಸಕ್ತರ ಗಮನಕ್ಕೆ…..

✍️ ಶಿವಸುಂದರ್

ಕರ್ನಾಟಕದ ಬಲಪಂಥೀಯ, ನಡುಪಂಥೀಯ ಮತ್ತು ಎಡಪಕ್ಷಗಳ ಚುನಾವಣಾ ಇತಿಹಾಸ

ಈ ಕೆಳಗಿನ TABLE ಅನ್ನು 2013 ರ ಜೂನ್ ನಲ್ಲಿ EPW ಪತ್ರಿಕೆಗೆ ಬರೆದ ” Defeat Of Saffron in Karnataka”

https://www.epw.in/journal/2013/22/commentary/defeat-saffron-karnataka.html ಲೇಖನಕ್ಕಾಗಿ ಕೃಡಿಕರಿಸಿದ ಅಂಕಿ ಅಂಶಗಳ ಕೋಷ್ಠಕ:

ಇದರಲ್ಲಿ 1951 ರಲ್ಲಿ ನಡೆದ ಪ್ರಥಮ ಮೈಸೂರು ಶಾಸನ ಸಭಾ ಚುನಾವಣೆಯಿಂದ ಹಿಡಿದು 2013ರಲ್ಲಿ ನಡೆದ 14 ನೇ ಕರ್ನಾಟಕ ಶಾಸನಾ ಸಭಾ ಚುನಾವಣೆಯವರೆಗೆ ವಿವಿಧ ಚುನಾವಣಾ ಪಕ್ಷಗಳ ಬೆಳವಣಿಗೆ ಅಥವಾ ಪತನದ ಅಂಕಿಅಂಶಗಳನ್ನು ದಾಖಲಿಸಲಾಗಿದೆ.

ಪ್ರಧಾನವಾಗಿ ಕಾಂಗ್ರೆಸ್ /ಭಾರತೀಯ ಜನತಾ ಪಕ್ಷ, ಆಗೊಮ್ಮೆ-ಈಗೊಮ್ಮೆ ಕಾಂಗ್ರೆಸ್ ನ ಎಡಕ್ಕೆ ಹಾಗೂ ಸಮಾಜವಾದದ ಬಲಕ್ಕೆ ಬಂದು ನಿಲ್ಲುತ್ತಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ/ ಜನತಾ ಪಾರ್ಟಿ/ಜೆಡಿಎಸ್ ನಂಥ ಪಕ್ಷಗಳು ಹಾಗೂ ಅಂತಿಮವಾಗಿ ಸಿಪಿಐ ಮತ್ತು ಸಿಪಿಎಂ ನಂಥ ಎಡಪಂಥೀಯ ಪಕ್ಷಗಳ ಚುನಾವಣಾ ಏಳು-ಬೀಳುಗಳ ಚರಿತ್ರೆಯನ್ನು ಈ ಟೇಬಲ್ ಹೇಳುತ್ತದೆ.

ಇಲ್ಲಿರುವ ಅಂಕಿಅಂಶಗಳನ್ನು ಭಾರತದ ಚುನಾವಣಾ ಆಯೋಗದ ವೆಬ್ ಸೈಟ್:
https://eci.gov.in/statistical-report/statistical-reports/ ನಿಂದ ಕ್ರೂಢೀಕರಿಸಲಾಗಿದೆ.

ಈ ಟೇಬಲ್ ನ ಕೆಳಗೆ ಹೇಗೆ ಓದಬೇಕೆನ್ನುವ ವಿವರಗಳಿವೆ . ಆದರೂ ಸಂಕ್ಷಿಪ್ತವಾಗಿ ಹೇಳುವುದಾದರೆ :

1) ) ಮೊದಲ ಕಾಲಂ ಚುನಾವಣಾ ನಡೆದ ವರ್ಷ. ಆ ವರ್ಷದ ಪಕ್ಕಕ್ಕೆ ಬ್ರಾಕೆಟ್ ನಲ್ಲಿರುವ ಸಂಖ್ಯೆ ಆಗ ಶಾಸನ ಸಭೆಯ ಸಾಮರ್ಥ್ಯ.

ಉದಾಹರಣೆಗೆ 1951 ರಲ್ಲಿ ಕರ್ನಾಟಕ ಏಕೀಕರಣಕ್ಕೆ ಮುನ್ನ ಮೈಸೂರು ಶಾಸನಾ ಸಭಾ ಸಾಮರ್ಥ್ಯ 80 , ಏಕೀಕರಣದ ನಂತರ 1957 ರಲ್ಲಿ 179, 1967 ರಲ್ಲಿ 216 ಮತ್ತು 1978 ರಿಂದ 224 .

2) ಎರಡನೇ ಕಾಲಂ ಹಾಗೂ ಆ ನಂತರದ ಕಾಲಂ ಗಳು ಆಯಾ ಪಕ್ಷಗಳ ಸಾಧನೆಯ ವಿವರಗಳು…

– st ಎಂದರೇ ಪಡೆದುಕೊಂಡ ಸೀಟುಗಳು ,
-vt ಎಂದರೆ ಪಡೆದುಕೊಂಡ ಓಟು ಷೇರು (ಶೇಕಡಾವಾರು)

3) ಈ ಲೇಖನ ಬರೆದದ್ದು 2013 ರಲ್ಲಿ .. ಹೀಗಾಗಿ 2018ರ ಚುನಾವಣೆಯ ಮಾಹಿತಿ ಟೇಬಲ್ ನಲ್ಲಿಲ್ಲ . ಹೀಗಾಗಿ ಕೆಳಗೆ ಪ್ರತ್ಯೇಕವಾಗಿ 2018ರ ಚುನಾವಣಾ ಮಾಹಿತಿ ನೀಡಿದ್ದೇನೆ ..

4) 2018 ರ ಚುನಾವಣೆಯಲ್ಲಿ ಪಕ್ಷಗಳ ಸಾಧನೆ :

ಚುನಾವಣಾ ಸಾಧನೆಗಳ ಇತಿಹಾಸವು ಕರ್ನಾಟಕದಲ್ಲಿ ಆಯಾ ಪಕ್ಷಗಳ ರಾಜಕೀಯ ಸಾಧನೆಯ ಹಾಗೂ ಜನಮನ್ನಣೆಯ ಇತಿಹಾಸದ ಒಂದು ಸಂಕೇತವೂ ಆಗಿರುವುದರಿಂದ ಕೇವಲ ಚುನಾವಣಾ ಬದಲಾವಣೆಯ ಆಸಕ್ತಿ ಮಾತ್ರವಲ್ಲದೆ ರಾಜಕೀಯ ಬದಲಾವಣೆಯ ಆಸಕ್ತಿ ಇರುವವರೆಗೂ ಈ ಅಧ್ಯಯನ ಸಹಾಯ ಆಗಬಹುದು ಎಂದು ಆಶಿಸುತ್ತೇನೆ .

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!