Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗೆ ಕೃಷಿ ಕೂಲಿಕಾರರ ಸಂಘದ ಬೆಂಬಲ| ಮಂಡ್ಯದಲ್ಲಿ ಸ್ಟಾರ್ ಚಂದ್ರು ಗೆಲ್ಲಿಸಲು ಪುಟ್ಟಮಾದು ಮನವಿ

ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸಿರುವ ಕೋಮುವಾದಿ ಬಿಜೆಪಿ ಹಾಗೂ ಜಾತಿವಾದಿ ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಲಾಗುವುದು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ನಿಯಂತ್ರಿಸುವುದಕ್ಕೆ ಬದಲಾಗಿ ಬೆಲೆ ನಿಯಂತ್ರಣ ಕಾನೂನನ್ನು ಕಿತ್ತೆಸೆದು ರಾಜ್ಯದ ಜನರಿಗೆ ಹೆಚ್ಚಿನ ಅಕ್ಕಿ ಕೊಡದೆ ಕೂಲಿಕಾರರಿಗೆ ಮಕ್ಕಳಿಗೆ ನಿತ್ಯದ ಊಟ ಕೂಡ ಕಷ್ಟಕರವಾದಂತೆ ಮಾಡಿದ, ಪಡಿತರ ಚೀಟಿಯಲ್ಲಿ ಜೀವನಾವಶ್ಯಕ ವಸ್ತುಗಳನ್ನು ಹಗ್ಗದ ಬೆಲೆಗೆ ಒದಗಿಸಲು ನಿರಾಕರಿಸಿದೆ ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ಧೇವೆ ಎಂದು ತಿಳಿಸಿದರು.

ಮೋದಿ ಸರ್ಕಾರವು ದೇಶದ ಕೃಷಿಯನ್ನೇ ನಾಶಪಡಿಸಲು ಕೋರೊನಾ ಸಂದರ್ಭ ಬಳಸಿ ಜಾರಿಗೆ ತಂದಿದ್ದ ಮೂರು ಕಾನೂನುಗಳ ವಿರುದ್ಧ ದೇಶದ ರೈತರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಹೋರಾಟ ಮಾಡಬೇಕಾಯಿತು. ರೈತರನ್ನು ಭಯೋತ್ಪಾದಕರೆಂದು ಕರೆದು ಲಾಟಿ ಅಶ್ರುರ್ವಾಯು ಜಲ ತರಂಗಿ ಜೆಸಿಬಿ ಮುಳ್ಳಿನ ಮೊಳೆಗಳನ್ನು ಒಡೆದು ಅರಿ ಬಿಡಲಾಯಿತು, ಇದರಿಂದ 700 ರಕ್ಕೂ ಹೆಚ್ಚು ರೈತ ಕೂಲಿಕಾರರು ಪ್ರಾಣ ತೆರಬೇಕಾಯಿತು. ಇಂತಹ ರೈತ ವಿರೋಧಿ ಬಿಜೆಪಿಯನ್ನು ದೇಶದಿಂದ ತೊಲಗಿಸಬೇಕೆಂದರು.

ಸರ್ಕಾರಿ ಸ್ವತ್ತುಗಳ ಮಾರಾಟ

ಕೂಲಿಕಾರರಿಗೆ ಬಡವರಿಗೆ ದೇಶದ ಭೂಸಂಪತ್ತನ್ನು ಅರಣ್ಯವನ್ನು ವಿನಯೋಗಿಸುವ ಬದಲು ಬೃಹತ್ ಬಂಡವಾಳಗಾರರಿಗೆ ದಾನ ಮಾಡುತ್ತಿದೆ ರೈಲ್ವೆ ರಸ್ತೆ ಸಾರಿಗೆ ಗಳನ್ನು ಖಾಸಗಿ ಕರಣ ಮಾಡಿ ಕೂಲಿಕಾರರ ಪ್ರಯಾಣವನ್ನು ಕಠಿಣ ಮಾಡಿದೆ ಬಿಜೆಪಿ ಸರ್ಕಾರ ಒಂದೇ ಭಾರತ್ ರೈಲುಗಳು ಯಾರಿಗಾಗಿ? ಕೂಲಿಕಾರರಿಗಂತು ಅಲ್ಲವೇ ಅಲ್ಲ. ಇಂತಹ ಬೃಹತ್ ಕಂಪನಿಗಳನ್ನು ಸರ್ಕಾರದ ಇಲಾಖೆಗಳನ್ನು ಬಳಸಿ ಬೆದರಿಸಿ ಬೃಹತ್ ಕಂಟ್ರ್ಯಾಕ್ಟ್ ನೀಡಲು ಲಂಚವಾಗಿ ಹಲವು ಸಾವಿರ ಕೋಟಿಗಳನ್ನು ಚುನಾವಣಾ ಬಾಂಡ್ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಕೂಲಿಕಾರರು ಹಲವಾರು ಗ್ರಾಮ ದೇವತೆಗಳನ್ನು ಅವರ ಮನೆ ದೇವರುಗಳನ್ನು ಪೂಜಿಸುತ್ತಾರೆ. ಆದರೆ ಈ ಎಲ್ಲಾ ದೇವರನ್ನು ಪಕ್ಕಕ್ಕಿಟ್ಟು ಒಂದೇ ದೇವರನ್ನು ಎಲ್ಲರ ಮೇಲೆ ಏರಿ ಅದನ್ನು ವಿಜೃಂಭಿಸುವಂತೆ ಪ್ರಭಾವಿಸುತ್ತಿದೆ ಕೂಲಿಕಾರರಿಗೆ ದಿನ ನಿತ್ಯದ ದುಡಿಮೆಯೇ ಒಂದು ಆಧಾರ ಹಾಗಾಗೆ ಕೋಮು ದ್ವೇಷದ ಕಿಚ್ಚು ಹೆಚ್ಚಿಸಲು ಹಲವಾರು ಸುಳ್ಳುಗಳನ್ನು ಸೃಷ್ಟಿಸಿ ಕೋಮು ಗಲಭೆ ಹಬ್ಬಿಸಲು ಪ್ರಯತ್ನಿಸಿದೆ ಕೂಲಿಕಾರರು ಅವರ ಕುಟುಂಬದವರು ಪಟ್ಟಣ ನಗರದಲ್ಲಿ ದುಡಿದು ನಾಲ್ಕು ಕಾಸುಗಳಿಸುವುದಕ್ಕೂ ಅಡ್ಡಿಯಾಗಿದ್ದು ಪ್ರಾಣಕ್ಕೂ ಕುತ್ತುಬರುತ್ತದೆ ಎಂದರು.

ಸಂವಿಧಾನ ಉಳಿಯಬೇಕು. ಪ್ರಜಾಪ್ರಭುತ್ವ ರಕ್ಷಣೆ ಆಗಬೇಕು ಪ್ರತಿದಿನವೂ ಕೂಲಿಕಾರರಿಗೆ ಕಾರ್ಮಿಕರಿಗೆ ಹೆಚ್ಚೆಚ್ಚು ಸಂಕಷ್ಟಗಳು ಸುತ್ತಿಕೊಳ್ಳುತ್ತಿವೆ ಅದೇ ಸಮಯದಲ್ಲಿ ಇವುಗಳ ಪರಿಹಾರಕ್ಕೆ ಹೋರಾಟ ಚಳುವಳಿ ಮಾಡುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ ಚುನಾವಣೆ ಸಂದರ್ಭದಲ್ಲಿ ಜೈಲಿಗೆ ಹಾಕಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಹನುಮೇಶ್, ಬಿ.ಎಂ.ಶಿವಮಲ್ಲಯ್ಯ, ಅಮಾಸಯ್ಯ, ಆರ್.ರಾಜು ಶುಭಾವತಿ ಹಾಗೂ ರಾಮಣ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!