Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಸಾಪ ಕಛೇರಿಯಲ್ಲಿ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನಾಚರಣೆ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಾಗಮಂಗಲ ಘಟಕದ ವತಿಯಿಂದ ಕಸಾಪ ಕಛೇರಿಯಲ್ಲಿ “ಜ್ಞಾನ ಪೀಠ ಪುರಸ್ಕೃತ ವರಕವಿ ದ.ರಾ. ಬೇಂದ್ರೆಯವರ” ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ವರಕವಿ ದ.ರಾ. ಬೇಂದ್ರಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಕಸಾಪ ಅಧ್ಯಕ್ಷ ಬಸವೇಗೌಡ ಖರಡ್ಯ ಮಾತನಾಡಿ 1896ನೇ ಜನವರಿ 31ರಂದು ಧಾರವಾಡದಲ್ಲಿ ಜನಿಸಿದ ಬೇಂದ್ರೆಯವರು ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಅಭಿರುಚಿ ರೂಢಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಎರಡನೆಯ ಜ್ಞಾನ ಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಶ್ರೇಷ್ಠ ಸಾಹಿತಿಗಳಾಗಿದ್ದಾರೆ. ಇವರು 27 ಕವನ ಸಂಕಲನ 14 ನಾಟಕಗಳು,10ವಿಮಶಾ೯ ಕೃತಿಗಳು, ನಿರಾಭರಣ ಸುಂದರಿ ಎಂಬ ಪ್ರಸಿದ್ಧ ಕಾದಂಬರಿಯನ್ನು ಬರೆದಿದ್ದಾರೆ.

ಶ್ರಾವಣ ಬಂತು ಶ್ರಾವಣ…,ನೀ ಹೀಂಗ ನೋಡಬ್ಯಾಡ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ…. ಕುರುಡು ಕಾಂಚಾಣ ಕುಣಿಯುತಲಿತ್ತು.. ಮುಂತಾದ ಪ್ರಸಿದ್ಧ ಕವನಗಳನ್ನು ರಚಿಸಿ ಜನರ ನಾಲಿಗೆಯ ತುದಿಯಲ್ಲಿ ನೆಲೆಸಿದ್ದಾರೆ.

“ಸರಸವೇ ಜೀವನ, ವಿರಸವೇ ಮರಣ.ಸಮರಸವೇ ಜೀವನ.” ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು.ತಿಳಿದು ಬದುಕಬೇಕು.
“ಹಚ್ಚುವುದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲಾ, ಆರಿಸುವುದಾದರೆ ನೋವನ್ನು ಆರಿಸು, ನಗುವನ್ನಲ್ಲ.” ಮುಂತಾದ ಮೌಲ್ಯಯುತ ಸಂದೇಶಗಳನ್ನು ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಕೌಂಟ್ ಆಫೀಸರ್ ಕೋಮಲ, ಪಿಡಿಒ ಜ್ಯೋತಿ. ನಾಗರಾಜು, ಕಸಾಪ ಪದಾಧಿಕಾರಿಗಳಾದ ಪರಮೇಶ್, ಡಿ.ಪಿ.ಗಿರೀಶ, ವಿವೇಕಾನಂದ, ಕೇಶವ ದೇವ, ಶಿವಣ್ಣ, ಮುಂತಾದವರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!