Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಳೆಯ ಅಬ್ಬರ : KRS ನೀರಿನ ಮಟ್ಟ ಒಂದೇ ದಿನದಲ್ಲಿ 2 ಅಡಿ ಹೆಚ್ಚಳ

ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ನ ನೀರಿನ ಮಟ್ಟ ಒಂದೇ ದಿನದಲ್ಲಿ 2 ಅಡಿ ಹೆಚ್ಚಳವಾಗಿದೆ. ಅಂದರೆ 90.30 ಅಡಿಗೆ ತಲುಪಿದೆ. ನಿನ್ನೆ ಅಣೆಕಟ್ಟೆಯ ನೀರಿನ ಮಟ್ಟ 88.40 ದಾಖಲಾಗಿತ್ತು.

ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿದೆ.
ಮಳೆಯ ಅಬ್ಬರದಿಂದ ಇಂದು ಕೆಆರ್‌ಎಸ್‌ಗೆ 13,437 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ.

ಈ ವರ್ಷದಲ್ಲಿ ಸದ್ಯ ಇದೇ ಅಧಿಕ ಪ್ರಮಾಣದ ಒಳಹರಿವಾಗಿದೆ.
ನಿನ್ನೆ 3,856 ಕ್ಯೂಸೆಕ್‌ ಒಳಹರಿವು ಇತ್ತು. ಕಳೆದ 24 ಗಂಟೆಯ ಅವಧಿಯಲ್ಲಿ 10 ಸಾವಿರ ಕ್ಯೂಸೆಕ್ ಗಿಂತ ಒಳಹರಿವು ಹೆಚ್ಚಳವಾಗಿದೆ.

ಅಲ್ಲದೇ ಒಂದೇ ದಿನದಲ್ಲಿ ಡ್ಯಾಂ ಹರಿದು ಬಂದಿರುವ 1 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ.

49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ ಈಗ 16.118 ಟಿಎಂಸಿ ಸಂಗ್ರಹವಾಗಿದೆ.

ನಿನ್ನೆ 15.007 ಟಿಎಂಸಿ ನೀರು ಇತ್ತು.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಈಗ ನೀರಿನ ಮಟ್ಟವು 90.30 ಅಡಿಗೆ ತಲುಪಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ