Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 32ನೇ ರಾಜ್ಯಮಟ್ಟದ ಕವಿಕಾವ್ಯ ಮೇಳ: ಪ್ರಶಸ್ತಿಗಳ ಪ್ರದಾನ

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಇವರ ಸಹಯೋಗದಲ್ಲಿ ಕರ್ನಾಟಕ ರತ್ನ ಡಾ.ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ 32ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಓ ಗುಣವಂತ ಕಿರುಚಿತ್ರ ಬಿಡುಗಡೆ, ನಾಯಕ ವಿಷ್ಣುತೇಜಾ ಅವರಿಗೆ ರೆಬಲ್ ರೇಜಿಂಗ್‌ಸ್ಟಾರ್ ಬಿರುದು ಪ್ರದಾನ ಹಾಗೂ ಸಾಹಿತಿ ಹಾಗೂ ಪತ್ರಕರ್ತ ಡಾ.ಶಂಕರ ಹಲ್ಲೇಗೆರೆ ಅವರ ಪರಿಸರ ಪಲ್ಲವಿ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಜ.21ರ ಭಾನುವಾರ ನಗರದ ರೈತ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ತಿಳಿಸಿದರು.

ಮಂಡ್ಯದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 32ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮೈಸೂರು ವಿವಿಯ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜೇಗೌಡ ಉದ್ಘಾಟಿಸಲಿದ್ದು, ಸನಾತನ ಧರ್ಮ ಜಾಗರಣ ಮಿಷನ್ ಮುಖ್ಯಸ್ಥ ಡಾ.ಆರ್.ಎಸ್.ರಾಜು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ.ಹೆಚ್.ಎಸ್.ಮುದ್ದೇಗೌಡ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸಲಿದ್ದು, ಶಾಸಕ ಗಣಿಗ ರವಿಕುಮಾರ್‌ಗೌಡ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಹಿರಿಯ ಪತ್ರಕರ್ತ, ಸಾಹಿತಿ ಡಾ.ಹಲ್ಲೇಗೆರೆ ಶಂಕರ್ ಕವಿಕಾವ್ಯ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಕನ್ನಡರತ್ನ ಪ್ರಶಸ್ತಿ ಪ್ರದಾನವನ್ನು ರೈತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಯು.ಸಿ.ಶೇಖರ್ ಮಾಡಲಿದ್ದಾರೆ. ಡಾ.ಪುನೀತ್ ರಾಜಕುಮಾರ ಪುರಸ್ಕಾರವನ್ನು ವಕೀಲ ಹಾಗೂ ನಿರ್ಮಾಪಕ ಎಸ್.ಕೆ.ಮೋಹನ್ ಕುಮಾರ್ ನೆರವೇರಿಸಲಿದ್ದು, ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ನಟ ವಿಷ್ಣುತೇಜ ಅವರಿಗೆ ಬಿರುದು ಪ್ರದಾನ ಮಾಡಲಿದ್ದಾರೆ. ಸಮಾಜಸೇವಕ ಆರ್‌ಟಿಒ ಮಲ್ಲಿಕಾರ್ಜನ್ ಅಭಿನಂದನೆ ಸಲ್ಲಿಸಲಿದ್ದು, ಗೋಸಂರಕ್ಷಕ ಡಾ.ಮಹೇಂದ್ರ ಮನೋತ್ ಓ ಗುಣವಂತ ಕಿರುಚಿತ್ರ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕಿರು ಚಿತ್ರನಟ ವಿಷ್ಣುತೇಜಾ, ನಟಿ ಅನಿತಾ ರಾಣಿ ಭಾಗವಹಿಸಲಿದ್ದು, ಸುಗ್ಗಿ ಸಂಭ್ರಮ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ಕೇಂದ್ರೀಯ ಕಿಸಾನ್ ಕಮಿಟಿ ನಿರ್ದೇಶಕ ಡಾ.ಆರ್.ಎಸ್.ರಾಜು, ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಡಾ.ಪುನೀತ್ ರಾಜಕುಮಾರ್ ಪ್ರಶಸ್ತಿ, ಸಾಹಿತ್ಯ, ಶಿಕ್ಷಣ, ಸಂಘಟನೆ, ಸಮಾಜಸೇವೆ, ರಂಗಭೂಮಿ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಗುವುದು ಎಂದರು.

32ನೇ ಸುಗ್ಗಿ ಸಂಭ್ರಮ ರಾಜ್ಯ ಮಟ್ಟದ ಕವಿಕಾವ್ಯ ಮೇಳ ನಡೆಯಲಿದ್ದು, ಮೇಳಕ್ಕೆ ಕವಿಯತ್ರಿ ಡಾ.ಪದ್ಮ ಶ್ರೀನಿವಾಸ್ ಚಾಲನೆ ನೀಡಲಿದ್ದು, ಕವಿ ಹಲ್ಲೆಗೆರೆ ಶಂಕರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಗಲ ಶಿವಣ್ಣ, ಕರ್ನಾಟಕ ಯುವ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ನಾರಾಯಣ್ ಭಾಗವಹಿಸಲಿದ್ದು, ಸುಗ್ಗಿ ಸಂಭ್ರಮ ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿಗೆ ಡಿ.ಲೋಕೇಶ್ ಕಳಲೆ, ಪೂರ್ಣಚಂದ್ರ, ಹಿಮಂತರಾಜು, ನಾಗರತ್ನ, ವಿಜಯಲಕ್ಷ್ಮಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಓ ಗುಣವಂತ ಚಿತ್ರತಂಡದ ಡಾ.ಚಂದ್ರಚೂಡೇಶ್ವರ ರಾಜು, ವಿಷ್ಣುತೇಜ, ಹಾವೇರಿ ನೇತ್ರಾವತಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!