Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ- ಜೆಡಿಎಸ್ ಮೈತ್ರಿ| ಸ್ವತಂತ್ರವಾಗಿರಲು ತಿರ್ಮಾನಿಸಿದ ಕೇರಳ ಜೆಡಿಎಸ್ ಘಟಕ

ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರ ನಿರ್ಧಾರದ ಬೆನ್ನಲ್ಲೇ ಕೇರಳ ರಾಜ್ಯ ಜೆಡಿಎಸ್‌ ಘಟಕವು ಸ್ವತಂತ್ರವಾಗಿ ಇರಲು ನಿರ್ಧರಿಸಿದೆ ಎಂದು ಕೇರಳ ವಿದ್ಯುತ್ ಇಲಾಖೆ ಸಚಿವ ಕೆ ಕೃಷ್ಣನ್‌ಕುಟ್ಟಿ ಭಾನುವಾರ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಕೇರಳ ವಿದ್ಯುತ್ ಇಲಾಖೆ ಸಚಿವ ಕೆ ಕೃಷ್ಣನ್‌ಕುಟ್ಟಿ, ನಾನು ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಕರ್ನಾಟಕದಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಿ ಬಿಜೆಪಿಯೊಂದಿಗೆ ಮೈತ್ರಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

ಮೈತ್ರಿ ಮಾಡಿದ್ದು ಸರಿಯಲ್ಲ ಎಂದು ನಾವು ಹೇಳಿದ್ದೇವೆ. ನಾವು ಜೆಡಿಎಸ್‌ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ ಮತ್ತು ನಾವು ಸ್ವತಂತ್ರವಾಗಿ ಉಳಿಯುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ನಾವು ಇಲ್ಲಿ ಸಮಿತಿ ಸಭೆ ನಡೆಸಿದ್ದೇವೆ ಮತ್ತು ಸ್ವತಂತ್ರವಾಗಿ ನಿಲ್ಲಲು ನಿರ್ಧರಿಸಿದ್ದೇವೆ. ಎಲ್ಲರೂ ಅದನ್ನು ಒಪ್ಪಿದ್ದಾರೆ ಮತ್ತು ಅದು ಸರಿಯಾದ ನಿಲುವು ಎಂದು ಕೆ ಕೃಷ್ಣನ್‌ಕುಟ್ಟಿ ಹೇಳಿದ್ದಾರೆ.

ರಾಜ್ಯದಲ್ಲಿ ಆಡಳಿತಾರೂಢ ಸಿಪಿಐ(ಎಂ) ರಾಷ್ಟ್ರಮಟ್ಟದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿರುವ ಜೆಡಿಎಸ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಟೀಕಿಸುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಮ್ಮತಿಸಿದ್ದಾರೆ ಎಂದು ದೇವೇಗೌಡರು ಇತ್ತೀಚೆಗೆ ಹೇಳಿದ್ದರು. ಇದನ್ನು ತಳ್ಳಿಹಾಕಿದ್ದ ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಇದು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್, ಎಡರಂಗದ ಜೊತೆ ಬಲವಾಗಿ ನಿಲ್ಲುತ್ತೇವೆ ಎಂದು ಜೆಡಿಎಸ್‌ನ ರಾಜ್ಯ ಘಟಕ ಸ್ಪಷ್ಟಪಡಿಸಿರುವುದರಿಂದ ಕೃಷ್ಣನ್‌ಕುಟ್ಟಿ ಅವರನ್ನು ಕೇರಳ ಸಂಪುಟದಿಂದ ವಜಾಗೊಳಿಸುವ ಅಗತ್ಯವಿಲ್ಲ ಎಂದು  ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!