Monday, November 23, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಹುಡುಗರ ‘ಕಿರಿಕ್’ ಸಿನಿಮಾ ಮೇ 23ಕ್ಕೆ ಬಿಡುಗಡೆ

ನಾಗಮಂಗಲ ತಾಲೂಕಿನ ಪ್ರತಿಭೆಗಳೇ ನಿರ್ದೇಶಿಸಿ ನಿರ್ಮಿಸಿ ನಟಿಸಿರುವ ಉತ್ತಮ ಕಥೆಯನ್ನೊಳಗೊಂಡ ಚಲನಚಿತ್ರ ಕಿರಿಕ್ ಇದೇ ತಿಂಗಳು ಮೇ 23ಕ್ಕೆ ತೆರೆಗೆ ಬರಲಿದ್ದು ಕನ್ನಡ ಮನಸ್ಸುಗಳು ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ವೀಕ್ಷಿಸಿ, ಅಪ್ಪಟ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ಮನವಿ ಮಾಡಿದರು.

ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಈ ಚಿತ್ರದ ನಿರ್ದೇಶಕರು ಎ ನಾಗತಿಹಳ್ಳಿ ಗ್ರಾಮದ ಗಂಗಾಧರ ಗೌಡ, ನಿರ್ಮಾಪಕ ನಾಗಮಂಗಲ ಪಟ್ಟಣದ ಹರೀಶ್ ಶೆಟ್ಟಿ, ನಾಯಕ ನಟ ನಾಗಮಂಗಲ ಸುಭಾಷ್ ನಗರದ ರವಿ ಶೆಟ್ಟಿ, ಖಳನಟ ರಾಮಿಗೌಡ ಹಾಗೂ ವಿಶೇಷ ಪಾತ್ರಗಳಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಪ್ರಸನ್ನ, ಮನ್ಮುಲ್ ನಿರ್ದೇಶಕ ಸುಖಧರೆ ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದು ಸ್ಥಳೀಯ ಪ್ರವಾಸಿ ತಾಣಗಳಲ್ಲಿಯೇ ಚಿತ್ರೀಕರಣಗೊಂಡಿದೆ ಎಂದರು.

ಇಡೀ ಚಿತ್ರತಂಡ ಚಿತ್ರದ ಯಶಸ್ಸಿಗೆ ಅವಿರತ ಶ್ರಮಿಸುತ್ತಿದೆ ಕಲಾವಿದರ ಶ್ರಮಕ್ಕೆ ಸಾರ್ಥಕತೆ ಸಿಗಬೇಕೆಂದರೆ ವೀಕ್ಷಕರ ಪ್ರೋತ್ಸಾಹ ಅಗತ್ಯವಾಗಿದ್ದು ತಾವೆಲ್ಲರೂ ಆಶೀರ್ವದಿಸಬೇಕೆಂದರು. ರೀಲ್ಸ್ ಮಾಡುವವರಿಗೆ ಸಿಗುವ ಪ್ರೋತ್ಸಾಹ ರಿಯಲ್ ಕಲಾವಿದರಿಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸೀರುಂಡೆ ರಘು ಮೂವತ್ತು ಸೆಕೆಂಡ್ನ ರೀಲ್ಸ್ ಮಾಡುವವರಿಗೆ ಬೆನ್ನು ತಟ್ಟುತ್ತಿರುವ ಜನ ಎರಡೂವರೆ ಗಂಟೆಗಳ ಕಾಲದ ಮನೋರಂಜನೆ ನೀಡುವ ಕಲಾವಿದರಿಗೆ ಮನ್ನಣೆ ನೀಡುತ್ತಿಲ್ಲ ಎಂಬುದು ನೋವಿನ ಸಂಗತಿ, ಈ ಪರಿಪಾಠ ಬದಲಾಗಬೇಕಿದೆ ಎಂದರು.

ಛಾಯಾಗ್ರಹಣ ನಿರ್ದೇಶಕ ಕೀರ್ತಿ ಮಾತನಾಡಿ, ತೆರೆಯ ಮುಂದೆ ಹಾಗೂ ತೆರೆಯ ಹಿಂದೆ ಇರುವ ಇಡೀ ಚಿತ್ರತಂಡವೇ ಮಂಡ್ಯ ಜಿಲ್ಲೆಯವರು ಅದರಲ್ಲೂ ಬಹುಪಾಲು ನಾಗಮಂಗಲದವರೆ ಎಂಬುದು ಹೆಮ್ಮೆಯ ಸಂಗತಿ, ಈ ಚಿತ್ರ ಜನರ ಮನಸ್ಸನ್ನು ಗೆಲ್ಲುತ್ತದೆಂಬುದು ನಮ್ಮ ನಂಬಿಕೆಯಾಗಿದ್ದು ನಿಮ್ಮ ಪ್ರೋತ್ಸಾಹ ಮುಂದೆ ಹಲವಾರು ಉತ್ತಮ ಚಿತ್ರಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲು ಮುನ್ನುಡಿಯಾಗುತ್ತದೆ ಎಂದರು.

ಚಿತ್ರದ ನಾಯಕ ನಟ ರವಿಶೆಟ್ಟಿ ಮಾತನಾಡಿ ಒಂದು ಉತ್ತಮ ಚಿತ್ರವನ್ನು ನಿರ್ಮಿಸಿ ನಿಮಗೆ ನೀಡುತ್ತಿದ್ದೇವೆ ನಮ್ಮನ್ನು ಹರಸಿ ಬೆಳೆಸಬೇಕೆಂದು ಮನವಿ ಮಾಡಿದರು ಹಾಗೆಯೇ ಚಿತ್ರವನ್ನು ನಿರ್ಮಿಸಲು ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಹರೀಶ್ ಶೆಟ್ಟಿ, ಕೆಂಪೇಗೌಡ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ