Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಮನವಿ

ಹಾಲಿನದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಿಸುವಂತೆ ಕೋರಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.

ಸದ್ಯ ಮುಂದಿನ ತಿಂಗಳು ಮೇ 1 ರಿಂದಲೇ ಹಾಲಿನದರವು ಹೆಚ್ದಾಗುವ ಸಾಧ್ಯತೆ ಇದೆ. ಹಾಲಿನ ದರವನ್ನು ಅಮೂಲ್ ಸೇರಿದಂತೆ ಇತರ ಖಾಸಗಿ ಸಂಸ್ಥೆಗಳು ಹಾಲಿನ ದರವನ್ನು ಹೆಚ್ದಿಸಿದೆ.

ನಂದಿನಿ ಹಾಲಿನ ದರಕ್ಕಿಂತ, ಇತರ ಖಾಸಗಿ ಸಂಸ್ಥೆಗಳ ಹಾಲಿನ ದರವು ಪ್ರತಿ ಲೀಟರ್ ಗೆ 8 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಆದ್ದರಿಂದ ನಂದಿನಿ ಹಾಲಿನ ದರವನ್ನು ಪರಿಷ್ಖರಿಸಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ.

ಈ ಬಾರಿಯಾದರೂ ಸರ್ಕಾರ 3 ರೂ ದರ ಏರಿಕೆಗೆ ಒಪ್ಪಿಗೆ ನೀಡಿದರೆ, ಅದರಲ್ಲಿ ಎರಡು ರೂಪಾಯಿ ರೈತರಿಗೆ ಮತ್ತು ಒಂದು ರೂಪಾಯಿ ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಆಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.

ಸಾರಿಗೆ, ಪೆಟ್ರೋಲ್ ದರ, ಜೀವನ ಮಟ್ಟ, ನಿತ್ಯ ಬಳಸುವ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ರೈತರಿಗೂ ಜೀವನ ಕಷ್ಟಕರವಾಗಿದೆ. ಈ ಹಾಲಿನ ದರದ ಏರಿಕೆಯಿಂದಾಗಿ ಒಂದಷ್ಟು ಸುಧಾರಿಸಬಹುದು.

ಆದರೆ, ಈಗಾಗಲೇ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಇದರ ಜೊತೆಗೆ ಹಾಲಿನ ದರದ ಏರಿಕೆಯೂ ಕೂಡ ಜನ ಸಾಮಾನ್ಯರಿಗೆ ಹೊರೆಯಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!