Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೊಕ್ಕರೆ ಬೆಳ್ಳೂರು : ವರ್ಷಾರಂಭದಲ್ಲೆ ಪೆಲಿಕಾನ್ ಸಾವು

ವರದಿ : ಎ. ಜೆ. ವಿಮಯ್ 

ಭಾರತ ನಗರ ಸಮೀಪದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ 2023ರ ವರ್ಷದ ಮೊದಲ ದಿನವೇ ಪೆಲಿಕಾನ್ ಕೊಕ್ಕರೆಯೊಂದು ಸಾವನ್ನಪ್ಪಿದೆ.

ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಮರದ ಮೇಲಿದ್ದ ಪೆಲಿಕಾನ್ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಮರದಿಂದ ಕೆಳಗೆ ಬಿದ್ದಿದೆ. ತಕ್ಷಣವೇ ಪೆಲಿಕಾನ್ ನನ್ನು ಗಮನಿಸಲಾಗಿ ಅದು ಆ ವೇಳೆಗ ಆಗಲೇ ಸಾವನ್ನಪ್ಪಿತ್ತು.

ಕಳೆದ ಒಂದು ವಾರದ ಹಿಂದೆಯೂ ಕೂಡ ಪೆಲಿಕಾನ್ ಒಂದು ಅಸ್ವಸ್ಥಗೊಂಡು ಮರದಿಂದ ಕೆಳಗೆ ಬಿದ್ದಿದ್ದು ಅದನ್ನು ತಕ್ಷಣವೇ ಪಕ್ಷಿಪಾಲನ ಕೇಂದ್ರಕ್ಕೆ ಕೊಂಡೊಯ್ದು ಕೊಡಿಸಲಾಗಿ ಸದ್ಯ ಚೇತರಿಸಿಕೊಳ್ಳುತ್ತಿದೆ.

ಕಳೆದ ಆರೇಳು ವರ್ಷಗಳಿಂದ ನೂರಾರು ಪೆಲಿಕಾನ್ ಗಳು ಸಾವಿಗೀಡಾಗಿದ್ದು, ಪೆಲಿಕಾನ್ ಗಳ ಸಾವಿಗೆ ಜಂತು ಹುಳಗಳು ಕಾರಣವೆಂದು ಭಾವಿಸಲಾಗಿತ್ತು, ಆದರೂ ಕೂಡ ನಿರಂತರವಾಗಿ ಹಕ್ಕಿಗಳ ಸಾವಿನ ಸರಣಿ ಮುಂದುವರೆದಿದೆ. ಪೆಲಿಕಾನ್ ಗಳ ಸಾವಿಗೆ ನಿಖರವಾದ ಕಾರಣ ತಿಳಿದು ಪೆಲಿಕಾನ್ ಗಳ ಸಾವನ್ನು ತಪ್ಪಿಸಬೇಕು ಎಂದು ಪೆಲಿಕಾನ್ ಅಭಿಮಾನಿಗಳು ಹಾಗೂ ಪಕ್ಷಿ ಪ್ರಿಯರು ಒತ್ತಾಯಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!