Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಕ್ತ ವಿ.ವಿ.ಯ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸ್ತುತ 2022-23 ನೇ ಜನವರಿ ಆವೃತ್ತಿಯ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದೆ.

ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ., ಬಿ.ಕಾಂ, ಬಿ.ಸಿ.ಎ, ಬಿ.ಎಸ್ಸಿ, ಬಿಎಲ್.ಐ.ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಬಿ.ಎ, ಎಂ.ಎಸ್ಸಿ., ಪಿ.ಜಿ ಡಿಪ್ಲೋಮಾ ಪ್ರೋಗ್ರಾಮ್., ಸರ್ಟಿಫಿಕೇಟ್ ಫ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. (ಬಿ.ಎಡ್.ಗೆ ಸಿ.ಇ.ಟಿ ಪರೀಕ್ಷೆಯ ಮುಖಾಂತರ ಪ್ರವೇಶಾತಿ ಇರುತ್ತದೆ.)

ಪ್ರಥಮ ವರ್ಷದ ಕೋರ್ಸ್‍ಗಳ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ 31 ಮಾರ್ಚ್ 2023 ರಂದು ಕಡೆಯ ದಿನಾಂಕವಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಅಧಿಕೃತ  ವೆಬ್‍ಸೈಟ್ www.ksoumysore.ac.in ನಲ್ಲಿ ಪ್ರವೇಶಾತಿ ಶುಲ್ಕ, ವಿದ್ಯಾರ್ಹತೆ ಹಾಗೂ ವಿತರಣಾ ಪುಸ್ತಕ ಮತ್ತು ಆನ್‍ಲೈನ್‍ನಲ್ಲಿ ಪ್ರವೇಶಾತಿ ಅರ್ಜಿ ಮಾಡಿದ ನಂತರ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9741990284, 9483020336, 9902958732 ಮತ್ತು 9740984640 ಅನ್ನು ಸಂಪರ್ಕಿಸಬಹುದೆಂದು ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!